ರಾಹುಲ್ ಮೋದಿ ಜೊತೆಯ ಸಂಬಂಧವನ್ನು ಬಹಿರಂಗಪಡಿಸಿದ ಶ್ರದ್ಧಾ ಕಪೂರ್

First Published | Mar 2, 2024, 4:07 PM IST

ಬಾಲಿವುಡ್‌ ನಟಿ ಶ್ರದ್ಧಾ ಕಪೂರ್ (Shraddha Kapoor) ತಮ್ಮ ರೂಮರ್ಡ್‌  ಬಾಯ್ ಫ್ರೆಂಡ್ ರಾಹುಲ್ ಮೋದಿ (Rahul Mody) ಅವರ ಜೊತೆ ಮೊದಲ ಬಾರಿಗೆ  ಅಧಿಕೃತವಾಗಿ ಕಾಣಿಸಿಕೊಂಡಿದ್ದಾರೆ.  ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ (Anant Ambani and Radhika Merchant) ಅವರ ವಿವಾಹಪೂರ್ವ ಉತ್ಸವಗಳಲ್ಲಿ ಭಾಗವಹಿಸಲು ಈ ಜೋಡಿ ಜೊತೆಯಾಗಿ ಆಗಮಿಸಿರುವ ವೀಡಿಯೋ ಮತ್ತು ಫೋಟೋಗಳು ಸಖತ್‌ ವೈರಲ್‌ ಆಗಿವೆ.

ಶ್ರದ್ಧಾ ಕಪೂರ್ ತನ್ನ ರೂಮರ್ಡ್‌ ಬಾಯ್ ಫ್ರೆಂಡ್ ರಾಹುಲ್ ಮೋದಿ ಜೊತೆಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಆಚರಣೆಯಲ್ಲಿ ಪಾಲ್ಗೊಳ್ಳಲು ಜಾಮ್‌ನಗರಕ್ಕೆ ಆಗಮಿಸಿದ್ದಾರೆ. 

ಈ ಮೂಲಕ ಶ್ರದ್ಧಾ ಕಪೂರ್ ಮತ್ತು ರಾಹುಲ್ ಮೋದಿ ಜೋಡಿ ಮೊದಲ ಬಾರಿಗೆ ಅಧಿಕೃತವಾಗಿ ಜೊತೆಯಾಗಿ ಕಾಣಿಸಿಕೊಂಡಿದ್ದು ಇವರ ಸಂಬಂಧಕ್ಕೆ ಪುಷ್ಠಿ ನೀಡಿದೆ. 
 

Tap to resize

ಇವರಿಬ್ಬರು ಗುಜರಾತ್‌ಗೆ ತೆರಳುವ ಮೊದಲು ಮುಂಬೈನ ಖಾಸಗಿ ಟರ್ಮಿನಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರದ್ಧಾ ಮತ್ತು ರಾಹುಲ್ ಬಿಳಿ ಮತ್ತು ನೀಲಿ ಬಣ್ಣದ ಡೆನಿಮ್‌ನಲ್ಲಿ ಒಂದೇ ತರದ ಬಟ್ಟೆಗಳನ್ನು ಆರಿಸಿಕೊಂಡಿದ್ದರು.
 

ವಿಮಾನ ನಿಲ್ದಾಣದಲ್ಲಿ ಅವರು  ಜೊತೆಯಾಗಿ ಕಾಣಿಸಿಕೊಂಡ ನಂತರ ಪಾಪರಾಜಿ ವೀಡಿಯೊಗಳಲ್ಲಿ, ಶ್ರದ್ಧಾ ಮತ್ತು ರಾಹುಲ್ ಈವೆಂಟ್ ಸ್ಥಳಕ್ಕೆ ಆಗಮಿಸುತ್ತಿರುವುದನ್ನು ಗುರುತಿಸಲಾಗಿದೆ ಮತ್ತು ಇದು ಅವರ ಸಂಬಂಧದ ರೂಮರ್‌ಗಳು ನಿಜ ಎಂದು ನಂಬಲು ಕಾರಣವಾಗಿದೆ.

ಇದರ ಜೊತೆಗೆ ದಂಪತಿಯ ನಿಕಟ ಮೂಲಗಳು ಶ್ರದ್ಧಾ ಮತ್ತು ರಾಹುಲ್‌ ಸಂತೋಷದ ಮತ್ತು ಸ್ಥಿರವಾದ ಸಂಬಂಧದಲ್ಲಿದ್ದಾರೆ ಎಂದು ಹೇಳಿವೆ ಎಂದು ಇಂಡಿಯಾ ಟುಡೇ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಶ್ರದ್ಧಾ ತನ್ನ ವೈಯಕ್ತಿಕ ಜೀವನದ ಬಗ್ಗೆ ಬಾಯಿ ಮುಚ್ಚಿಕೊಂಡಿದ್ದಾರೆ ಮತ್ತುಅವರು  ಹಿಂದಿನ ಸಂಬಂಧಗಳನ್ನು ಯಾವಾಗಲೂ ಮುಚ್ಚಿಡಲು ಆಯ್ಕೆ ಮಾಡಿಕೊಂಡಿದ್ದರು.

ರಾಹುಲ್ ಜೊತೆಗಿನ ಶ್ರದ್ಧಾ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಮೂಲಕ ಇವರಿಬ್ಬರು  ಅಧಿಕೃತ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಪರಿಗಣಿಸಬಹುದು ಎಂದು  ಹತ್ತಿರದ ಮೂಲಗಳು ಅಭಿಪ್ರಾಯ ಪಟ್ಟಿವೆ.
 

ಶ್ರದ್ಧಾ ರಾಹುಲ್ ಅವರೊಂದಿಗಿನ ತನ್ನ ಸಂಬಂಧವನ್ನ  ದೃಢಪಡಿಸಿಲ್ಲ ಅಥವಾ ನಿರಾಕರಿಸಿಲ್ಲವಾದರೂ, ಇವೆಂಟ್‌ನಲ್ಲಿ ಅವರ ಜೊತೆಯಾದ ಉಪಸ್ಥಿತಿಯು ಎಲ್ಲವನ್ನು ಹೇಳುತ್ತದೆ ಮತ್ತು ಈ ಸಂಬಂಧದ ಬಗ್ಗೆ ಅಭಿಮಾನಿಗಳ ಕುತೂಹಲ ಕೆರಳಿಸಿದೆ.

Latest Videos

click me!