ಅನಂತ್- ರಾಧಿಕಾ ವಿವಾಹಕ್ಕೆ ಎನರ್ಜಿ ತುಂಬಿದ ರಿಹಾನಾ; ಒಂದು ಪ್ರದರ್ಶನದ ಸಂಭಾವನೆ ಕೇಳಿದ್ರೆ ತಲೆ ತಿರುಗುತ್ತೆ!

Published : Mar 02, 2024, 10:34 AM IST

ಜಾಮ್‌ನಗರದಲ್ಲಿ ನಡೆಯುತ್ತಿರುವ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ವಿವಾಹಪೂರ್ವ ಉತ್ಸವಗಳಲ್ಲಿ ಭಾಗವಹಿಸಿದ ಪಾಪ್ ತಾರೆ ರಿಹಾನಾ ಇದೇ ಮೊದಲ ಬಾರಿಗೆ ಭಾರತದಲ್ಲಿ ಪ್ರದರ್ಶನ ನೀಡಿದರು. ಈ ಪ್ರದರ್ಶನಕ್ಕಾಗಿ ರಿಹಾನಾ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

PREV
19
ಅನಂತ್- ರಾಧಿಕಾ ವಿವಾಹಕ್ಕೆ ಎನರ್ಜಿ ತುಂಬಿದ ರಿಹಾನಾ; ಒಂದು ಪ್ರದರ್ಶನದ ಸಂಭಾವನೆ ಕೇಳಿದ್ರೆ ತಲೆ ತಿರುಗುತ್ತೆ!

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭಗಳು ಶುಕ್ರವಾರ ಜಾಮ್ನಗರದಲ್ಲಿ ಪ್ರಾರಂಭವಾಗಿವೆ. ಇದರಲ್ಲಿ ಶಾರುಖ್ ಖಾನ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಮಾಧುರಿ ದೀಕ್ಷಿತ್, ಅನಿಲ್ ಕಪೂರ್ ಮತ್ತು ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ.

29

 ಆದರೆ, ಈ ಸಮಾರಂಭದ ತಾರೆಯಾಗಿ ಮಿಂಚಿ ಎಲ್ಲರ ಗಮನ ಸೆಳೆದಿದ್ದು, ಕಾರ್ಯಕ್ರಮಕ್ಕೆ ಎನರ್ಜಿ ತುಂಬಿದ್ದು ಮಾತ್ರ ಅಂತರರಾಷ್ಟ್ರೀಯ ಪಾಪ್ ತಾರೆ ರಿಹಾನ್ನಾ. 

39

ರಿಹಾನ್ನಾ ತನ್ನ ಅಭಿನಯದ ಮೂಲಕ ವಾತಾವರಣಕ್ಕೆ ಶಕ್ತಿ ತುಂಬಿದ್ದಲ್ಲದೆ, ತನ್ನ ಚಾರ್ಟ್-ಟಾಪ್ ಹಿಟ್‌ಗಳ ಜೊತೆಗೆ ನೃತ್ಯ ಮಾಡುವಂತೆ ಎಲ್ಲರನ್ನೂ ಆಕರ್ಷಿಸಿದಳು. 

 

49

ಈವೆಂಟ್‌ನಲ್ಲಿ ರಿಹಾನ್ನಾ ವೇದಿಕೆಯನ್ನು ಅಲಂಕರಿಸಿದಾಗ ಪ್ರೇಕ್ಷಕರಿಗೆ ರೋಮಾಂಚನಗೊಂಡರು ಮತ್ತು 'ಪೋರ್ ಇಟ್ ಅಪ್', 'ವೈಲ್ಡ್ ಥಿಂಗ್ಸ್', 'ಡೈಮಂಡ್ಸ್' ಸೇರಿದಂತೆ ಅವರ ಅತ್ಯುತ್ತಮ ಹಿಟ್‌ಗಳ ಸಂಯೋಜನೆಗೆ ಹುಚ್ಚೆದ್ದು ಕುಣಿದರು. 

59

ರಿಹಾನಾ ಭಾರತದಲ್ಲಿ ನೀಡುತ್ತಿರುವ ಮೊದಲ ಪ್ರದರ್ಶನ ಇದಾಗಿದ್ದು, ಹಸಿರು ರೇಡಿಯಂ ಬಣ್ಣದ ಗೌನ್‍ನಲ್ಲಿ ರಿಹಾನಾ ಎನರ್ಜೆಟಿಕ್ ಪರ್ಫಾರ್ಮೆನ್ಸ್ ಕೊಟ್ಟರು.
 

69

ಅಂಬಾನಿ ಕುಟುಂಬದ ಮದುವೆಯಲ್ಲಿ ಪ್ರದರ್ಶನ ನೀಡಲು ಆಕೆಯ ಶುಲ್ಕವೂ ಅಷ್ಟೇ ಚೆನ್ನಾಗಿರುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಮಾಧ್ಯಮ ಮೂಲಗಳ ಪ್ರಕಾರ, ತನ್ನ ಈ ಪ್ರದರ್ಶನಕ್ಕಾಗಿ ತೆಗೆದುಕೊಳ್ಳುತ್ತಿರುವ ಸಂಭಾವನೆ ಬರೋಬ್ಬರಿ  $ 9 ಮಿಲಿಯನ್ ಅಥವಾ 74 ಕೋಟಿ ರೂ. ಚಾರ್ಜ್ ಮಾಡಿದ್ದಾರೆ. 

 

79

2018 ರಲ್ಲಿ ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್ ಅವರ ಸಂಗೀತದಲ್ಲಿ ಪ್ರದರ್ಶನ ನೀಡಿದ್ದ ಪಾಪ್-ಸ್ಟಾರ್ ಬೆಯೋನ್ಸ್  33 ಕೋಟಿ ರೂ. ಸಂಭಾವನೆ ಪಡೆದಿದ್ದರು.

89

ಗ್ಲೋಬಲ್ ಪಾಪ್ ಐಕಾನ್ ರಿಹಾನ್ನಾ ಅವಳ ವಿಶಿಷ್ಟ ಮತ್ತು ಬಹುಮುಖ ಧ್ವನಿ ಮತ್ತು ಅವಳ ಫ್ಯಾಶನ್ ಗಾಗಿ ಹೆಸರುವಾಸಿಯಾಗಿದ್ದಾಳೆ. 

99

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಮಹೋತ್ಸವಗಳು ಮಾರ್ಚ್ 1 ರಂದು ಪ್ರಾರಂಭವಾಗಿ ಮಾರ್ಚ್ 3ರವರೆಗೆ ನಡೆಯಲಿವೆ. ಶಾರುಖ್ ಖಾನ್ ಮತ್ತು ಕುಟುಂಬ, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ, ಆಲಿಯಾ ಭಟ್ ಮತ್ತು ರಣಬೀರ್ ಕಪೂರ್, ಅರ್ಜುನ್ ಕಪೂರ್, ರಾಣಿ ಮುಖರ್ಜಿ, ಅಟ್ಲೀ ಮತ್ತು ಕುಟುಂಬ , ಮಾರ್ಕ್ ಜುಕರ್‌ಬರ್ಗ್ ಮತ್ತು ಪ್ರಿಸ್ಸಿಲ್ಲಾ ಚಾನ್ ಮದುವೆಯ ಸಂಭ್ರಮಕ್ಕೆ ಆಗಮಿಸಿದ್ದಾರೆ.

Read more Photos on
click me!

Recommended Stories