ಸೌತ್ ಸುಂದರಿ ಐಶ್ವರ್ಯ ಮೆನನ್ ಪರ್ಫೆಕ್ಟ್‌ ಫಿಗರ್‌ ಹಾಗೂ ಫಿಟ್‌ನೆಸ್ ರಹಸ್ಯ ಇಲ್ಲಿದೆ

Published : May 12, 2023, 06:35 PM IST

ದಕ್ಷಿಣದ ನಟಿ ಐಶ್ವರ್ಯ ಮೆನನ್‌  ಪ್ರಮುಖವಾಗಿ ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ಕನ್ನಡ ಸಿನಿಮಾದಲ್ಲಿ  ನಟಿಸಿರುವ ಐಶ್ವರ್ಯಾ ಮಾಲಿವುಡ್‌ನಲ್ಲಿ ಸಹ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಐಶ್ವರ್ಯ ಮೆನನ್‌ ಅವರ ಫಿಟ್ನೆಸ್‌ ಸಿಕ್ರೇಟ್‌ ಇಲ್ಲಿದೆ. 

PREV
17
  ಸೌತ್ ಸುಂದರಿ ಐಶ್ವರ್ಯ ಮೆನನ್    ಪರ್ಫೆಕ್ಟ್‌ ಫಿಗರ್‌ ಹಾಗೂ ಫಿಟ್‌ನೆಸ್ ರಹಸ್ಯ ಇಲ್ಲಿದೆ

ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್‌ ಇರುವ ನಟಿ ಒಮ್ಮೆ  ಪೋಸ್ಟ್‌ನಲ್ಲಿ  ಅವರು ದಪ್ಪಗಿದ್ದರು ಮತ್ತು  ಬಾಲ್ಯದಲ್ಲಿ ಅಪಹಾಸ್ಯಕ್ಕೊಳಗಾಗಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

 

27

ಬಾಲ್ಯದಲ್ಲಿ ಅವರನ್ನು ಡುಮ್ಮಿ ಮತ್ತು ಮೈದಾ ಚೆಂಡಿನಂತೆ ಕಾಣುವ ಹುಡುಗಿ ಎಂದು ಗುರುತಿಸಲಾಗುತ್ತಿತ್ತು. ಸ್ವಾಭಾವಿಕವಾಗಿ ಇಂಥ ಕಾಮೆಂಟ್‌ಗಳು ಯಾರಿಗಾದರೂ ನೋವುಂಟುಮಾಡುತ್ತವೆ.

  

37

ತೆಳ್ಳಗಾಗಲು ಡಯಟ್‌ ಮತ್ತು ವ್ಯಾಯಾಮ ಸೇರಿ ಪ್ರತಿಯೊಂದು ಫಿಟ್‌ನೆಸ್ ಮಂತ್ರವನ್ನು ಐಶ್ವರ್ಯಾ ಜಪಿಸಿದ್ದಾರೆ. ಅವರು ತೆಳ್ಳಗಾಗುವಲ್ಲಿ ಯಶಸ್ವಿ ಕೂಡ ಆದರು. ಆದರೆ ಅವರು ಫಿಟ್ ಆಗಬೇಕೆಂದು ಅರಿವಾಗಿದ್ದೇ ಅವರನ್ನು ಆರೋಗ್ಯವಾಗಿಡಿಸಿತು.

47

ತನ್ನ ಕೋರ್ ಸ್ನಾಯುಗಳನ್ನು ಬಲಪಡಿಸಲು ಮತ್ತು  ದೇಹದ ಸಮತೋಲನ ಹಾಗೂ ಸ್ಥಿರತೆ ಉತ್ತೇಜಿಸಲು ಪಿಲೇಟ್ಸ್ ಮತ್ತು ಯೋಗವನ್ನು ತನ್ನ ಫಿಟ್‌ನೆಸ್ ದಿನಚರಿಯಲ್ಲಿ ಆಳವಡಿಸಿಕೊಂಡಿದ್ದಾರೆ. ಯೋಗವು ವಿಶೇಷವಾಗಿ ಉಸಿರಾಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

57

ಬಾಕ್ಸಿಂಗ್ ಐಶ್ವರ್ಯಾ ಫಿಟ್ ಆಗಿರಲು ಸಹಾಯ ಮಾಡುತ್ತದೆ ಮತ್ತು ಅವರ ಹೃದಯದ ರಕ್ತನಾಳದ ಕಾರ್ಯಕ್ಷಮತೆ ಹೆಚ್ಚಿಸುತ್ತದೆ. ಜೊತೆಗೆ ಇದು  ಚುರುಕುತನ ಮತ್ತು ಪರಿಣಾಮಕಾರಿ ಪೂರ್ಣ ದೇಹದ ವ್ಯಾಯಾಮ ಒದಗಿಸುತ್ತದೆ.

67

ಕ್ಯಾಲೋರಿ ಮತ್ತು ಫ್ಯಾಟ್‌ ಬರ್ನ್‌ ಹೆಚ್ಚಿಸಲು ಹಾಗೂ ಮೆಟಾಬಲಿಸಂ ಹೆಚ್ಚಿಸಲು, ಹೃದಯರಕ್ತನಾಳದ ಫಿಟ್‌ನೆಸ್ ಸುಧಾರಿಸಲು ತನ್ನ ದಿನಚರಿಯಲ್ಲಿ HITT ವ್ಯಾಯಾಮಗಳನ್ನು ಸೇರಿಸಿಕೊಂಡಿದ್ದಾರೆ. ಇದು ಐಶ್ವರ್ಯಾ ಅವರ ಮೂಡ್‌ ಅನ್ನು ಸುಧಾರಿಸುತ್ತದೆ.

77

ದಕ್ಷಿಣ ಭಾರತದ ಸುಂದರಿ  ಯಾವುದೇ ಫ್ಯಾಡ್‌ ಡಯಟ್‌ ಬದಲಿಗೆ ತನ್ನ ದೈಹಿಕ ಅಗತ್ಯಗಳಿಗಾಗಿ ಸಮತೋಲಿತ ಆಹಾರವನ್ನು (Balanced Food) ಅನುಸರಿಸುತ್ತಾರೆ. ಹಸಿವಿನಿಂದ ಬಳಲದೆ ತನ್ನ ದೇಹವು ತನ್ನ ಸಕ್ರಿಯ ಜೀವನಶೈಲಿಯನ್ನು ಬೆಂಬಲಿಸಲು ಮತ್ತು ಅತ್ಯುತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಎನರ್ಜಿವನ್ನು ಬಳಸುತ್ತದೆ ಎಂದು ನಟಿ ಖಚಿತಪಡಿಸಿಕೊಳ್ಳುತ್ತಾರೆ.
 

Read more Photos on
click me!

Recommended Stories