ಚಾರ್ಟರ್ಡ್ ಅಕೌಂಟೆಂಟ್ ರಾಘವ್ ಚಡ್ಡಾ ಮತ್ತು ನಟಿ ಪರಿಣಿತಿ ಚೋಪ್ರಾ ನೆಟ್ ವರ್ತ್ ಎಷ್ಟು?
First Published | May 12, 2023, 6:03 PM ISTರಾಘವ್ ಚಡ್ಡಾ (Ragahv Chadh) ಅವರು ರಾಜಕೀಯ ಜಗತ್ತಿನಲ್ಲಿ ಯಾವಾಗಲೂ ಚರ್ಚೆಯಾಗಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರ ವೈಯಕ್ತಿಕ ಜೀವನದ ಬಗ್ಗೆ ವ್ಯಾಪಕವಾಗಿ ಚರ್ಚಿಸಲಾಗುತ್ತಿದೆ. ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಬಾಲಿವುಡ್ ನಟಿ ನಟ ಪರಿಣಿತಿ ಚೋಪ್ರಾ (Parineeti Chopra) ಅವರನ್ನು ಈ ವರ್ಷದ ಅಂತ್ಯದ ವೇಳೆಗೆ ಮದುವೆಯಾಗಲಿದ್ದಾರೆ. ದಂಪತಿಗಳು ಶನಿವಾರ ದೆಹಲಿಯಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದ ಉಪಸ್ಥಿತಿಯಲ್ಲಿ ಉಂಗುರಗಳನ್ನು ಬದಲಾಯಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ . ಇದರ ನಡುವೆ ಈ ಜೋಡಿಯ ನಿವ್ವಳ ಮೌಲ್ಯ ಹಾಗೂ ಆಸ್ತಿಯ ವಿವರದ ಮಾಹಿತಿಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ.