ಕೂಗಿ ಕರೆದರೂ ಬಾಲಿವುಡ್‌ಗೆ ನೋ ನೋ ಎಂದ ದಕ್ಷಿಣ ಭಾರತದ ಸೆಲೆಬ್ರಿಟಿಗಳಿವರು

Published : May 06, 2025, 08:14 AM ISTUpdated : May 06, 2025, 12:08 PM IST

ಕೆಲವು ದಕ್ಷಿಣ ಭಾರತದ ನಟಿಯರು ಹಾಗೂ ನಟರು ತಮ್ಮ ನಟನೆಯಿಂದಾಗಿ ಬಾಲಿವುಡ್‌ನಲ್ಲಿ ಅತ್ಯುತ್ತಮ ಅವಕಾಶಗಳು ಸಿಕ್ಕರೂ ಹೋಗದೆ ದಕ್ಷಿಣದ ತಮಗೆ ನೆಲೆ ಕೊಟ್ಟ ಸಿನಿಮಾರಂಗವೇ ಬೆಸ್ಟ್ ಎಂದು ಇಲ್ಲೇ ನೆಲೆಯೂರಿದವರು. ಅಂತಹ ಕೆಲವು ಸೆಲೆಬ್ರಿಟಿಗಳ ಬಗ್ಗೆ ಇಲ್ಲಿದೆ ಡಿಟೇಲ್ಸ್.

PREV
15
ಕೂಗಿ ಕರೆದರೂ ಬಾಲಿವುಡ್‌ಗೆ ನೋ ನೋ ಎಂದ ದಕ್ಷಿಣ ಭಾರತದ ಸೆಲೆಬ್ರಿಟಿಗಳಿವರು
Anushka Shetty

ಮೊದಲನೇಯದಾಗಿ ನಟಿ ಅನುಷ್ಕಾ ಶೆಟ್ಟಿ(Anushka Shetty)ಬಾಹುಬಲಿ ಮತ್ತು ಅರುಂಧತಿಯಂತಹ ಅದ್ಭುತ  ಸಿನಿಮಾಗಳಲ್ಲಿನ ತಮ್ಮ ಅಮೋಘ ನಟನೆಯಿಂದಾಗಿ ಫೇಮಸ್ ಆದ ಕನ್ನಡತಿ ನಟಿ ಅನುಷ್ಕಾ ಶೆಟ್ಟಿಗೆ ನಂತರದಲ್ಲಿ ಬಾಲಿವುಡ್‌ನಿಂದ ಅನೇಕ ಅವಕಾಶಗಳು ಅರಸಿ ಬಂದವು. ಆದರೆ ಅವೆಲ್ಲವನ್ನೂ ನಿರಾಕರಿಸಿ ಅವರು  ತೆಲುಗು ಮತ್ತು ತಮಿಳು ಚಿತ್ರಗಳಲ್ಲಿಯೇ ತಮ್ಮ ವೃತ್ತಿಜೀವನವನ್ನು ಮುಂದುವರೆಸಿದ್ದಾರೆ. ಎಲ್ಲರೂ ಹಾತೊರೆಯುವ, ಬೇಕು ಬೇಕು ಎಂದರೂ ಸಿಗದ ಬಾಲಿವುಡ್ ಸಿನಿಮಾರಂಗದ ಮೇಲೆ ಅವರಿಗೆ ಅಂತಹ ವಿಶೇಷ ಆಸಕ್ತಿ ಇಲ್ಲ, ಅವರು ದಕ್ಷಿಣ ಸಿನಿಮಾಗಳ ಸೃಜನಶೀಲ ವಾತಾವರಣವೇ ತಮಗಿಷ್ಟ ಎಂದು ಹೇಳಿದ್ದಾರೆ. 

25


ನಟ ಕಾರ್ತಿ(Karthi): ತಮಿಳು ನಟ ಕಾರ್ತಿ ತಮಿಳು ಸಿನಿಮಾದಲ್ಲಿ ತುಂಬಾ ಪ್ರಸಿದ್ಧವಾದ ಹೆಸರು. ಇವರು ಕೂಡ ಬಾಲಿವುಡ್‌ನಲ್ಲಿ ಸಿಕ್ಕ ಪ್ರಮುಖ ಪಾತ್ರಗಳನ್ನು ತಿರಸ್ಕರಿಸಿದವರು. ತಮಗೂ ಬಾಲಿವುಡ್ ಸಿನಿಮಾಗಳಲ್ಲಿ ಅವಕಾಶಗಳು ಬಂದಿದ್ದವು. ಆದರೆ ತಮಿಳು ಚಿತ್ರರಂಗದಲ್ಲೇ ಇರಲು ಬಯಸುವೆ ಎಂದು ಅವರು ಹೇಳಿಕೊಂಡಿದ್ದಾರೆ. ತಮಿಳಿನಲ್ಲೇ ತಮಗೆ ವೈವಿಧ್ಯಮಯ ಪಾತ್ರಗಳು ಮತ್ತು ಕಥೆಗಳನ್ನು ಆಯ್ಕೆ ಮಾಡಲು ಹೆಚ್ಚಿನ ಅವಕಾಶವಿದೆ ಎಂಬುದು ಅವರ ಅಭಿಪ್ರಾಯ.

35
Actress Nithya Menen

ನಿತ್ಯಾ ಮೆನನ್(Nithya Menen)1998ರಲ್ಲಿಯೇ ಹನುಮಾನ್ ಸಿನಿಮಾದಲ್ಲಿ ಬಾಲಕಲಾವಿದೆಯಾಗಿ ಸಿನಿಮಾ ರಂಗ ಪ್ರವೇಶಿಸಿದ ನಿತ್ಯಾ ಮೆನನ್‌ ಹಿರೋಯಿನ್ ಆಗಿ ನಟಿಸಿದ ಮೊದಲ ಸಿನಿಮಾ ಕನ್ನಡದ ಸೆವೆನ್ ಒ ಕ್ಲಾಕ್, ಇದಾದ ನಂತರ ನಿತ್ಯಾ ಮೆನನ್‌ಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದ್ದು,  ಅವರ ಮೈನಾ ಸಿನಿಮಾ ಇದಲ್ಲದೇ ಅವರು ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಗೂ ಬಾಲಿವುಡ್‌ನಲ್ಲಿ ಹಲವು ಅವಕಾಶಗಳು ಬಂದಿದ್ದವು. ಆದರೆ ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿಯೇ ನಾನು ಖುಷಿಯಾಗಿದ್ದೇನೆ. ಇಲ್ಲಿ ನನಗೆ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಲು ಅವಕಾಶವಿದೆ. ಪ್ರಾದೇಶಿಕ ಸಿನಿಮಾಗಳೇ ನನಗೆ ಇಷ್ಟ, ಇದು ನಮ್ಮನ್ನು ನಮ್ಮ ಮೂಲ ಬೇರಿನ ಜೊತೆ ಸಂಪರ್ಕಿಸುವಂತೆ ಮಾಡುತ್ತದೆ ಎಂಬುದು ಅವರ ಅಭಿಪ್ರಾಯ.

45

ಸೂರ್ಯ(Suriya)ತಮಿಳು ಚಿತ್ರರಂಗದಲ್ಲಿ ಯಶಸ್ವಿಯಾಗಿ ನೆಲೆಕಂಡ ನಟ ಸೂರ್ಯಗೂ ಬಾಲಿವುಡ್‌ನಿಂದ ಹಲವು ಅವಕಾಶಗಳು ಹುಡುಕಿ ಬಂದಿದ್ದವು.  ಆದರೆ ಅವರು ದಕ್ಷಿಣ ಭಾರತಕ್ಕೆ ಅದರಲ್ಲೂ ತಮಿಳು ಸಿನಿಮಾಗಳಿಗೆ ಸೀಮಿತವಾಗಿ ಉಳಿದಿದ್ದಾರೆ. ನನ್ನ ವೈಯಕ್ತಿಕ ಆಯ್ಕೆಯ ಸಿನಿಮಾಗಳಲ್ಲಿಯೇ ತಾನು ಹೆಚ್ಚಾಗಿ ನಟಿಸಲು ಬಯಸುವೆ ಎಂಬುದು ಅವರ ಮಾತು. ತಮಿಳು ಚಿತ್ರರಂಗದಲ್ಲಿ ಬೇರೂರಿರುವ ಅವರ ನಿರ್ಧಾರವು ಆ ಸಿನಿಮಾ ರಂಗದಲ್ಲಿ ಅವರ ಗಾಢವಾದ ಸಂಬಂಧವನ್ನು ತೋರಿಸುತ್ತದೆ.

55

ಚೀಯನ್‌ ವಿಕ್ರಮ್(chiyaan vikram):ತಮಿಳು ಚಿತ್ರರಂಗದ ಅತ್ಯಂತ ಪ್ರತಿಭಾನ್ವಿತ ನಟರಲ್ಲಿ ಒಬ್ಬರಾಗಿದ್ದರೂ ಬಾಲಿವುಡ್‌ನಿಂದ ದೂರವೇ ಉಳಿದಿದ್ದಾರೆ. ತಮಿಳು ಚಲನಚಿತ್ರಗಳಲ್ಲಿನ ತಮ್ಮ ವೃತ್ತಿಜೀವನದ ಬಗ್ಗೆ ತಾನು ತುಂಬಾ ಖುಷಿಯಾಗಿದ್ದು, ಉದ್ಯಮದಲ್ಲಿ ತನಗಿರುವ ಸೃಜನಶೀಲ ಸ್ವಾತಂತ್ರ್ಯವನ್ನು ಆನಂದಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಬಾಲಿವುಡ್ ಆಫರ್‌ಗಳನ್ನು ತೆಗೆದುಕೊಳ್ಳುವ ಬದಲು ತನಗೆ ಇಷ್ಟವಾದ ಅರ್ಥಪೂರ್ಣವಾದ ಪಾತ್ರಗಳನ್ನು ಆಯ್ಕೆ ಮಾಡಲು ಬಯಸುತ್ತೇನೆ ಎಂದು ಅವರು ಹೇಳುತ್ತಾರೆ.

Read more Photos on
click me!

Recommended Stories