ಆಕೆ ದೇವಲೋಕದ ಅಪ್ಸರೆಗಳನ್ನೇ ಮೀರಿಸುವಷ್ಟು ಸುಂದರಿ. ತನ್ನ ಅಂದ, ಚೆಂದ, ನಟನೆಯಿಂದಲೇ ಪ್ರೇಕ್ಷಕರ ಮನದಲ್ಲಿ ಮನೆ ಮಾಡುವ ಮೂಲಕ ಭಾರತೀಯ ಚಿತ್ರರಂಗವನ್ನು ಆಳಿದ ಚೆಲುವೆ ಆಕೆ. ಆಕೆ ಬೇರಾರು ಅಲ್ಲ ನಟಿ ರಂಭಾ (Actress Rambha).
27
ರಂಭಾ ಹೆಸರಿಗೆ ಪರಿಚಯದ ಅಗತ್ಯ ಇಲ್ವೇ ಇಲ್ಲ. ಯಾಕಂದ್ರೆ ಅಂದು ಇಂದು ಚಿತ್ರರಂಗದಲ್ಲಿ ಬಂದು ಹೋಗಿದ್ದ ರಂಭಾ ಒಬ್ಬರೇ. ಕನ್ನಡ, ತಮಿಳು, ತೆಲುಗು, ಮಲಯಾಲಂ, ಹಿಂದಿ, ಭೋಜ್ ಪುರಿ,ಬೆಂಗಾಲಿ, ಇಂಗ್ಲಿಷ್ ಸಿನಿಮಾಗಳಲ್ಲಿ ನಟಿಸಿದ್ದರು. ರಂಭಾ.
37
ಯೀಡಿ ವಿಜಯಲಕ್ಷ್ಮಿಯಾಗಿ (Vijayalakshmi) ಆಂಧ್ರಪ್ರದೇಶದ ವಿಜಯವಾಡದಲ್ಲಿ ಜನಿಸಿದ ರಂಭಾ, ಸಿನಿಮಾಗೆ ಎಂಟ್ರಿ ಕೊಟ್ಟಿದ್ದು, 1992 ರಲ್ಲಿ ಮಲಯಾಲಂ ಸಿನಿಮಾ ಸರ್ಗಂ ಮೂಲಕ. ಆ ಸಮಯದಲ್ಲಿ ನಟಿಗೆ 15 ವರ್ಷ. ಅಲ್ಲಿಂದ ರಂಭಾ ಹಿಂದಿರುಗಿ ನೋಡಿದ್ದೇ ಇಲ್ಲ. 2010ರವೆರೆಗೂ ರಂಭಾ ತುಂಬಾನೆ ಬ್ಯುಸಿ ನಟಿಯಾಗಿದ್ದರು.
ರಂಭಾ ಕನ್ನಡದಲ್ಲೂ ಸಿನಿಮಾ ಮಾಡಿದ್ದು, ಸರ್ವರ್ ಸೋಮಣ್ಣ, ಭಾವ, ಭಾಮೈದ, ಸಾಹುಕಾರ, ಪಾಂಡು ರಂಗ ವಿಠಲ (Panduranga Vittala), ಗಂಡು ಗಲಿ ಕುಮಾರರಾಮ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡಿಗರಿಗೂ ಹತ್ತಿರವಾದರು. ಶಿವಣ್ಣನ ಜೊತೆಗಿನ ಒಂಟಿ ಒಂಟಿಯಾಗಿರುವುದು ಬೋರೋ ಬೋರು ಹಾಡು ಇವತ್ತಿಗೂ ಸಖತ್ ಫೇಮಸ್.
57
ರಂಭಾ 2010ರವರೆಗೆ ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿದ್ದರು, ಆದರೆ, 2010ರಲ್ಲಿ ಬ್ಯುಸಿನೆಸ್ ಮ್ಯಾನ್ ಇಂದ್ರಕುಮಾರ್ (businessman Indrakumar) ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ, ಸಿನಿ ರಸಿಕರಿಗೆ ದೊಡ್ಡ ಶಾಕ್ ಕೊಟ್ಟಿದ್ದರು, ಮದುವೆಯ ಬಳಿಕ ನಟಿ ಸಿನಿಮಾದಿಂದಲೆ ದೂರ ಉಳಿದರು.
67
Rambha
ಮದುವೆಯಾದ ಬಳಿಕ ಲಂಡನ್ ಗೆ ಶಿಫ್ಟ್ ಆಗಿರುವ ರಂಭಾ ಈಗ ಮೂರು ಮಕ್ಕಳ ತಾಯಿ. ರಂಭಾ ಸಿನಿಮಾದಿಂದ ದೂರ ಇದ್ದರೂ ಸಹ ಅವರ ಆಸ್ತಿ ಮೌಲ್ಯ ಏನೂ ಕಡಿಮೆಯಾಗಿಲ್ಲ. ನಟಿಯ ಸದ್ಯದ ನೆಟ್ ವರ್ತ್ 2000 ಕೋಟಿ. ಹೌದು, ಇವರು ಭಾರತ ಮತ್ತು ಲಂಡನ್ ಎರಡೂ ಕಡೆಯಲ್ಲೂ ರಿಯಲ್ ಎಷ್ಟೇಟ್ ಮಾಡುತ್ತಿದ್ದಾರೆ.
77
ರಂಭಾ ಇದೀಗ ಮತ್ತೆ ಮನರಂಜನ ಇಂಡಷ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ನಟಿಯಾಗಿ ಅಲ್ಲ, ತಮಿಳು, ತೆಲುಗಿನಲ್ಲಿ ಹಲವಾರು ಟಿವಿ ರಿಯಾಲಿಟಿ ಶೋಗಳಿಗೆ ಜಡ್ಜ್ ಆಗಿದ್ದಾರೆ. ಆ ಮೂಲಕ ಮತ್ತೆ ಭಾರತದೊಂದಿಗೆ, ಚಿತ್ರರಂಗದೊಂದಿಗೆ ತಮ್ಮ ನಂಟನ್ನು ಮುಂದುವರೆಸಿಕೊಂಡು ಹೋಗಿದ್ದಾರೆ.