ಚೆಂದ ಕಂಡೋರನ್ನೆಲ್ಲಾ ಮದುವೆಯಾಗ್ತೀನೆಂದು ಜಗಳ ಮಾಡ್ತಿದ್ದ ನಟಿ! ವೆಂಕಟೇಶ್ ಇರಲಿ, ರಾಜಕಾರಣಿಯನ್ನೂ ಬಿಟ್ಟಿಲ್ಲ!

Published : Mar 27, 2025, 07:51 PM ISTUpdated : Mar 27, 2025, 08:00 PM IST

ದಕ್ಷಿಣ ಭಾರತದ ಪ್ರಸಿದ್ಧ ನಟಿಯಾಗಿರುವ ರಾಶಿ ತನಗೆ ಚೆಂದ ಕಂಡವನ್ನೆಲ್ಲಾ ಮದುವೆ ಮಾಡಿಕೊಳ್ಳುವುದಾಗಿ ಮನೆಯಲ್ಲಿ ಜಗಳ ಮಾಡುತ್ತಿದ್ದಳು. ಒಮ್ಮೆ ನಟ ವೆಂಕಟೇಶ್ ಅವರನ್ನು, ಮತ್ತೊಮ್ಮೆ ರಾಜಕಾರಣಿಯನ್ನು ಮಗದೊಮ್ಮೆ ಇನ್ನೊಬ್ಬ ಹುಡುಗನ್ನು  ಮದುವೆಯಾಗುವುದಾಗಿ ಹೇಳುತ್ತಿದ್ದ ನಟಿ ಬಯಕೆ ಕೇಳಿ ಮನೆಯವರು ಬೆಚ್ಚಿ ಬಿದ್ದಿದ್ದರು.

PREV
17
ಚೆಂದ ಕಂಡೋರನ್ನೆಲ್ಲಾ ಮದುವೆಯಾಗ್ತೀನೆಂದು ಜಗಳ ಮಾಡ್ತಿದ್ದ ನಟಿ! ವೆಂಕಟೇಶ್ ಇರಲಿ, ರಾಜಕಾರಣಿಯನ್ನೂ ಬಿಟ್ಟಿಲ್ಲ!

ತೆಲುಗು ಚಿತ್ರರಂಗದ ಸ್ಟಾರ್ ನಟ ವೆಂಕಟೇಶ್ ಅನಿರೀಕ್ಷಿತವಾಗಿ ಸಿನಿಮಾ ಹಿರೋ ಆಗಿದ್ದಾರೆ. ಮೂಲತಃ ಉದ್ಯಮಿಯಾಗಿದ್ದ ಅವರು ವಿದೇಶದಲ್ಲಿ ನೆಲೆಸಲು ಬಯಸಿದ್ದರು. ಆದರೆ, ಕೃಷ್ಣ ಅವರ ಸಹಾಯದಿಂದ ವೆಂಕಟೇಶ್ ಸಿನಿಮಾ ನಾಯಕನಾದರು. ಆಕಸ್ಮಿಕವಾಗಿ ನಾಯಕನಾದ ವೆಂಕಿಯನ್ನು ಅನೇಕ ನಾಯಕಿಯರು ಇಷ್ಟಪಟ್ಟಿದ್ದರು.

27

ವೆಂಕಟೇಶ್  ಸೌಂದರ್ಯಾಳನ್ನು ಮದುವೆಯಾಗುವ ಹಂತಕ್ಕೂ ಹೋದರು ಎಂಬ ವದಂತಿ ಇದೆ. ಮತ್ತೊಬ್ಬ ಸ್ಟಾರ್ ನಾಯಕಿ ಕೂಡ ವೆಂಕಿ ಮೇಲೆ ಕ್ರಶ್ ಹೊಂದಿದ್ದರು. ವೆಂಕಟೇಶ್‌ನನ್ನು ಮದುವೆಯಾಗುವುದಾಗಿ ಮನೆಯವರ ಬಳಿ ಹೇಳಿ ದೊಡ್ಡ ಗಲಾಟೆಯನ್ನೇ ಮಾಡಿದ್ದಳು. ಆ... ನಟಿ ಯಾರು? ಕಥೆ ಏನು? ಎಂದು ನೋಡೋಣ.

37

ನಟ ವೆಂಕಟೇಶ್ ಅವರು ಮದುವೆಯಾದ ನಂತರವೇ ಪೂರ್ಣಕಾಲಿಕವಾಗಿ ಚಿತ್ರರಂಗಕ್ಕೆ ಬಂದರು. ಆದರೆ ವೆಂಕಿ ತುಂಬಾ ಸಭ್ಯ ಮತ್ತು ಕೂಲ್ ವ್ಯಕ್ತಿತ್ವ ಹೊಂದಿದ್ದರು. ಎಲ್ಲರಿಗೂ ಗೌರವ ಕೊಡುವ ವೆಂಕಿ, ಮಹಿಳೆಯರಿಗೆ ಹೆಚ್ಚಿನ ಗೌರ ಕೊಡುತ್ತಿದ್ದನು. ನೋಡಲು ಸುಂದರವಾಗಿರುವುದರ ಜೊತೆಗೆ ಉತ್ತಮ ಗುಣವನ್ನೂ ಹೊಂದಿದ್ದನು. ಅದಕ್ಕಾಗಿಯೇ ಹುಡುಗಿಯರು ವೆಂಕಿಯನ್ನು ಇಷ್ಟಪಡುತ್ತಾರೆ.

ಇದರ ನಡುವೆ ವೆಂಕಟೇಶ್ ಅವರು ಸೌಂದರ್ಯ ಜೊತೆಗೆ ಹೆಚ್ಚಿನ ಚಿತ್ರಗಳನ್ನು ಮಾಡಿದರು. ಅವರ ನಡುವೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು. ಇಬ್ಬರೂ ಪ್ರೀತಿಸಿ ಮದುವೆಯೂ ಆಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ, ವೆಂಕಟೇಶ್ವ ಅವರ ತಂದೆ ರಾಮನಾಯ್ಡು ಬೈದ ನಂತರ ಸೌಂದರ್ಯ ಜೊತೆಗಿನ ಸ್ನೇಹದಿಂದ ಹಿಂದೆ ಸರಿದರು ಎಂದು ಹೇಳಲಾಗುತ್ತದೆ. 

47

ವೆಂಕಟೇಶ್‌ನನ್ನು ತುಂಬಾ ಇಷ್ಟಪಡುತ್ತಿದ್ದ ಹಾಗೂ ನಾನು ವೆಂಕಿಯನ್ನೇ ಮದುವೆ ಮಾಡಿಕೊಳ್ಳುವುದಾಗಿ ಮನೆಯಲ್ಲಿ ಜಗಳ ಮಾಡುತ್ತಿದ್ದ ನಟಿ ಬೇರೆ ಯಾರೂ ಅಲ್ಲ ರಾಶಿ. ಇನ್ನು ರಾಶಿ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದರು. ಅವರ ಪೋಷಕರು ಚೆನ್ನೈನ ವಿಜಯಾ ಮತ್ತು ಎವಿಎಂ ಸ್ಟುಡಿಯೋ ಬಳಿ ಟೀ ಅಂಗಡಿ ನಡೆಸುತ್ತಿದ್ದರು.

57

ಆ ಸಮಯದಲ್ಲಿ ಅನೇಕ ನಾಯಕರು, ನಾಯಕಿಯರು ಮತ್ತು ನಿರ್ದೇಶಕರು ಅಲ್ಲಿಗೆ ಬಂದು ಚಹಾ ಕುಡಿಯುತ್ತಿದ್ದರು. ಒಮ್ಮೆ ರಾಶಿ ಪತ್ರಿಕೆಯಲ್ಲಿ ವೆಂಕಟೇಶ್ ಅವರ ಫೋಟೋಗಳನ್ನು ನೋಡಿದಳು. ಅವನು ನಟಿಸಿದ ಸಿನಿಮಾಗಳನ್ನೂ ಅವಳು ನೋಡಿದ್ದಳು. ಇನ್ನೂ ಚಿಕ್ಕವಳಿದ್ದಾಗಲೇ ನಾನು ವೆಂಕಟೇಶ್ ಅವರನ್ನು ಮದುವೆ ಆಗುತ್ತೇನೆ ಎಂದು ಮನೆಯಲ್ಲಿ ಜಗಳ ಮಾಡುತ್ತಿದ್ದಳು ಎಂಬುದು ತಿಳಿದುಬಂದಿದೆ.

67

ನಟಿ ರಾಶಿ ವರ್ತನೆ ನೋಡಿ ಪೋಷಕರು ಆಶ್ಚರ್ಯಚಕಿತರಾದರು. ಈ ಮಗು ಯಾಕೆ ಹೀಗೆ ವರ್ತಿಸುತ್ತಿದೆ? ಎಂದು ನೋಡುತ್ತಿದ್ದರು. ಆಗ ಆಕೆಗೆ ಬುದ್ಧಿ ಕಡಿಮೆ ಎಂದು ಗದರುಸಿದ್ದಾರೆ. ರಾಶಿ ಚಿಕ್ಕವಳಿದ್ದಾಗ ವೆಂಕಿ ಜೊತೆಗೆ ಮದುವೆ ಮಾಡಿಕೊಳ್ಳುವ ಬಗ್ಗೆ ತುಂಬಾ ರಚ್ಚೆ ಮಾಡುತ್ತಿದ್ದಳು. ಶಾಲೆಯಲ್ಲಿ ಶಿಕ್ಷಕರು ಭವಿಷ್ಯದಲ್ಲಿ ಏನಾಗಬೇಕೆಂದು ಬಯಸುತ್ತೀರಿ ಎಂದು ಕೇಳಿದಾಗ, ಅವಳು ಗೃಹಿಣಿಯಾಗಬೇಕೆಂದು ಹೇಳಿದ್ದಳು.
 

77

ಆದರೆ, ನಟಿ ​​ರಾಶಿಯ ಆಸೆ ಅಲ್ಲಿಗೆ ನಿಲ್ಲಲಿಲ್ಲ, ಒಂದು ಬಾರಿ ಅವಳು ರಾಜೀವ್ ಗಾಂಧಿ ಪತ್ರಿಕೆಯಲ್ಲಿ ಬಂದಿದ್ದ ಫೋಟೋವನ್ನು ನೋಡಿ ನಾನು ಅವರನ್ನು ಮದುವೆಯಾಗುವುದಾಗಿ ಗಲಾಟೆ ಮಾಡಿದಳು. ರಾಶಿ ಚಿಕ್ಕವಳಿದ್ದಾಗ ಅನೇಕ ಕಥೆಗಳನ್ನು ಹೇಳುತ್ತಿದ್ದಳು. ಇವಳು ಚೆಂದ ಕಂಡವನ್ನೆಲ್ಲಾ ಮದುವೆ ಮಾಡಿಕೊಳ್ಳುವುದಾಗಿ ಮನೆಯವರು ತನ್ನನ್ನು ಬೈದಿದ್ದಾಗಿ ಸ್ವತಃ ನಟಿ ರಾಶಿ ಅವರೇ ಸಂದರ್ಶನವೊಂದರಲ್ಲಿ ಈ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

Read more Photos on
click me!

Recommended Stories