ರೈಲಲ್ಲಿ ಟಿಕೆಟ್ ಇಲ್ಲದೆ ಟಿಸಿಗೆ ಸಿಕ್ಕಿಬಿದ್ದ ನಟಿಗೆ ಹಣ ಕೊಟ್ಟು ಸಹಾಯ ಮಾಡಿದ್ದು ಯಾರು?
ನಟಿ ಸಾವಿತ್ರಿ ರೈಲು ಟಿಕೆಟ್ ಪಡೆಯಲು ಮರೆತಾಗ, ಆಕೆಯ ಕಷ್ಟದ ಪರಿಸ್ಥಿತಿಯಲ್ಲಿ ಒಬ್ಬ ಪ್ರಸಿದ್ಧ ನಟಿ ಸಹಾಯ ಮಾಡಿದ್ದಾರೆ. ಅವರು ಯಾರು ಎಂಬುದರ ಬಗ್ಗೆ ನೋಡೋಣ.
ನಟಿ ಸಾವಿತ್ರಿ ರೈಲು ಟಿಕೆಟ್ ಪಡೆಯಲು ಮರೆತಾಗ, ಆಕೆಯ ಕಷ್ಟದ ಪರಿಸ್ಥಿತಿಯಲ್ಲಿ ಒಬ್ಬ ಪ್ರಸಿದ್ಧ ನಟಿ ಸಹಾಯ ಮಾಡಿದ್ದಾರೆ. ಅವರು ಯಾರು ಎಂಬುದರ ಬಗ್ಗೆ ನೋಡೋಣ.
ಹಿರಿಯ ನಟಿ ಸಾವಿತ್ರಿ ಸಿನಿಮಾದಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಆಂಧ್ರದಲ್ಲಿ ಹುಟ್ಟಿ ಬೆಳೆದ ನಟಿ ಸಾವಿತ್ರಿ 1950 ರಿಂದ 1981 ರವರೆಗೆ ತಮಿಳು, ಮಲಯಾಳಂ, ಕನ್ನಡ, ತೆಲುಗು, ಹಿಂದಿ ಸೇರಿದಂತೆ ಸುಮಾರು 250 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗು ಸಿನಿಮಾದ ಕ್ವೀನ್ ಎಂದೂ ಕರೆಯಲ್ಪಟ್ಟರು.
ಚಿತ್ರರಂಗದ ಜೀವನದಲ್ಲಿ ಮತ್ತು ಅನುಕೂಲಕರ ಅವಕಾಶಗಳಲ್ಲಿ ಎಷ್ಟರ ಮಟ್ಟಿಗೆ ಎತ್ತರದಲ್ಲಿದ್ದರೋ ಅದೇ ಪ್ರಮಾಣದಲ್ಲಿ ಕಷ್ಟವನ್ನೂ ಅನುಭವಿಸಿದ್ದಾರೆ. ಮೃದು ಮನಸ್ಸಿನ ನಟಿ ಸಾವಿತ್ರಿ ಅನೇಕರಿಗೆ ಧಾರಾಳವಾಗಿ ನೀಡಿದರೂ, ಅವರು ಕಷ್ಟಪಡುತ್ತಿದ್ದಾಗ ಅವರು ನಂಬಿದ್ದವರೇ ಕೈಕೊಟ್ಟಿದ್ದು ದುಃಖದ ಪರಮಾವಧಿ.
ಇತ್ತೀಚೆಗೆ ಕೆ.ವಿಜಯಾ, ಸಾವಿತ್ರಿಯ ಒಳ್ಳೆಯ ಗುಣದ ಬಗ್ಗೆ ಮತ್ತು ತಾನು ಸರಿಯಾದ ಸಮಯದಲ್ಲಿ ಸಹಾಯ ಮಾಡಿದ್ದು ಹೇಗೆ ಎಂಬುದರ ಬಗ್ಗೆ ಹಂಚಿಕೊಂಡಿದ್ದಾರೆ. ಸಾವಿತ್ರಿ ಬಗ್ಗೆ ಅವರು ಮಾತನಾಡುವಾಗ... "ಒಂದು ಬಾರಿ ಸಾವಿತ್ರಿ ಪ್ರಯಾಣಿಸುತ್ತಿದ್ದ ರೈಲಿನಲ್ಲಿ, ಕೆ ವಿಜಯಾ ಕೂಡ ಪ್ರಯಾಣಿಸುತ್ತಿದ್ದರಂತೆ. ವಿಜಯವಾಡದಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದಾಗ, ಸಾವಿತ್ರಿ ಮತ್ತು ಅವರ ಸಹಾಯಕಿ ಫಸ್ಟ್ ಕ್ಲಾಸ್ ಬೋಗಿಗೆ ಹತ್ತಿದ್ದಾರೆ. ಟಿಸಿ ಬಂದು ಟಿಕೆಟ್ ಕೇಳಿದಾಗ, ಸಾವಿತ್ರಿಯವರು ತಮ್ಮ ಬಳಿ ಟಿಕೆಟ್ ಇದೆ ಎಂದು ತಿಳಿದುಕೊಂಡು ಸಹಾಯಕರನ್ನು ಕೇಳಿದ್ದಾರೆ, ಕಾರ್ಯಕ್ರಮ ಆಯೋಜಕರು ರೈಲು ಟಿಕೆಟ್ ಬುಕ್ ಮಾಡಿದ್ದರಿಂದ, ಅವರಿಂದ ಟಿಕೆಟ್ ಪಡೆಯದೆ ರೈಲಿಗೆ ಹತ್ತಿರುವ ಬಗ್ಗೆ ಸಹಾಯಕಿ ಹೇಳಿದ್ದಾರೆ.
ಟಿಸಿ ಸಾವಿತ್ರಿಯವರ ಬಳಿ ಟಿಕೆಟ್ ತೋರಿಸಲು ಹೇಳಿದ್ದಾರೆ. ಅಥವಾ ಹಣ ಪಾವತಿಸಲು ಹೇಳಿದ್ದಾರೆ. ಅಥವಾ ಮುಂದಿನ ನಿಲ್ದಾಣದಲ್ಲಿ ಇಳಿಯುವಂತೆ ಹೇಳಿದ್ದಾರೆ. ತನ್ನ ಪರಿಸ್ಥಿತಿಯ ಬಗ್ಗೆ ಸಾವಿತ್ರಿ ಟಿಸಿಗೆ ವಿವರಿಸುತ್ತಿದ್ದ ಸಮಯದಲ್ಲಿ, ಸಾವಿತ್ರಿಯವರ ಧ್ವನಿಯನ್ನು ಗುರುತಿಸಿಕೊಂಡ ವಿಜಯಾ ಅದು ಸಾವಿತ್ರಿ ಎಂದು ತಿಳಿದು ತಕ್ಷಣವೇ ಅಲ್ಲಿಗೆ ಹೋಗಿದ್ದಾರೆ. ತನ್ನ ಕೈಯಿಂದ ಹಣವನ್ನು ಕೊಟ್ಟು ಸಾವಿತ್ರಿಗೆ ಸಹಾಯ ಮಾಡಿದರಂತೆ.
ಇದರಿಂದ ಸಾವಿತ್ರಿ ತುಂಬಾ ಸಂತೋಷಪಟ್ಟರು. ವಿಜಯಾರನ್ನು ತಬ್ಬಿಕೊಂಡು, "ತುಂಬಾ ಧನ್ಯವಾದಗಳು ಅಮ್ಮ. ನೀವು ನನಗೆ ತುಂಬಾ ದೊಡ್ಡ ಸಹಾಯ ಮಾಡಿದ್ರಿ" ನಾನು, ಮನೆಗೆ ಹಿಂದಿರುಗಿದ ತಕ್ಷಣ ನಿಮ್ಮ ಹಣವನ್ನು ಕಳುಹಿಸಿಕೊಡುವುದಾಗಿ ಹೇಳಿ ವಿಳಾಸವನ್ನು ತೆಗೆದುಕೊಂಡರಂತೆ. ನಂತರ ಎರಡು ದಿನಗಳಲ್ಲಿ... ಡ್ರೈವರ್ ಬಳಿ ತನಗೆ ಸಹಾಯ ಮಾಡಿದ ವಿಜಯಾ ಅವರಿಗೆ ಹಣವನ್ನು ಹಿಂತಿರುಗಿಸುವಂತೆ ಹೇಳಿ ಕಳುಹಿಸಿದರಂತೆ. ಈ ಮಾಹಿತಿಯನ್ನು ಕೆ.ವಿಜಯಾ ಪ್ರಸ್ತುತ ಹಂಚಿಕೊಂಡಿದ್ದಾರೆ.