ದಕ್ಷಿಣ ಭಾರತದ ನಟರಲ್ಲಿ ಹಲವಾರು ನಟರು ದುಬಾರಿ ಮನೆಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಟಾಪ್ 10 ನಟರ ಲಿಸ್ಟ್ ಇಲ್ಲಿದೆ. ಇವುಗಳಲ್ಲಿ ಕನ್ನಡದ ಯಾವುದೇ ನಟನ ಹೆಸರೂ ಕೂಡ ಇಲ್ಲ. ತಮಿಳು, ತೆಲುಗಿಗೆ ಹೋಲಿಕೆ ಮಾಡಿದ್ರೆ ಕನ್ನಡ ನಟರ ಸಂಭಾವನೆ ಕಡಿಮೆ ಇತ್ತು.
ಬಾಹುಬಲಿ ಸಿನಿಮಾ ಮೂಲಕ ಪ್ರಪಂಚದ ಮೂಲೆ ಮೂಲೆಗೂ ಪರಿಚಿತರಾದ ನಟ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಪ್ರಭಾಸ್ ವಾಸವಿರುವ ಮನೆಯ ಮೌಲ್ಯ 60 ಕೋಟಿಯಾಗಿದೆ.
510
ಅಕ್ಕಿನೇನಿ ನಾಗಾರ್ಜುನ
ತೆಲುಗಿನ ಹಿರಿಯ ನಟ, ಇಂದಿಗೂ ತಮ್ಮ ನಟನೆ, ಸ್ಟೈಲ್ ಮೂಲಕ ಯುವ ಜನರ ಮನಸು ಕದಿಯುವ ತಾರೆ ಅಕ್ಕಿನೇನಿ ನಾಗಾರ್ಜುನ ಅವರು 42 ಕೋಟಿ ಮೌಲ್ಯದ ಬಂಗಲೆಯಲ್ಲಿ ವಾಸ ಮಾಡುತ್ತಿದ್ದಾರೆ.
610
ರಜನಿಕಾಂತ್
ಸೂಪರ್ ಸ್ಟಾರ್ ರಜನಿಕಾಂತ್ ಅವರು ವರ್ಷಕ್ಕೊಂದು ಸಿನಿಮಾ ಮಾಡಿಕೊಂಡು, ಆಧ್ಯಾತ್ಮಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಸಿಂಪಲ್ ಆಗಿ ಬದುಕುವ ವ್ಯಕ್ತಿ. ಇವರ ಬಂಗಲೆ ಮೌಲ್ಯ 35 ಕೋಟಿ.
710
ರಾಮ್ ಚರಣ್
ಚಿರಂಜೀವಿ ಪುತ್ರ ರಾಮ್ ಚರಣ್ ಕೂಡ ಇಂದು ದೇಶವೇ ಮೆಚ್ಚಿಕೊಂಡಿರುವ ನಟರಲ್ಲಿ ಒಬ್ಬರಾಗಿದ್ದಾರೆ. ಇವರು ವಾಸಿಸುವ ಬಂಗಲೆಯ ಮೌಲ್ಯ 30 ಕೋಟಿಯಾಗಿದೆ.
810
ಪೃಥ್ವಿರಾಜ್ ಸುಕುಮಾರ್
ಮಲಯಾಲಂ ಚಿತ್ರರಂಗದಲ್ಲಿ ಕೇವಲ ಒಬ್ಬ ನಟ ದುಬಾರಿ ಮನೆಗಳನ್ನು ಹೊಂದಿರುವ ಟಾಪ್ 10 ನಟರ ಲಿಸ್ಟಲ್ಲಿ ಬಂದಿದ್ದಾರೆ. ಅದು ಪೃಥ್ವಿರಾಜ್ ಸುಕುಮಾರ್. ಇವರ ಮುಂಬೈ ಬಂಗಲೆ ಮೌಲ್ಯ 30 ಕೋಟಿ.
910
ಮಹೇಶ್ ಬಾಬು
ಎವರ್ ಗ್ರೀನ್ ಹ್ಯಾಂಡ್ಸಮ್ ನಟ ಮಹೇಶ್ ಬಾಬು ಅವರ ಬಂಗಲೆ ಬರೋಬ್ಬರಿ 28 ಕೋಟಿ ಮೌಲ್ಯದ್ದಾಗಿದೆ.
1010
ಕಮಲ್ ಹಾಸನ್
ದುಬಾರಿ ಮನೆಗಳನ್ನು ಹೊಂದಿರುವ ಸ್ಟಾರ್ ಗಳ ಲಿಸ್ಟ್ ನಲ್ಲಿ ಟಾಪ್ 10ರಲ್ಲಿ ಇರುವ ನಟ ಕಮಲ್ ಹಾಸನ್. ಇವರು 19.5 ಕೋಟಿ ಮೌಲ್ಯದ ಬಂಗಲೆಯಲ್ಲಿ ವಾಸ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.