ಅತೀ ಹೆಚ್ಚಿನ ಗಳಿಕೆಯ ಸಿನಿಮಾ ಎನ್ನುವ ಹೆಗ್ಗಳಿಕೆ ಪಾತ್ರವಾಗಿರುವ ಕಾಂತಾರ 1 ಕರ್ನಾಟಕದಲ್ಲೇ 250 ಕೋಟಿ ಗಳಿಕೆ ಮಾಡಿದೆ. ಇದೀಗ ಚಿತ್ರತಂಡವು ನವೆಂಬರ್ 1 ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಾಂತಾರ 1 ಚಿತ್ರದ ಟಿಕೆಟ್ ಬೆಲೆ ಕಡಿಮೆ ಮಾಡಿದೆ.
2025ರ ಅತೀ ಹೆಚ್ಚಿನ ಗಳಿಕೆಯ ಸಿನಿಮಾ ಎನ್ನುವ ಹೆಗ್ಗಳಿಕೆ ಪಾತ್ರವಾಗಿರುವ ‘ಕಾಂತಾರ 1’ ಕರ್ನಾಟಕದಲ್ಲೇ 250 ಕೋಟಿ ಗಳಿಕೆ ಮಾಡಿದೆ. ಇದೀಗ ಚಿತ್ರತಂಡವು ನವೆಂಬರ್ 1 ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ಕಾಂತಾರ 1’ ಚಿತ್ರದ ಟಿಕೆಟ್ ಬೆಲೆ ಕಡಿಮೆ ಮಾಡಿದೆ.
25
ಅಕ್ಟೋಬರ್ 31ರಿಂದಲೇ ಹೊಸ ಆಫರ್ ಜಾರಿಗೆ
ಹೀಗಾಗಿ ನಾಳೆಯಿಂದ ರಿಷಬ್ ಶೆಟ್ಟಿ ನಟನೆ, ನಿರ್ದೇಶನ, ಹೊಂಬಾಳೆ ಫಿಲಮ್ಸ್ ನಿರ್ಮಾಣದ ‘ಕಾಂತಾರ 1’ ಚಿತ್ರವನ್ನು ರಾಜ್ಯದ ಎಲ್ಲಾ ಸಿಂಗಲ್ ಸ್ಕ್ರೀನ್‌ಗಳಲ್ಲಿ 99 ರು. ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ 150 ರು.ಗೆ ನೋಡಬಹುದು. ಅಕ್ಟೋಬರ್ 31ರಿಂದಲೇ ಈ ಹೊಸ ಆಫರ್ ಜಾರಿಗೆ ಬರಲಿದೆ.
35
ಜನಭರಿತ ಪ್ರದರ್ಶನ
ಇತ್ತೀಚೆಗೆ ಸಿನಿಮಾ 813 ಕೋಟಿ ರು. ಸಂಗ್ರಹ ಮಾಡಿ, ಈ ವರ್ಷದ ಅತಿ ಹೆಚ್ಚು ಗಳಿಕೆಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಜೊತೆಗೆ ಚಿತ್ರಮಂದಿರಗಳಲ್ಲಿ ಈಗಲೂ ಜನಭರಿತ ಪ್ರದರ್ಶನ ಕಾಣುತ್ತಿದ್ದು, 1000 ಕೋಟಿ ರು. ಸಂಗ್ರಹಿಸುವ ನಿರೀಕ್ಷೆ ಇದೆ.
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ರುಕ್ಮಿಣಿ ವಸಂತ್, ಗುಲ್ಷನ್ ದೇವಯ್ಯ, ಜಯರಾಮ್ ನಟಿಸಿದ್ದಾರೆ. ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ.
55
ಇಂದಿನಿಂದ ಪ್ರೈಮ್ ವೀಡಿಯೋದಲ್ಲಿ ಕಾಂತಾರ 1
ಇಂದಿನಿಂದ ಪ್ರೈಮ್ ವೀಡಿಯೋದಲ್ಲಿಯೂ ಕಾಂತಾರ 1 ಸಿನಿಮಾವನ್ನು ವೀಕ್ಷಿಸಬಹುದು. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಿನಿಮಾ ನೋಡಬಹುದು.