ದಕ್ಷಿಣ ಭಾರತೀಯ ಸಿನಿಮಾಗಳು (South Indian Cinema) ಇಂದಿಗೂ ತಮ್ಮ ಮೂಲ ಸಂಸ್ಕೃತಿಯನ್ನು ಅಡಿಪಾಯವಾಗಿಟ್ಟುಕೊಂಡೇ ಸಿನಿಮಾಗಳನ್ನು ಮಾಡುತ್ತಿವೆ. ಈ ಮಣ್ಣಿನ ಗುಣದಿಂದಾಗಿಯೇ ಜನರು ದಕ್ಷಿಣ ಭಾರತದ ಸಿನಿಮಾಗಳನ್ನು ಇಷ್ಟಪಟ್ಟು ನೊಡುತ್ತಾರೆ ಅನ್ನೋದು ನಿಜ.
ಬಾಲಿವುಡ್ ಸಿನಿಮಾಗಳ ಬಗ್ಗೆ ಹೇಳೋದಾದರೆ ಅಲ್ಲಿ ಆಧುನೀಕತೆ, ನ್ಯೂಡಿಟಿ, ವೆಸ್ಟರ್ನ್ ಸಂಸ್ಕೃತಿಯೇ ಹೆಚ್ಚಾಗಿ ಕಂಡು ಬರುತ್ತಿದೆ. ಕಥೆ ಹೇಳೋದಕ್ಕಿಂತ ಹೆಚ್ಚಾಗಿ ಬೇಡವಾದ ಐಟಂ ಸಾಂಗ್, ಅತಿರೇಕ ಎನಿಸುವಷ್ಟು ರೊಮ್ಯಾನ್ಸ್ ಕಾಣಬಹುದು. ಸಂಸ್ಕೃತಿಯ ವಿಚಾರಕ್ಕೆ ಬಂದರೆ ನಟರೂ ಅಷ್ಟೇ.
ಬಾಲಿವುಡ್ ನಟ -ನಟಿಯರಿಗೆ ಹೋಲಿಸಿದ್ರೆ, ದಕ್ಷಿಣ ಭಾರತದ ನಟ -ನಟಿಯರು (South Indian actors) ಇವತ್ತಿಗೂ ತಮ್ಮ ಸಂಸ್ಕೃತಿ ಆಚರಣೆಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಹಬ್ಬ, ಹರಿದಿನಗಳೇ ಇರಲಿ, ಮದುವೆ ಸಮಾರಂಭವೇ ಇರಲಿ ದಕ್ಷಿಣ ಭಾರತೀಯ ತಾರೆಯರು ಎಂದಿಗೂ ತಮ್ಮ ಸಂಸ್ಕೃತಿಯನ್ನು ಬಿಟ್ಟು ಕೊಡೋದಿಲ್ಲ.
ಇತ್ತೀಚೆಗೆ ಸೋಶಿಯಲ್ ಮೀಡೀಯಾದ (Social media) ಟ್ರೋಲ್ ಪೇಜ್‌ಗಳಲ್ಲಿ ಬಾಲಿವುಡ್ ತಾರೆಯರು ಮತ್ತು ದಕ್ಷಿಣ ಭಾರತದ ತಾರೆಯರು ತಮ್ಮ ಪ್ರೆಗ್ನೆನ್ಸಿಯನ್ನು ಹೇಗೆ ಸೆಲೆಬ್ರೇಟ್ ಮಾಡುತ್ತಾರೆ ಎನ್ನುವ ಫೋಟೋಗಳನ್ನು ಹೋಲಿಸಿ ಫೋಟೋ ಶೇರ್ ಮಾಡಿದ್ದು, ಭಾರಿ ವೈರಲ್ ಆಗಿತ್ತು.
ಬಾಲಿವುಡ್ ತಾರೆಯರು ಹೆಚ್ಚಾಗಿ ತಮ್ಮ ಪ್ರೆಗ್ನೆನ್ಸಿ ಫೋಟೋ ಶೂಟ್ (pregnancy photoshoot) ಅಥವಾ ಬೇಬಿ ಶವರ್ ಸಂದರ್ಭದಲ್ಲಿ ತುಂಡು ಬಟ್ಟೆ ಧರಿಸಿ, ಎಷ್ಟು ಸಾಧ್ಯವೋ ಅಷ್ಟು ನಿರ್ವಸ್ತ್ರರಾಗಿ ಫೋಟೋ ಶೂಟ್ ಮಾಡಿಸಿದ್ದೇ ಹೆಚ್ಚು, ಆದರೆ ದಕ್ಷಿಣ ಭಾರತದ ತಾರೆಯರು ಶಾಸ್ತ್ರೋಕ್ತವಾಗಿ ಸೀರೆಯುಟ್ಟು ಸೀಮಂತ ಕಾರ್ಯಕ್ರಮ ಮಾಡಿಸಿಕೊಂಡಿದ್ದ ಫೋಟೋ ಇದಾಗಿದೆ.
ಸೋನಂ ಕಪೂರ್, ಕರೀನಾ ಕಪೂರ್, ಅನುಷ್ಕಾ ಶರ್ಮಾ, ಬಿಪಾಷ ಬಸು ಇವರೆಲ್ಲಾ ತುಂಡುಡುಗೆ ತೊಟ್ಟು ತಮ್ಮ ಬೇಬಿ ಬಂಪ್ (baby bump) ಪ್ರದರ್ಶನ ಮಾಡಿದ್ರೆ, ರಾಧಿಕಾ ಪಂಡಿತ್, ಅಲ್ಲು ಅರ್ಜುನ್ ಪತ್ನಿ ಸ್ನೇಹಾ, ರಾಮ್ ಚರಣ್ ಪತ್ನಿ ಉಪಾಸನ, ರಿಷಭ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಇವರೆಲ್ಲಾ ಸೀರೆಯುಟ್ಟು ಸಂಪ್ರಾದಾಯಬದ್ಧವಾಗಿ ಫೋಟೊ ಶೂಟ್ ಮಾಡಿಸಿದ್ದು ಕಾಣಬಹುದು.
ಈ ಫೋಟೋಗಳು ಸಾಕಷ್ಟು ವೈರಲ್ ಆಗುತ್ತಿವೆ. ಹೆಚ್ಚಿನ ಜನರು ದಕ್ಷಿಣ ಭಾರತೀಯರು ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖರು, ದಕ್ಷಿಣ ಭಾರತದ ಸಂಸ್ಕೃತಿಯೇ ಚೆಂದ ಎಂದು ಕಾಮೆಂಟ್ ಮಾಡಿದ್ದಾರೆ. ನಿಮಗೆ ಏನು ಅನಿಸುತ್ತಿದೆ ಹೇಳಿ…