ಮೊದಲಿಗೆ, ನಮ್ಮ ಮನೆ ಮತ್ತು ಕಚೇರಿಯನ್ನು ಓಪನ್ ಮಾಡುವ ಬಗ್ಗೆ ನಾನು ಹೆದರುತ್ತಿದ್ದೆ. ಮುಂದಿನ ವಾರ ಬಿಡುಗಡೆಯಾಗಲಿರುವ ಆಗಲಿರುವ ಆರ್ಕಿಟೆಕ್ಚರಲ್ ಡೈಜೆಸ್ಟ್ ಇಂಡಿಯಾದ ಸೆಪ್ಟೆಂಬರ್-ಅಕ್ಟೋಬರ್ ಸ್ಟೈಲ್ ಇಶ್ಯೂವಿಗಾಗಿ ಅವರು ಸುಂದರವಾಗಿ ಪ್ರಸ್ತುತಪಡಿಸಿದ ನಮ್ಮ ಪ್ರೀತಿಯ ಸ್ಥಳಗಳ ಈ ಫೋಟೋಗಳನ್ನು ಹಂಚಿಕೊಳ್ಳಲು ರೋಮಾಂಚನವಾಗುತ್ತದೆ ಮತ್ತು ತುಂಬಾ ಉತ್ಸುಕಳಾಗಿದ್ದೇನೆ. ಈ ತಂಡದೊಂದಿಗೆ ಕೆಲಸ ಮಾಡುವುದು ಸಂತೋಷಕರವಾಗಿದೆ ಎಂದು ಸೋನಮ್ ಫೋಟೊ ಶೇರ್ ಮಾಡುವಾಗ ಬರೆದಿದ್ದಾರೆ.