ಅನಿಲ್‌ ಕಪೂರ್‌ ಮಗಳ ಹನಿಮೂನ್‌ ಫೋಟೋ ವೈರಲ್‌!

Published : Sep 09, 2021, 03:11 PM IST

ಅನಿಲ್ ಕಪೂರ್ ಕಿರಿಯ ಮಗಳು ರಿಯಾ ಕಪೂರ್ ಕಳೆದ ತಿಂಗಳು ಆಗಸ್ಟ್ 14 ರಂದು ತನ್ನ ದೀರ್ಘಕಾಲದ ಗೆಳೆಯ ಕರಣ್ ಬೂಲಾನಿಯನ್ನು ವಿವಾಹವಾದರು. ಮದುವೆಯಾದ ಸುಮಾರು 21 ದಿನಗಳ ನಂತರ, ಈಗ ರಿಯಾ ಮತ್ತು ಕರಣ್ ಹನಿಮೂನ್‌ಗೆ ಮಾಲ್ಡೀವ್ಸ್ ತಲುಪಿದ್ದಾರೆ. ಮಾಲ್ಡೀವ್ಸ್‌ನಿಂದ ಕೆಲವು ಫೋಟೋಗಳನ್ನು ರಿಯಾ ಹಂಚಿಕೊಂಡಿದ್ದಾರೆ, ಅದರಲ್ಲಿ ಸ್ವೀಮ್ಮಿಂಗ್‌ ಫೂಲ್‌ನಲ್ಲಿ ರಿಲ್ಯಾಕ್ಸ್‌ ಆಗುತ್ತಿದ್ದಾರೆ. ಅದೇ ಸಮಯದಲ್ಲಿ, ಆಕೆಯ ಪತಿ ಕರಣ್ ಬೂಲಾನಿ ದೂರದಲ್ಲಿ ಸಮುದ್ರವನ್ನು ನೋಡುತ್ತಿರುವುದು ಕಂಡುಬರುತ್ತದೆ.

PREV
110
ಅನಿಲ್‌ ಕಪೂರ್‌ ಮಗಳ ಹನಿಮೂನ್‌ ಫೋಟೋ ವೈರಲ್‌!

ಪೋಸ್ಟ್ ಮಾಡಿರುವ ಈ ಫೋಟೋದಲ್ಲಿ  ರಿಯಾ ಸ್ವಿಮ್ಮಿಂಗ್‌ನಲ್ಲಿ ನೀರಿನಲ್ಲಿ ಮೇಲೆ ಪ್ಲೋಟ್‌ ಮಾಡುತ್ತಾ ರಿಲ್ಯಾಕ್ಸ್‌ ಮಾಡುತ್ತಿರುವುದು ಕಂಡು ಬರುತ್ತದೆ.  ಈ ಸಮಯದಲ್ಲಿ ಅವರು ಡಾರ್ಕ್‌ ರೆಡ್‌ ಕಲರ್‌ನ ಬಿಕಿನಿ ಧರಿಸಿದ್ದರು. ಅದೇ ಸಮಯದಲ್ಲಿ, ಆಕೆಯ ಪತಿ ಕರಣ್ ಬೂಲಾನಿ ದೂರದಲ್ಲಿ ಸಮುದ್ರವನ್ನು ನೋಡುತ್ತಿರುವುದು ಕಂಡುಬರುತ್ತದೆ. 

210

ಫೋಟೋಗೆ ರಿಯಾ 'ಮಕ್ಕಳನ್ನು ಅಜ್ಜಿ ಮನೆಯಲ್ಲಿ ಬಿಟ್ಟಾಗ ಎಂದು ಕ್ಯಾಪ್ಷನ್‌ ನೀಡಿದ್ದಾರೆ. ರಿಯಾ ಕಪೂರ್ ಮತ್ತು ಕರಣ್ ಬೂಲಾನಿ ಹನಿಮೂನ್‌ನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

 

310

ಈ ಫೋಟೋದ  ಕಾಮೆಂಟ್‌ನಲ್ಲಿ  ಬಹುಶಃ ಅವಳು ತನ್ನ ಸಾಕು ನಾಯಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಗೆಸ್‌ ಮಾಡಿದ್ದಾರೆ. ಅಭಿಮಾನಿಗಳಲ್ಲದೆ, ಬಾಲಿವುಡ್ ಸೆಲೆಬ್ರಿಟಿಗಳು ರಿಯಾ ಕಪೂರ್ ಫೋಟೋಗೆ ಕಮೆಂಟ್ ಮಾಡುತ್ತಿದ್ದಾರೆ. 

410

ಕೆಲವು ದಿನಗಳ ಹಿಂದೆ, ರಿಯಾ ಕಪೂರ್ ತನ್ನ ಅಕ್ಕ ಸೋನಂ ಕಪೂರ್, ಸ್ವರಾ ಭಾಸ್ಕರ್ ಮತ್ತು ನೋರಾ ಫತೇಹಿ ಜೊತೆ ಪಾರ್ಟಿ ಮಾಡುತ್ತಿದ್ದರು. ಈ ಪಾರ್ಟಿಯ ಕೆಲವು ಫೋಟೋಗಳು ಮಾಧ್ಯಮಗಳಲ್ಲಿ ತುಂಬಾ ವೈರಲ್ ಆಗಿವೆ. ಪಾರ್ಟಿಯ ಡೆಕೊರೇಷನ್‌ನ ಫೋಟೋವನ್ನು  ಸ್ವತಃ ರಿಯಾ ಕಪೂರ್ ಸೋಶಿಯಲ್‌ ಮೀಡಿಯಾದಲ್ಲಿ  ಹಂಚಿಕೊಂಡಿದ್ದಾರೆ.
 

510

ಆಗಸ್ಟ್ 14 ರಂದು ಖಾಸಗಿ ಸಮಾರಂಭದಲ್ಲಿ ರಿಯಾ ಕಪೂರ್ ಮತ್ತು ಕರಣ್ ಬೂಲಾನಿ  ಅವರ ಜೊತೆ ಸಪ್ತಪದಿ ತುಳಿದರು. ವಧು ಮತ್ತು ವರರ ಕುಟುಂಬಗಳನ್ನು ಹೊರತುಪಡಿಸಿ, ಈ ಮದುವೆಗೆ ಅತ್ಯಂತ ಹತ್ತಿರದ ಸಂಬಂಧಿಗಳು ಮತ್ತು ಸ್ನೇಹಿತರನ್ನು ಮಾತ್ರ ಆಹ್ವಾನಿಸಲಾಗಿತ್ತು. 

610

ರಿಯಾ ಕಪೂರ್ ಮತ್ತು ಕರಣ್ ಬೂಲಾನಿ 13 ವರ್ಷಗಳಿಂದ ಪರಸ್ಪರ ಪರಿಚಿತರು.  ಇಂಟರ್‌ನೆಟ್‌ನಲ್ಲಿ ಕರಣ್ ಜೊತೆ ರಿಯಾಳ ಅನೇಕ ಪೋಟೋಗಳಿವೆ. ಅನಿಲ್ ಕಪೂರ್ ಮಗಳು ರಿಯಾ ಬಗ್ಗೆ ಜನರಿಗೆ ಬಹಳಷ್ಟು  ಅಳಿಯ ಕರಣ್ ಬೂಲಾನಿ ಒಬ್ಬ ಉದ್ಯಮಿ ಮಾತ್ರವಲ್ಲದೆ ನಿರ್ದೇಶಕ ಮತ್ತು ನಿರ್ಮಾಪಕರೂ ಹೌದು. 

710

1982 ರಲ್ಲಿ ಜನಿಸಿದ ಕರಣ್ ಜಾಹೀರಾತು ಜಗತ್ತಿನಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಕರಣ್ ಆಸ್ಟ್ರೇಲಿಯಾದ ಬಾಂಡ್ ವಿಶ್ವವಿದ್ಯಾಲಯದಿಂದ ಚಲನಚಿತ್ರ ಮತ್ತು ಟಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಚಿಕ್ಕ ವಯಸ್ಸಿನಲ್ಲೇ, ಕರಣ್ ಅನೇಕ ಜಾಹೀರಾತುಗಳನ್ನು ತಯಾರಿಸಿದ್ದರು.

810

ಆಸ್ಟ್ರೇಲಿಯಾದಿಂದ ಅಧ್ಯಯನವನ್ನು ಮುಗಿಸಿದ ನಂತರ, ಕರಣ್ ಭಾರತಕ್ಕೆ ಮರಳಿದರು. ಇಲ್ಲಿ ಅವರು ಜಾಹೀರಾತುಗಳನ್ನು ನಿರ್ದೇಶಿಸಲು ಪ್ರಾರಂಭಿಸಿದರು. ಗೂಗಲ್, ಮಾಸ್ಟರ್‌ಕಾರ್ಡ್, ನೈಕ್, ಪೆಪ್ಸಿ, ಲೋರಿಯಲ್ ಪ್ಯಾರಿಸ್ ಮತ್ತು ಇತರ ಹಲವು ಬ್ರ್ಯಾಂಡ್‌ಗಳಿಗೆ ಕರಣ್ ಜಾಹೀರಾತುಗಳನ್ನು ರಚಿಸಿದ್ದಾರೆ.

910

2016 ರಲ್ಲಿ ಕರಣ್ ಬೂಲಾನಿ ತನ್ನ ಮಾವ, ಅನಿಲ್ ಕಪೂರ್ ಅವರ ಟಿವಿ ಸರಣಿ '24' ಅನ್ನು  ನಿರ್ದೇಶಿಸಿದರು. ಅವರೇ ಈ ಸರಣಿಯ  10 ಸಂಚಿಕೆಗಳನ್ನು ನಿರ್ದೇಶಿಸಿದ್ದಾರೆ.  ಇದರಲ್ಲಿ ಅನಿಲ್ ಕಪೂರ್, ಟಿಸ್ಕಾ ಚೋಪ್ರಾ, ಮಂದಿರ ಬೇಡಿ, ಮಾಧುರಿಮಾ ತುಲಿ, ಸಾಕ್ಷಿ ತನ್ವರ್, ಅನಿತಾ ರಾಜ್, ಅಂಗದ್ ಬೇಡಿ ಮತ್ತು ಸುಮಿತ್ ಕೌಲ್ ಕೂಡ ಕೆಲಸ ಮಾಡಿದ್ದಾರೆ.

1010

ಕರಣ್ ಬೂಲಾನಿ ತನ್ನ ಮಾವ ಅನಿಲ್ ಕಪೂರ್ ಜೊತೆ ನಿಕಟ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ.  ಅವರನ್ನು ತನ್ನ ಗೈಡ್‌ ಮತ್ತು ಸ್ಫೂರ್ತಿಯ ಮೂಲ ಎಂದು ಪರಿಗಣಿಸುತ್ತಾರೆ. ಇದರ ಹೊರತಾಗಿ, ರಿಯಾಳ ಕಸಿನ್‌  ಅರ್ಜುನ್ ಕಪೂರ್ ಮತ್ತು ಕರಣ್‌  ಉತ್ತಮ ಸ್ನೇಹಿತರು.  ಕರಣ್‌  ಸೋನಂ ಕಪೂರ್‌ ಪತಿ ಆನಂದ್ ಅಹುಜಾ ಜೊತೆ ಹಲವು ಬಾರಿ ಸುತ್ತಾಡುತ್ತಿರುವುದನ್ನು ಸಹ ನೋಡಲಾಗಿದೆ.

click me!

Recommended Stories