ಸ್ನಾನದ ವಿಡಿಯೋ ಶೇರ್​ ಮಾಡಿ ಹಲ್​ಚಲ್​ ಸೃಷ್ಟಿಸಿದ ನಟಿ ಸೋನಂ! ವೈರಲ್​ ವಿಡಿಯೋ ನೋಡಿ ನೆಟ್ಟಿಗರು ಶಾಕ್​

Published : Nov 22, 2025, 06:12 PM IST

ಜನಪ್ರಿಯ ಪಂಜಾಬಿ ನಟಿ ಸೋನಮ್ ಬಾಜ್ವಾ, ತಮ್ಮ ಜನಪ್ರಿಯತೆ ಉಳಿಸಿಕೊಳ್ಳಲು ಶವರ್ ಕೆಳಗೆ ಸ್ನಾನ ಮಾಡುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗಿದ್ದು, ಸದಾ ಮಾದಕ ಚಿತ್ರಗಳಿಂದ ಸುದ್ದಿಯಲ್ಲಿರುವ ನಟಿಯ ಈ ನಡೆ ಚರ್ಚೆಗೆ ಕಾರಣವಾಗಿದೆ.

PREV
17
ಫೇಮಸ್​ ಆಗಲು ಏನು ಬೇಕಾದ್ರೂ!

ಜನಪ್ರಿಯತೆ ಸ್ವಲ್ಪ ಕುಸಿಯುತ್ತಾ ಇದೆ ಎಂದಾಗ ಕೆಲವು ನಟಿಯರು ತಮ್ಮ ಜನಪ್ರಿಯತೆ ಉಳಿಸಿಕೊಳ್ಳಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ. ಎಲ್ಲಿಯೂ ಫೇಮಸ್​ ಆಗದಿದ್ದಾಗ ಕೊನೆಗೆ ತೀರಾ ಖಾಸಗಿ ಎನ್ನುವ ವಿಡಿಯೋಗಳನ್ನೂ ಶೇರ್​ ಮಾಡಲು ಹಿಂಜರಿಯುವುದಿಲ್ಲ ಎನ್ನುವ ಮಾತೇ ಇದೆ. ಅದನ್ನೇ ಮಾಡುವ ಮೂಲಕ ಸದಾ ಸುದ್ದಿಯಲ್ಲಿ ಇರಲು ಬಯಸುವ ನಟಿಯರಲ್ಲಿ ಒಬ್ಬರು ಸೋನಮ್ ಬಾಜ್ವಾ!

27
ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​

ಈ ನಟಿ ತಮ್ಮ ಸ್ನಾನದ ವಿಡಿಯೋ ಒಂದನ್ನು ಶೇರ್​ ಮಾಡಿ ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸಿದ್ದಾರೆ. ಕೆಲವು ತಿಂಗಳ ಹಿಂದೆ ಶೇರ್​ ಮಾಡಿರುವ ಈ ವಿಡಿಯೋ ಅನ್ನು ಮತ್ತೆ ಯಾರೋ ವೈರಲ್​ ಮಾಡಿದ್ದು, ಈ ಚಳಿಗಾಲದಲ್ಲಿಯೂ ಕೆಲವರು ಇದನ್ನು ನೋಡಿ ಮೈ ಬೆಚ್ಚಗೆ ಮಾಡಿಕೊಳ್ಳುತ್ತಿದ್ದಾರೆ!

37
ಸದಾ ಸುದ್ದಿಯಲ್ಲಿ ಇರುವಾಕೆ

ಅಂದಹಾಗೆ ನಟಿ ಸೋನಮ್​ ಬಾಜ್ವಾ ಜನಪ್ರಿಯ ಪಂಜಾಬಿ ನಟಿ. ಇವರು ಸದಾ ಮಾದಕ ಚಿತ್ರಗಳು ಮತ್ತು ವೀಡಿಯೊಗಳಿಗೇ ಫೇಮಸ್ಸು. ತಮ್ಮ ಆಕರ್ಷಕ ನೋಟದಿಂದ ಎಲ್ಲರ ತಲೆಯನ್ನು ಹೇಗೆ ತಿರುಗಿಸಬೇಕೆಂದು ಅವರಿಗೆ ಚೆನ್ನಾಗಿ ಗೊತ್ತಿದೆ. ಈ ರೀತಿಯಾಗಿಯೇ ಸದಾ ಸುದ್ದಿಯಲ್ಲಿ ಇರಲು ಬಯಸುವಾಕೆ ಈಕೆ.

47
ಮಾದಕ ವಿಡಿಯೋಶೂಟ್​

ನಟಿ ಯಾವಾಗಲೂ ತಮ್ಮ ಮಾದಕ ಮತ್ತು ಹಾಟ್ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ, ಅದು ಕೆಲವೇ ಸಮಯದಲ್ಲಿ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತದೆ ಎನ್ನುವುದು ಗೊತ್ತಿದೆ. ಆದರೆ ಇದೀಗ ಇನ್ನೂ ಒಂದು ಹಂತ ಮುಂದಕ್ಕೆ ಹೋಗಿ ಸ್ನಾನದ ವಿಡಿಯೋ ಶೇರ್ ಮಾಡಿದ್ದಾರೆ.

57
ಶವರ್​ ಕೆಳಗೆ

ಹಾಗೆಂದು ಇದೇನೂ ತೀರಾ ಅಶ್ಲೀಲತೆ ಎನ್ನುವ ಹಾಗೆ ಇಲ್ಲ. ಆದರೆ ಸ್ನಾನದ ವಿಡಿಯೋ ಎನ್ನುವ ಕಾರಣಕ್ಕೆ ಒಂದಷ್ಟು ಮಂದಿ ಕಣ್ಣರಳಿ ನೋಡುತ್ತಾರೆ ಎನ್ನುವುದು ಈಕೆಗೆ ಚೆನ್ನಾಗಿ ಗೊತ್ತಿದೆ! ಈ ವಿಡಿಯೋದಲ್ಲಿ ಸೋನಮ್, ಬ್ಯಾಕ್‌ಲೆಸ್ ಡಿಟೈಲಿಂಗ್ ಡ್ರೆಸ್​ನ ಅರ್ಧ ತೋಳಿನ ಕೆಂಪು ಉಡುಪನ್ನು ಧರಿಸಿರುವುದು ಕಂಡುಬರುತ್ತದೆ. ಶವರ್​ ಕೆಳಗೆ ನಿಂತು ಸ್ನಾನ ಮಾಡುತ್ತಿದ್ದಾರೆ.

67
ಹೃದಯದ ಎಮೋಜಿ

ಇದನ್ನು ನೋಡಿ ಹಲವರು ಈ ವಿಡಿಯೋ ಅನ್ನು ಕಣ್ತುಂಬಿಸಿಕೊಂಡಿದ್ದು, ಹೃದಯದ ಎಮೋಜಿಗಳನ್ನು ಬಿಟ್ಟಿದ್ದಾರೆ. ಕೆಲವರು ನಟಿಯನ್ನು ಎಂದಿನಂತೆ ಟ್ರೋಲ್ ಮಾಡಿದ್ದಾರೆ. ಟ್ರೋಲ್​ ಆದರೇನೇ ಫೇಮಸ್​ ಆಗೋದು ಎನ್ನುವುದು ಹಲವು ಸೆಲೆಬ್ರಿಟಿಗಳಿಗೆ ಚೆನ್ನಾಗಿ ಗೊತ್ತಿರುವ ಕಾರಣದಿಂದಲೇ ಅತ್ಯಂತ ಕನಿಷ್ಠ ಉಡುಪಿನಲ್ಲಿ ಕಾಣಿಸಿಕೊಳ್ಳುವುದು ಎಲ್ಲರಿಗೂ ತಿಳಿದದ್ದೇ.

77
ನಟಿ ಸೋನಂ ಕುರಿತು

ಇನ್ನು ನಟಿ ಸೋನಂ ಕುರಿತು ಹೇಳುವುದಾದರೆ, ಸೋನಮ್ 2012 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅವರು 2013 ರಲ್ಲಿ ಪಂಜಾಬಿ ಚಲನಚಿತ್ರ ಬೆಸ್ಟ್ ಆಫ್ ಲಕ್‌ನೊಂದಿಗೆ ತಮ್ಮ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 2014 ರ ಪಂಜಾಬ್ 1984 ಚಲನಚಿತ್ರದಲ್ಲಿ ಪ್ರಮುಖ ಮಹಿಳಾ ಪಾತ್ರವನ್ನು ನಿರ್ವಹಿಸಿದರು ಮತ್ತು 2020 ರಲ್ಲಿ ಅರ್ದಾಬ್ ಮುತಿಯರನ್ ಗಾಗಿ ಅತ್ಯುತ್ತಮ ನಟಿಗಾಗಿ PTC ಪಂಜಾಬಿ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದರು. ಅವರು 2014 ರಲ್ಲಿ ತಮಿಳು ಪ್ರಣಯ ಹಾಸ್ಯ ಕಪ್ಪಲ್‌ನಲ್ಲಿಯೂ ಕಾಣಿಸಿಕೊಂಡಿದ್ದಾರೆ.

Read more Photos on
click me!

Recommended Stories