Bollywood Wedding Bell: ಸಲ್ಮಾನ್‌ ಸಂಬಂಧಿ ಮದುವೆಯಾಗುತ್ತಾರೆ ಸೋನಾಕ್ಷಿ ಸಿನ್ಹಾ?

First Published | Nov 29, 2021, 9:24 PM IST

ಬಾಲಿವುಡ್‌ನಲ್ಲಿ ಮದುವೆಯ ಸೀಸನ್‌ ನಡೆಯುತ್ತಿದೆ. ಈ ಋತುವಿನಲ್ಲಿ ಅನೇಕ ಜೋಡಿಗಳು ಹಸೆಮಣೆ ಏರಲು ಸಿದ್ಧವಾಗಿವೆ. ಕೆಲವರು ಅದಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಇದರಲ್ಲಿ ಬಹು ನಿರೀಕ್ಷಿತ ಹೆಸರುಗಳು ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್  (Katrina Kaif), ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt). ಈ ಲಿಸ್ಟ್‌ಗೆ  ಮತ್ತೊಬ್ಬ ಪ್ರಸಿದ್ಧ ಮುಖ ಸೇರಲಿದೆ. ಅವರು  ‘ದಬಾಂಗ್ ಗರ್ಲ್‌’ ಸೋನಾಕ್ಷಿ ಸಿನ್ಹಾ (Sonakshi Sinha). ಅಂದಹಾಗೆ ಸೋನಾಕ್ಷಿ ಮದುವೆಯ ನಂತರ ಸಲ್ಮಾನ್‌ ಖಾನ್‌ ಮನೆಯ ಸೊಸೆಯಾಗಲಿದ್ದಾರೆ? ಹಾಗದರೆ ಸೋನಾಕ್ಷಿ ಮದುವೆಗೂ ಸಲ್ಮಾನ್‌ಗೂ ಏನು ಸಂಬಂಧ? ಇಲ್ಲಿದೆ ವಿವರ.

ಹೌದು, ಶತ್ರುಘ್ನ ಸಿನ್ಹಾ ಪುತ್ರಿ ಸೋನಾಕ್ಷಿ ಕೂಡ ಬಾಯ್ ಫ್ರೆಂಡ್ ಜೊತೆ ಸೆಟ್ಲ್ ಆಗಲು ತಯಾರಿ ನಡೆಸುತ್ತಿದ್ದಾರೆ. ಸದ್ಯದಲ್ಲೇ ವಧುವಿನ ಡ್ರೆಸ್ಸಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮದುವೆಯಾದ ನಂತರ ಸೋನಾಕ್ಷಿ ಸಲ್ಮಾನ್ ಖಾನ್ ಮನೆಯ 'ಬಹುರಾಣಿ' ಆಗುತ್ತಾರೆ. ಸಲ್ಮಾನ್ ಮನೆಯಲ್ಲಿ ಈ  ನಟಿ ಯಾರನ್ನು ಮದುವೆಯಾಗುತ್ತಾರೆ  ಗೊತ್ತಾ? 

ಸೋನಾಕ್ಷಿ ಸಿನ್ಹಾ ಸೆಲೆಬ್ರಿಟಿ ಮ್ಯಾನೇಜರ್ ಬಂಟಿ ಸಜ್ದೇಹ್ ಜೊತೆ ಸಂಬಂಧ ಹೊಂದಿದ್ದಾರೆ. ಆದರೂ ಅವರು ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ನಟಿ ಬಂಟಿ ಸಜ್ದೇಹ್ ಅವರೊಂದಿಗೆ ಬಹಳ ದಿನಗಳಿಂದ ಡೇಟಿಂಗ್ ನಡೆಸುತ್ತಿದ್ದಾರೆ ಮತ್ತು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಇದೆ.

Tap to resize

ಬಂಟಿ ಸಜ್ದೇಹ್ ಅವರು ಸಲ್ಮಾನ್ ಖಾನ್ ಸಂಬಂಧಿಕರು ಜೊತೆಗೆ ಅವರ ಸ್ನೇಹಿತ. ವಾಸ್ತವವಾಗಿ, ಅವರು ಸಲ್ಮಾನ್ ಸಹೋದರ ಸೋಹಲ್ ಖಾನ್ ಅವರ ಪತ್ನಿ ಸೀಮಾ ಅವರ ಸಹೋದರ. ಅವರು ಸಲೀಂ ಖಾನ್ ಮನೆಗೆ ಭೇಟಿ ನೀಡುತ್ತಲೇ ಇರುತ್ತಾರೆ.
 

ಬಂಟಿಯ ವಿಚ್ಛೇದನ ಪಡೆದಿದ್ದಾರೆ. 2009 ರಲ್ಲಿ, ಬಂಟಿ ಗೋವಾದಲ್ಲಿ ಅಂಬಿಕಾ ಚೌಹಾನ್ ಅವರನ್ನು ವಿವಾಹವಾಗಿದ್ದರು. ಸರ್‌ಪ್ರೈಸ್‌ ನೀಡಲು ಸಲ್ಮಾನ್ ಖಾನ್ ಕೂಡ ಈ ಮದುವೆಯಲ್ಲಿ  ಕೊನೆ ಗಳಿಗೆಯಲ್ಲಿ ಹಾಜರಾಗಿದ್ದರು. ಆದರೆ ಈ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ. ನಾಲ್ಕು ವರ್ಷಗಳ ನಂತರ ಬಂಟಿ ವಿಚ್ಛೇದನ ಪಡೆದರು.

ಬಂಟಿ ಅವರು 'ಕಾರ್ನರ್ ಸ್ಟೋನ್' ಎಂಬ PR ಏಜೆನ್ಸಿಯ ಮಾಲೀಕರಾಗಿದ್ದಾರೆ. ಬಾಲಿವುಡ್‌ನಿಂದ ಕ್ರಿಕೆಟ್ ಲೋಕದವರೆಗಿನ ಅನೇಕ ಸೆಲೆಬ್ರೆಟಿಗಳು ಅವರ ಗ್ರಾಹಕರು. ವಿರಾಟ್ ಕೊಹ್ಲಿ ಮತ್ತು ಬಂಟಿ ತುಂಬಾ ಕ್ಲೋಸ್‌  ಫ್ರೆಂಡ್ಸ್. ಇದೇ ಕಂಪನಿಯಲ್ಲಿ ದಿಶಾ ಸಾಲಿಯಾನ್ ಕೆಲಸ ಮಾಡುತ್ತಿದ್ದರು. ಅಲ್ಲಿ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್‌ ಆಗಿದ್ದರು.

ಸೋನಾಕ್ಷಿ ಮತ್ತು ಬಂಟಿ ಕಳೆದ 3-4 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ನಂಬಲಾಗಿದೆ. ಆದರೆ, ಈ ಸಂಬಂಧದ ಬಗ್ಗೆ ಇಬ್ಬರೂ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಅನೇಕ ಕಾರ್ಯಕ್ರಮಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಸಲ್ಲು ಭಾಯಿ, ಮತ್ತೊಬ್ಬ ಬಾಲಿವುಡ್‌ ಸ್ಟಾರ್‌ ಮದುವೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.   
 
 

Latest Videos

click me!