Actress's LIfe: ಮದುವೆಯಾಗದೆ ಮಗು, ನಟಿ ತನ್ನ ಮಗಳ ಬಗ್ಗೆ ಹೇಳಿದ್ದಿಷ್ಟು!

First Published | Nov 29, 2021, 7:46 PM IST

'ಸಾಹಬ್ ಬೀವಿ ಔರ್ ಗ್ಯಾಂಗ್‌ಸ್ಟರ್ 3' ಚಿತ್ರದಲ್ಲಿ ಸಂಜಯ್ ದತ್  (Sanjay Dutt) ಅವರೊಂದಿಗೆ ಕೆಲಸ ಮಾಡಿದ ನಟಿ ಮಹಿ ಗಿಲ್ (Mahie Gill) ಅವರು ಇತ್ತೀಚಿಗೆ ತಮ್ಮ ವೆಬ್ ಸರಣಿ 'ಯುವರ್ ಆನರ್ ಸೀಸನ್ 2' (Your Honor Season 2) ಗಾಗಿ ಸುದ್ದಿಯಲ್ಲಿದ್ದಾರೆ. ಮಾಹಿ ಗಿಲ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಮಾಹಿ ಗಿಲ್ ಮದುವೆಯಾಗಿಲ್ಲ, ಆದರೆ ಅವಳು 5 ವರ್ಷದ ಮಗಳು ವೆರೋನಿಕಾಳ ತಾಯಿಯಾಗಿದ್ದಾರೆ. ಮಾಹಿ ಗಿಲ್‌ ಲೈಫ್‌ ಬಗ್ಗೆ ಒಂದಷ್ಟು ಮಾಹಿತಿ. 

ನನ್ನ ಮಗಳನ್ನೂ ಸ್ವಾವಲಂಬಿಯನ್ನಾಗಿ ಮಾಡಲು ಪ್ರಯತ್ನಿಸುತ್ತೇನೆ ಎಂದು ಮಾಹಿ ಸಂದರ್ಶನದಲ್ಲಿ ಹೇಳಿದ್ದಾರೆ. ಒಬ್ಬ ತಾಯಿಯಾಗಿ ಆಕೆ ಉತ್ತಮ ಶಿಕ್ಷಣ ಪಡೆದು, ಇತರೆ ಚಟುವಟಿಕೆಗಳಲ್ಲೂ ತಮ್ಮದೇ ಆದ ಐಡೆಂಟಿಟಿಯನ್ನು ಮೂಡಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಮಾಹಿ ಗಿಲ್ ಮಗಳು ಮತ್ತು ಲಿವ್-ಇನ್ ರಿಲೆಷನ್‌ಶಿಪ್‌ ಪಾರ್ಟ್‌ನರ್‌ ಜೊತೆ ವಾಸಿಸುತ್ತಿದ್ದಾರೆ. 

ಮಾಹಿ ಗಿಲ್ ತನ್ನ ವೈಯಕ್ತಿಕ ಜೀವನವನ್ನು ಖಾಸಗಿಯಾಗಿ ಇರಿಸಿಕೊಳ್ಳಲು ಬಯಸುತ್ತಾರೆ. ಇನ್ನು ಮದುವೆ ಆಗಿಲ್ಲ, ರಿಲೇಶನ್ ಶಿಪ್‌ನಲ್ಲಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಮಹಿ ಹೇಳಿದ್ದರು. ಮಹಿ ಹೇಳುವಂತೆ ತಾನು ಮಗಳ ತಾಯಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು.

Tap to resize

Mahi Gill

ತನಗೆ ಯಾವಾಗ ಬೇಕಾದರೂ ಮದುವೆಯಾಗಬಹುದು, ಆದರೆ ಮದುವೆಯ ಅವಶ್ಯಕತೆ ಏನಿದೆ ಎಂದು ಮಹಿ ಕೆಲವು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದು ಎಲ್ಲಾ ಆಲೋಚನೆ ಮತ್ತು ಸಮಯವನ್ನು ಅವಲಂಬಿಸಿರುತ್ತದೆ. ಮದುವೆ ಇಲ್ಲದೆಯೂ ಕುಟುಂಬಗಳು ಮತ್ತು ಮಕ್ಕಳು ಸಂಭವಿಸಬಹುದು ಎಂದು ನಟಿ ಹೇಳಿದ್ದಾರೆ.

ಮದುವೆಯಾಗದೆಯೇ ಮಕ್ಕಳನ್ನು ಹೊಂದುವುದರಲ್ಲಿ ಯಾವುದೇ ತೊಂದರೆ ಇಲ್ಲ, ಎಂದು ಮಾಹಿ ಭಾವಿಸುತ್ತಾರೆ. ಮಾಹಿ ಗಿಲ್ ಪ್ರಕಾರ, ಮದುವೆಯು ಒಂದು ಸುಂದರ ಭಾವನೆ. ಆದರೆ, ಅದನ್ನು ಮಾಡಬೇಕೆ ಅಥವಾ ಬೇಡವೇ ಎಂಬುದು ನಿಮ್ಮ ವೈಯಕ್ತಿಕ ಆಯ್ಕೆ ಮೇಲೆ ಅವಲಂಬಿತವಾಗಿರುತ್ತದೆ.

ಮಾಹಿ ಗಿಲ್ ಪ್ರಸ್ತುತ ಗೋವಾದಲ್ಲಿ (Goa) ತನ್ನ ಲಿವ್-ಇನ್ ಪಾರ್ಟನರ್‌ (Live in parnter) ಮತ್ತು ಮಗಳೊಂದಿಗೆ ವಾಸಿಸುತ್ತಿದ್ದಾರೆ. ಆಗಸ್ಟ್ 2021 ರಲ್ಲಿ, ಅವರ ಮಗಳಿಗೆ 5 ವರ್ಷ ತುಂಬಿದೆ. ಆದರೂ ಮಧ್ಯೆ ಮಧ್ಯೆ ಮುಂಬೈ (Mumbai)ಗೆ ಭೇಟಿ ಕೊಡುತ್ತಾ ಇರುತ್ತಾರೆ. 

ಸಲ್ಮಾನ್ ಖಾನ್ ಅವರ ದಬಾಂಗ್ 2ನಲ್ಲಿ ಕೆಲಸ ಮಾಡಿದ್ದಕ್ಕಾಗಿ ಮಾಹಿ ಗಿಲ್ ಇನ್ನೂ ವಿಷಾದಿಸುತ್ತಿದ್ದಾರೆ.ಈ ಚಿತ್ರದಲ್ಲಿ ಅವರು ಅರ್ಬಾಜ್ ಖಾನ್ ಅವರ ಪತ್ನಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಇದು ಚಿಕ್ಕ ಪಾತ್ರ, ಆದರೆ ನಂತರ ಅವರು ದೊಡ್ಡ ಪಾತ್ರಗಳ ಬದಲಿಗೆ ಸಣ್ಣ ಪಾತ್ರಗಳನ್ನು ಪಡೆಯಲು ಪ್ರಾರಂಭಿಸಿದರು. ನಂತರ 'ದಬಾಂಗ್ 3’ ತಂಡ ಮಹಿ ಅವರನ್ನು ಸಂಪರ್ಕಿಸಿರಲಿಲ್ಲ.

ನಾನು ನನ್ನಷ್ಟಕ್ಕೆ ಇರಲು ಇಷ್ಟಪಡುತ್ತೇನೆ. ನನಗೆ ಕೆಲವು ಸ್ನೇಹಿತರಿದ್ದಾರೆ. ನನ್ನನ್ನು ನೋಡಿದ ನಂತರ ಜನರು ನನ್ನನ್ನು ನಿಗೂಢ ವ್ಯಕ್ತಿ ಎಂದು ಭಾವಿಸುತ್ತಾರೆ. ಅವರ ಮಾತನ್ನು ನಾನು ಕಂಪ್ಲಿಮೇಂಟ್‌ ಎಂದು ತೆಗೆದುಕೊಳ್ಳುತ್ತೇನೆ. ಅವರ ಮಾತನ್ನು ಹೆಚ್ಚಿನ ಮಟ್ಟಿಗೆ ಒಪ್ಪುತ್ತೇನೆ. ನಾನು ಉದ್ದೇಶಪೂರ್ವಕವಾಗಿ ನನ್ನ ವ್ಯಕ್ತಿತ್ವವನ್ನು ನಿಗೂಢವಾಗಿ ಇಟ್ಟುಕೊಂಡಿದ್ದೇನೆ. ಇದನ್ನು ಮಾಡುವುದರಿಂದ ಜನರು ನನ್ನ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ, ಎಂದು ಮಾಹಿ ಹೇಳುತ್ತಾರೆ.

ಮಾಹಿ ಗಿಲ್ ತನ್ನ ವೃತ್ತಿ ಜೀವನವನ್ನು 2003ರ ಸಿನಿಮಾ ಹವಾಯೆ ಮೂಲಕ ಪ್ರಾರಂಭಿಸಿದರು. ಆದಾಗ್ಯೂ, ಇದು ಅವರಿಗೆ ಯಾವುದೇ ವಿಶೇಷ ಹೆಸರು ನೀಡಲಿಲ್ಲ. ಇದರ ನಂತರ ಅವರು ಇನ್ನೂ ಕೆಲವು ಚಿತ್ರಗಳನ್ನು ಮಾಡಿದರು ಮತ್ತು 6 ವರ್ಷಗಳ ನಂತರ ಜನರು 2009 ರ 'ದೇವ್ ಡಿ' ಸಿನಿಮಾದಿಂದ ಮಾಹಿ ಜನರ ಗಮನ ಸೆಳೆದರು.

ಮಾಹಿ ಗಿಲ್ ಇದುವರೆಗೆ ಸುಮಾರು 33 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವುಗಳಲ್ಲಿ ಖೋಯಾ ಖೋಯಾ ಚಂದ್, ದೇವ್ ಡಿ, ಗುಲಾಲ್, ದಬಾಂಗ್, ಸಾಹಬ್ ಬೀವಿ ಔರ್ ಗ್ಯಾಂಗ್‌ಸ್ಟರ್, ಸಾಹಬ್ ಬೀವಿ ಔರ್ ಗ್ಯಾಂಗ್‌ಸ್ಟರ್ ರಿಟರ್ನ್ಸ್, ಸಾಹಬ್ ಬೀವಿ ಔರ್ ಗ್ಯಾಂಗ್‌ಸ್ಟರ್ 3, ಮೈಕೆಲ್, ಪಾನ್ಸಿಂಗ್ ತೋಮರ್, ದಬಾಂಗ್ 2, ಜಂಜೀರ್, ಬುಲೆಟ್ ರಾಜಾ, ದುರ್ಗಮತಿ ಸೇರಿವೆ.

Latest Videos

click me!