ಸೋನಾಕ್ಷಿ ಸಿನ್ಹಾ - ಕತ್ರಿನಾ ಕೈಫ್: ಸಲ್ಮಾನ್‌ ಬಾಲಿವುಡ್‌ನಲ್ಲಿ ಲಾಂಚ್‌ ಮಾಡಿದ ನಟಿಯರು!

Suvarna News   | Asianet News
Published : Mar 02, 2021, 06:09 PM ISTUpdated : Mar 02, 2021, 06:19 PM IST

ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಿನಿಮಾರಂಗದಲ್ಲಿ ತಾವು ಬೆಳೆಯುವುದರ ಜೊತೆಗೆ ಹಲವರಿಗೆ ಅವಕಾಶ ನೀಡಿದ್ದಾರೆ. ಸಾಕಷ್ಟು ನಟ-ನಟಿಯರುನ್ನು ಹಿಂದಿ ಸಿನಿಮಾಕ್ಕೆ ಪರಿಚಯಿಸಿದ ಕೀರ್ತಿ ಸಲ್ಮಾನ್‌ಗೆ ಸಲ್ಲುತ್ತದೆ. ಹಲವು ನಾಯಕಿಯರನ್ನು ಬಾಲಿವುಡ್‌ನಲ್ಲಿ ಲಾಂಚ್‌ ಮಾಡಿದ್ದಾರೆ. ಶತ್ರುಘ್ನಾ ಸಿನ್ಹಾರ ಪುತ್ರಿ ಸೋನಾಕ್ಷಿಯಿಂದ ಹಿಡಿದು, ಸುನೀಲ್‌ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಮತ್ತು  ಕತ್ರಿನಾ ಕೈಫ್‌‌ವರೆಗೆ ಹಲವು ನಟಿಯರು ಈ ಪಟ್ಟಿಯಲ್ಲಿದ್ದಾರೆ. ಸಲ್ಮಾನ್ ಬೆಳೆಸಿದ ಕಲಾವಿದರ ಪಟ್ಟಿ ಇಲ್ಲಿದೆ.

PREV
114
ಸೋನಾಕ್ಷಿ ಸಿನ್ಹಾ - ಕತ್ರಿನಾ ಕೈಫ್: ಸಲ್ಮಾನ್‌ ಬಾಲಿವುಡ್‌ನಲ್ಲಿ ಲಾಂಚ್‌ ಮಾಡಿದ ನಟಿಯರು!

ಡೈಸಿ ಷಾ: 
ಸಲ್ಮಾನ್ ಖಾನ್ ಅವರ ರೇಸ್ 3 ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ನಟಿ ಡೈಸಿ ಷಾರನ್ನು ಸಲ್ಮಾನ್‌ 2014ರ   ಜೈ ಹೋ ಸಿನಿಮಾದ ಮೂಲಕ ಲಾಂಚ್‌ ಮಾಡಿದ್ದರು.ಇದಕ್ಕೂ ಮೊದಲು, 2003ರ  'ತೇರೆ ನಾಮ್' ಚಿತ್ರದ ಹಾಡಿನಲ್ಲಿ ಡೈಸಿ ಷಾ ಡ್ಯಾನ್ಸ್‌ ಮಾಡಿದ್ದರು. ಸಲ್ಮಾನ್ ಜೊತೆ ಕೆಲಸ ಮಾಡಿದ ನಂತರವೂ ಡೈಸಿ ಹೆಚ್ಚಿನ ಯಶಸ್ಸು ಗಳಿಸುವಲ್ಲಿ ವಿಫಲರಾದರು.

214

ಕತ್ರಿನಾ ಕೈಫ್: 
ಕತ್ರಿನಾ ಕೈಫ್ ಬಾಲಿವುಡ್‌ನ ಅತ್ಯಂತ ದುಬಾರಿ ಮತ್ತು ಯಶಸ್ವಿ ನಟಿಯರಲ್ಲಿ ಒಬ್ಬರು. ಕ್ಯಾಟ್ 'ಬೂಮ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದರ ನಂತರ ಅವರು ಸಲ್ಮಾನ್  ಜೊತೆ ಸಂಬಂಧದಲ್ಲಿದ್ದರು ಮತ್ತು ಸಲ್ಮಾನ್ ಹೋಮ್‌ ಪ್ರೊಡಕ್ಷನ್‌  'ಮೈನೆ ಪ್ಯಾರ್ ಕ್ಯುನ್ ಕಿಯಾ' ದಲ್ಲಿ ಕೆಲಸ ಮಾಡಿದರು. ಕತ್ರಿನಾ ಯಶಸ್ಸಿನ ಹಿಂದೆ ಸಲ್ಮಾನ್ ಕೈ ಇದೆ.

314

ಸೋನಾಕ್ಷಿ ಸಿನ್ಹಾ: 
2010ರಲ್ಲಿ ಸತ್ರುಘನ್ ಸಿನ್ಹಾ ಪುತ್ರಿ ಸೋನಾಕ್ಷಿ ಸೂಪರ್‌ಸ್ಟಾರ್‌ರ‌ ಹೋಮ್‌ ಪ್ರೊಡಕ್ಷನ್‌  ದಬಾಂಗ್ ಮೂಲಕ ಬಾಲಿವುಡ್ ಪ್ರವೇಶಿಸಿದರು. ದಬಾಂಗ್ ನಂತರದ ಎರಡು ಸಿಕ್ವೇಲ್‌ಗಳಲ್ಲೂ ಸೋನಾಕ್ಷಿ ಪ್ರಮುಖ ನಟಿ.

414

ಭೂಮಿಕಾ ಚಾವ್ಲಾ: 
2003ರಲ್ಲಿ ಬಿಡುಗಡೆಯಾದ 'ತೇರೆ ನಾಮ್' ಚಿತ್ರದಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಪಾದಾರ್ಪಣೆ ಮಾಡಿದ ಭೂಮಿಕಾ ಚಾವ್ಲಾ ಅವರ ವೃತ್ತಿಜೀವನ ಅಷ್ಟೇನೂ ಯಶಸ್ಸು ಕಾಣಲಿಲ್ಲ. ಅವರು ದಿಲ್ ನೆ ಜೀಸೆ ಅಪ್ನಾ ಕಹಾ, ಸಿಲ್ಸಿಲೆ ಮತ್ತು ಗಾಂಧಿ ಮೈ ಫಾದರ್ ನಂತಹ ಕೆಲವು ಚಿತ್ರಗಳಲ್ಲಿ ನಟಿಸಿದರು. 'ಧೋನಿ: ದಿ ಅನ್ಟೋಲ್ಡ್ ಸ್ಟೋರಿ' ಚಿತ್ರದಲ್ಲಿಯೂ ಧೋನಿಯ ಸಹೋದರಿ ಪಾತ್ರದಲ್ಲಿ ಇವರನ್ನು ಕಾಣಬಹುದು.

514

ರವೀನಾ ಟಂಡನ್:
ಸಲ್ಮಾನ್ ಖಾನ್ ಅವರ ಮೊದಲ ಚಿತ್ರ 'ಪಥರ್ ಕೆ ಫೂಲ್' ನಲ್ಲಿ ಕಾಣಿಸಿಕೊಂಡ ರವೀನಾ ಟಂಡನ್ ಬಾಲಿವುಡ್‌ನ ಯಶಸ್ವಿ ನಟಿಯರಲ್ಲಿ ಒಬ್ಬರು. ರವೀನಾರನ್ನು ಲಾಂಚ್‌ ಮಾಡಿದ್ದು ಸಲ್ಮಾನ್‌ ಅಲ್ಲ. ಆದರೂ ಸಲ್ಮಾನ್ ಶಿಫಾರಸಿನ ನಂತರವೇ ರವೀನಾಗೆ 'ಪಥರ್ ಕೆ ಫೂಲ್' ಚಿತ್ರದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿತು. ಇದರ ನಂತರ ರವೀನಾ ಅನೇಕ ಸೂಪರ್‌ಹಿಟ್‌ ಸಿನಿಮಾಗಳನ್ನು ನೀಡಿದರು.

614

ರೇವತಿ: 
ನಟಿ ರೇವತಿ ಬಾಲಿವುಡ್‌ಗೆ ಬರುವ ಮೊದಲು ಸೌತ್‌ನಲ್ಲಿ  ಅನೇಕ ಚಿತ್ರಗಳನ್ನು ಮಾಡಿದ್ದರು. ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ಜೊತೆ 1991ರ  'ಲವ್' ಸಿನಿಮಾದಲ್ಲಿ ಕಾಣಿಸಿಕೊಂಡರು. ಚಿತ್ರ ಹಿಟ್‌ ಆಯಿತು. ನಂತರ ರೇವತಿಗೆ ಬಾಲಿವುಡ್‌ನಲ್ಲಿ ಹೆಚ್ಚು ಯಶಸ್ಸು ಸಿಗಲಿಲ್ಲ. ದಕ್ಷಿಣ ಭಾರತೀಯ ಸಿನಿಮಾ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

714

ನಗ್ಮಾ: 
ನಟಿ ಕಮ್‌ ರಾಜಕಾರಣಿ ನಗ್ಮಾರನ್ನೂ ಲಾಂಚ್‌ ಮಾಡಿದ್ದು ಸಲ್ಮಾನ್ ಖಾನ್. 'ಬಾಘಿ' ಚಿತ್ರದಲ್ಲಿ ಸಲ್ಮಾನ್ ಮತ್ತು ನಗ್ಮಾರ ಜೋಡಿಯನ್ನು ಪ್ರೇಕ್ಷಕರು ಇಷ್ಟಪಟ್ಟರು.

814

ಜರೀನ್ ಖಾನ್: 
ಕತ್ರಿನಾ ಕೈಫ್ ಅವರ ಲುಕ್‌ಲೈಕ್ ಎಂದೂ ಕರೆಯಲ್ಪಡುವ ಜರೀನ್‌ ಖಾನ್ ಅವರನ್ನು ಸಹ ಸಲ್ಮಾನ್ ಖಾನ್ ಲಾಂಚ್‌ ಮಾಡಿದರು  ಜರೀನ್ 2010ರಲ್ಲಿ ಬಿಡುಗಡೆಯಾದ ವೀರ್ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

914

ಸ್ನೇಹಾ ಉಲ್ಲಾಳ್:
ಐಶ್ವರ್ಯಾ ರೈ ಅವರನ್ನು ಹೋಲುವ ನಟಿ ಸ್ನೇಹಾ ಉಲ್ಲಾಲ್ 2005ರಲ್ಲಿ ಸಲ್ಮಾನ್ ಖಾನ್ ಅವರ 'ಲಕ್ಕಿ' ಚಿತ್ರದೊಂದಿಗೆ ಸಿನಿಮಾಕ್ಕೆ ಕಾಲಿಟ್ಟರು. ಐಶ್ವರ್ಯಾದಿಂದ ಬೇರ್ಪಟ್ಟ ನಂತರ ಸಲ್ಮಾನ್ ಅವರಂತೆ ಕಾಣುವ ನಟಿಯನ್ನು ಹುಡುಕುತ್ತಿದ್ದರು ಎಂದು ಹೇಳಲಾಗಿದೆ. ಆದರೆ, ಸ್ನೇಹ ಅವರ ಬಾಲಿವುಡ್ ವೃತ್ತಿಜೀವನ ಯಶಸ್ವಿಯಾಗಲಿಲ್ಲ. ಅನಾರೋಗ್ಯದ ಕಾರಣ ಸ್ನೇಹ  ಚಿತ್ರಗಳಿಂದ ದೂರವೇ ಉಳಿದಿದ್ದರು 

1014

ಅಥಿಯಾ ಶೆಟ್ಟಿ: 
ಸುನಿಲ್ ಶೆಟ್ಟಿಯವರ ಪುತ್ರಿ ಅಥಿಯಾ ಶೆಟ್ಟಿ ಸಲ್ಮಾನ್ ಖಾನ್ ನಿರ್ಮಾಣದ 'ಹೀರೋ' ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಸಲ್ಮಾನ್ ಖಾನ್ ಮತ್ತು ಸುನಿಲ್ ಶೆಟ್ಟಿ ತುಂಬಾ ಒಳ್ಳೆಯ ಸ್ನೇಹಿತರು. ಅಥಿಯಾ ನಂತರ ಇನ್ನೂ ಕೆಲವು ಚಿತ್ರಗಳನ್ನು ಮಾಡಿದರೂ, ಇದುವರೆಗೆ  ಹೆಚ್ಚಿನ ಯಶಸ್ಸನ್ನು ಗಳಿಸಿಲ್ಲ.

1114

ಸನಾ ಖಾನ್: 
ನಟಿ ಸನಾ ಖಾನ್ ಅವರನ್ನು 'ಬಿಗ್ ಬಾಸ್' ನಲ್ಲಿ ನೋಡಿದ ನಂತರ ಸಲ್ಮಾನ್ ಅವರು ತಮ್ಮ 'ಜೈ ಹೋ' ಚಿತ್ರದ ಮೂಲಕ ಲಾಂಚ್‌ ಮಾಡಿದರು. ಆದರೆ, ಸನಾ ಕೂಡ ಹೆಚ್ಚಿನ ಯಶಸ್ಸನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಕೆಲವು ತಿಂಗಳ ಹಿಂದೆ ಸನಾ ಖಾನ್ ಚಿತ್ರರಂಗವನ್ನು ಶಾಶ್ವತವಾಗಿ ತೊರೆದರು. 

1214

ವರೀನಾ ಹುಸೇನ್: 
ಸಲ್ಮಾನ್ ಖಾನ್, ತಮ್ಮ ಸೋದರ ಆಳಿಯ ಆಯುಷ್ ಶರ್ಮಾ ಜೊತೆ ನಟಿ ವರೀನಾ ಹುಸೇನ್ ಅವರ 'ಲವ್ಯಾತ್ರಿ' ಚಿತ್ರ ಲಾಂಚ್‌ ಮಾಡಿದರು. ಚಸಿನಿಮಾ ಹಿಟ್‌ ಆಗಲಿಲ್ಲ. ಆದರೆ ಹಾಡುಗಳು ಫೇಮಸ್‌ ಆದವು.

1314

ಪ್ರಣುತಾನ್: 
ಸಲ್ಮಾನ್ ಖಾನ್ ತಮ್ಮ ನಿರ್ಮಾಣದ  'ನೋಟ್ಬುಕ್' ಚಿತ್ರದಿಂದ ಮೊಹ್ನೀಶ್ ಬಹ್ಲ್ ಅವರ ಪುತ್ರಿ ಪ್ರಣುತಾನ್ ಅವರನ್ನು ಲಾಂಚ್ ಮಾಡಿದರು.  

1414

ಸಾಯಿ ಮಂಜ್ರೇಕರ್: 
ಸಲ್ಮಾನ್ ಖಾನ್ ತಮ್ಮ ಸ್ನೇಹಿತ ಮಹೇಶ್ ಮಂಜ್ರೇಕರ್ಪುತ್ರಿ ಸಾಯಿ ಅವರನ್ನು 'ದಬಾಂಗ್ 3' ಚಿತ್ರ ಮೂಲಕ ಪರಿಚಯಿಸಿದರು.

click me!

Recommended Stories