ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಅವರ OMG 2 ಬಾಲಿವುಡ್ ಚಿತ್ರ ಶುಕ್ರವಾರ ಬಿಡುಗಡೆಯಾಗಿದೆ. ಆದರೆ, ಈ ಚಿತ್ರಕ್ಕೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಬಾಲಿವುಡ್ ನಟನ ಮೇಲೆ ಕಪಾಳಮೋಕ್ಷ ಅಥವಾ ಉಗುಳುವ ಯಾರಿಗಾದರೂ ರಾಷ್ಟ್ರೀಯ ಹಿಂದೂ ಪರಿಷತ್ ಭಾರತ್ ಸಂಘಟನೆ ಬಹುಮಾನವನ್ನು ಘೋಷಿಸಿದೆ.
ಅಕ್ಷಯ್ ಕುಮಾರ್ ಅವರು OMG 2 ಚಿತ್ರದಲ್ಲಿ ಶಿವನ ಮೆಸೆಂಜರ್ ಪಾತ್ರ ಮಾಡಿದ್ದಾರೆ. ಅಲ್ಲದೆ, ಶಾಲೆಗಳಲ್ಲಿ ಲೈಂಗಿಕ ಶಿಕ್ಷಣದ ಕುರಿತ ಅಂಶ ಚಿತ್ರದಲ್ಲಿದೆ. ಈ ಮೂಲಕ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕಾಗಿ ಬಾಲಿವುಡ್ ನಟನ ಮೇಲೆ ಕಪಾಳಮೋಕ್ಷ ಅಥವಾ ಉಗುಳುವ ಯಾರಿಗಾದರೂ ರಾಷ್ಟ್ರೀಯ ಹಿಂದೂ ಪರಿಷತ್ ಭಾರತ್ ಸಂಘಟನೆ 10 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.
ಡ್ರೆಡ್‌ಲಾಕ್ ಮತ್ತು ಬೂಟುಗಳೊಂದಿಗೆ ಅಕ್ಷಯ್ ಕುಮಾರ್ ಅವರ ಲುಕ್, ಕಚೋರಿಗಳನ್ನು ಖರೀದಿಸುವುದು ಮತ್ತು ಕೊಳಕು ಕೊಳದಲ್ಲಿ ಸ್ನಾನ ಮಾಡುವ ಬಗ್ಗೆ ಅವರು ವಿಶೇಷವಾಗಿ ಅಸಮಾಧಾನಗೊಂಡಿದ್ದಾರೆ ಎಂದು ರಾಷ್ಟ್ರೀಯ ಹಿಂದೂ ಪರಿಷತ್ ಭಾರತ್ ಅಧ್ಯಕ್ಷ ಗೋವಿಂದ್ ಪರಾಶರ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಇದು ಶಿವನ ಪ್ರತಿಷ್ಠೆಗೆ ಧಕ್ಕೆ ತರುತ್ತಿದೆ ಎಂದೂ ಅವರು ಹೇಳಿದ್ದಾರೆ. ಹಾಗೂ, ಸೆನ್ಸಾರ್ ಮಂಡಳಿ ಮತ್ತು ಕೇಂದ್ರ ಸರ್ಕಾರದಿಂದ ಚಿತ್ರವನ್ನು ನಿಷೇಧಿಸುವಂತೆ ಸಂಘಟನೆಯು ಒತ್ತಾಯಿಸಿದೆ ಎಂದೂ ವರದಿಯು ಸೂಚಿಸುತ್ತದೆ.
ಈ ಮದ್ಯೆ, OMG 2 ಬಿಡುಗಡೆಯಾದ ಮೊದಲ ದಿನದಂದು ಬಾಕ್ಸ್ ಆಫೀಸ್‌ನಲ್ಲಿ 10.26 ಕೋಟಿ ರೂ. ಗಳಿಕೆ ಮಾಡಿದೆ. ಅದೇ ದಿನ ಬಿಡುಗಡೆಯಾದ ಸನ್ನಿ ಡಿಯೋಲ್‌ನ Gadar 2 ಚಿತ್ರ 40 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಗಿದೆ. OMG 2 ನಲ್ಲಿ ಪಂಕಜ್ ತ್ರಿಪಾಠಿ ಮತ್ತು ಯಾಮಿ ಗೌತಮ್ ಕೂಡ ನಟಿಸಿದ್ದಾರೆ. ಇದು ಭಾರತೀಯ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣದ ಸುತ್ತ ಸುತ್ತುವ ತನ್ನ ಕಥಾವಸ್ತು ಹೊಂದಿರುವ ಹಿನ್ನೆಲೆ ವಿವಾದಗಳನ್ನು ಉಂಟುಮಾಡಿದೆ. ಇನ್ನು, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಅದಕ್ಕೆ 'ವಯಸ್ಕರಿಗೆ ಮಾತ್ರ' ಅಂದರೆ ‘A’ ಪ್ರಮಾಣಪತ್ರ ನೀಡಿದೆ.
ಅಮಿತ್ ರೈ ನಿರ್ದೇಶಿಸಿದ ಈ ಚಿತ್ರವು ಸಾಮಾನ್ಯ ಮನುಷ್ಯನ ಕಥೆಯನ್ನು ಅನುಸರಿಸುತ್ತದೆ. ತಂದೆ ಕಾಂತಿ ಶರಣ್ ಮುದ್ಗಲ್ (ಪಂಕಜ್ ತ್ರಿಪಾಠಿ ನಟಿಸಿದ್ದಾರೆ) ನಂಬಿಕೆಯ ಕುಟುಂಬದ ವ್ಯಕ್ತಿ, ಅವರು ತಮ್ಮ ಪ್ರೀತಿಯ ಮಗನನ್ನು ರಕ್ಷಿಸಲು ವ್ಯವಸ್ಥೆಯನ್ನು ಎದುರು ಹಾಕಿಕೊಳ್ಳುತ್ತಾರೆ. ಅಕ್ಷಯ್ ಕುಮಾರ್ ಅವರ ಪಾತ್ರ, ಶಿವನು ಕಷ್ಟದ ಸಮಯದಲ್ಲಿ ಅವರಿಗೆ ಮಾರ್ಗದರ್ಶನ ನೀಡುತ್ತಾರೆ ಮತ್ತು ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ಅವರ ಮಾರ್ಗದರ್ಶಕನಾಗಿ ನಿರ್ವಹಿಸುತ್ತಾರೆ ಎಂದು ತಿಳಿದುಬಂದಿದೆ.