ಇದೇ ರೀತಿ ನಟಿ ನಿಶಾ ನೂರ್ ಅವರ ದುರಂತ ಜೀವನದ ಬಗೆಗಿನ ಕಥೆಯಿದೆ. ಆಕೆಯ ಜೀವನವು ಚಿತ್ರರಂಗದ ಕರಾಳ ಮುಖವನ್ನು ತೋರಿಸಿದೆ. ನಿಶಾ ನೂರ್ 1980 ರ ದಶಕದ ಜನಪ್ರಿಯ ನಟಿ ಮತ್ತು ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಕಮಲ್ ಹಾಸನ್ ಜೊತೆ 'ಟಿಕ್ ಟಿಕ್ ಟಿಕ್' ಚಿತ್ರದ ಮೂವರು ನಟಿಯರಲ್ಲಿ ಒಬ್ಬರಾಗಿದ್ದರು. ಸನ್ನಿವೇಶವೊಂದರಲ್ಲಿ ಕಮಲ್ ಸುತ್ತ ಮಾಧವಿ, ರಾಧ ಹಾಗೂ ನಿಶಾ ಸ್ವಿಮ್ ಸೂಟ್‌ನಲ್ಲಿ ನಿಂತಿರುವ ಫೋಟೊವೊಂದು ಸೋಶಿಯಲ್ ಮೀಡಿಯಾದಲ್ಲಿ ಪದೇ ಪದೇ ವೈರಲ್ ಆಗುತ್ತಿರುತ್ತದೆ.
ರಜನಿಕಾಂತ್, ಕಮಲ್ ಹಾಸನ್‌ರಂತಹ ದಿಗ್ಗಜ ನಟರ ಜೊತೆ ಮಿಂಚಿದ ನಟಿ ಬಿಂದಾಸ್ ಪಾತ್ರಗಳಲ್ಲಿ ನಟಿಸಿ ಸಿನಿರಸಿಕರ ಮನಗೆದ್ದಿದ್ದರು. ಅವತ್ತಿನ ಕಾಲಕ್ಕೆ ಸ್ವಿಮ್ ಸೂಟ್ ಧರಿಸಿ ನಟಿಸೋಕು ಸಿದ್ಧರಿದ್ದರು.
ನಿಶಾ ನೂರ್ ಗ್ಲಾಮರಸ್ ಮತ್ತು ಬೋಲ್ಡ್ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು. ಬಲವಾದ ಅಭಿಮಾನಿಗಳ ಬಳಗ ಹೊಂದಿದ್ದರು. ತನ್ನ ವೃತ್ತಿಜೀವನದ ಉತ್ತುಂಗದಲ್ಲಿ, ನಿಶಾ ನೂರ್ ಹೆಸರಾಂತ ನಿರ್ದೇಶಕರಾದ ಬಾಲಚಂದ್ರನ್, ವಿಸು ಮತ್ತು ಚಂದ್ರಶೇಖರ್ ಅವರೊಂದಿಗೆ ಕೆಲಸ ಮಾಡಿದರು.
ಆದರೆ ಕ್ರಮೇಣ ನಿಶಾ ನೂರ್‌ಗೆ ಸಿನೆಮಾ ಅವಕಾಶಗಳು ಇಳಿಮುಖವಾಯಿತು ಮತ್ತು ಅವರು ಚಿತ್ರರಂಗದಲ್ಲಿ ಉತ್ತಮ ಸ್ಥಾನಕ್ಕಾಗಿ ಸಾಕಷ್ಟು ಚಾಲೆಂಜ್‌ಗಳನ್ನು ಎದುರಿಸಿದರು. ವರದಿಗಳ ಪ್ರಕಾರ, ನಿಶಾ ನೂರ್ ಅವರು ಕೆಲಸ ಹುಡುಕಲು ವಿಫಲವಾದ ನಂತರ ಅವಳನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಿದರು.
ನಿಶಾ ನೂರ್ ಅವರು ಕಷ್ಟಪಟ್ಟು ಸಂಪಾದಿಸಿದ ಎಲ್ಲಾ ಹಣವನ್ನು ಕಳೆದುಕೊಂಡರು ಮತ್ತು ಕಠಿಣ ಹಂತದಲ್ಲಿ ಅವರು ತಮ್ಮ ಕುಟುಂಬ ಅಥವಾ ಸ್ನೇಹಿತರಿಂದ ಯಾವುದೇ ಬೆಂಬಲವನ್ನು ಪಡೆಯಲಿಲ್ಲ.
ಕೊನೆಗೆ ನಿಶಾ ನೂರ್ ದರ್ಗಾದ ಹೊರಗೆ ಬೀದಿಯಲ್ಲಿ ಮಲಗಿದ್ದರು. ತಮಿಳು ಎನ್‌ಜಿಒ ಮುಸ್ಲಿಂ ಮುನ್ನೇತ್ರ ಕಳಗಂನಿಂದ ರಕ್ಷಿಸಲ್ಪಟ್ಟಾಗ ನಿಶಾ ನೂರ್ ತುಂಬಾ ದುರ್ಬಲರಾಗಿ ಗುರುತೇ ಸಿಗದ ಪರಿಸ್ಥಿತಿಯಲ್ಲಿದ್ದರು. ಬಳಿಕ ನಿಶಾ ನೂರ್ ಏಡ್ಸ್ ನಿಂದ ಬಳಲುತ್ತಿರುವುದು ಗಮನಕ್ಕೆ ಬಂತು. ನಿಶಾ ನೂರ್ 2007 ರಲ್ಲಿ ಆಸ್ಪತ್ರೆಯಲ್ಲಿ ನಿಧನರಾದರು.