ಚಿತ್ರರಂಗದಲ್ಲಿಒಬ್ಬ ನಟ ಅಥವಾ ನಟಿಯನ್ನು ನಿರ್ಧಿಷ್ಟ ಪಾತ್ರದಲ್ಲಿ ನೋಡಲು ಪ್ರೇಕ್ಷಕರು ಒಗ್ಗಿಕೊಂಡ ನಂತರ ಅವರ ಆನ್-ಸ್ಕ್ರೀನ್ ಇಮೇಜ್‌ನ್ನು ಬದಲಾಯಿಸುವುದು ಸುಲಭವಲ್ಲ. ಆದರೆ ಬಾಲಿವುಡ್‌ನ ಒಬ್ಬ ನಟಿ ಮನೆ ಮಗಳಂಥಾ ಪಾತ್ರಗಳಲ್ಲಿ ನಟಿಸಿ, ದಿಢೀರ್ ಬಿ-ಗ್ರೇಡ್ ಕಾಮಪ್ರಚೋದಕ ಥ್ರಿಲ್ಲರ್‌ನಲ್ಲಿ ದೃಶ್ಯಗಳಲ್ಲಿ ಅಭಿನಯಿಸಿದ್ದಕ್ಕಾಗಿ ಟ್ರೋಲ್‌ಗೆ ಒಳಗಾಗಿದ್ದರು.
ಕೆಲವು ವರ್ಷಗಳ ನಂತರ, ಮತ್ತೆ ಮನೆಮಗಳಂತೆ ಉತ್ತಮ ಪಾತ್ರವನ್ನು ಮಾಡಲು ಆರಂಭಿಸಿದರು. ಅದು ಅಂತಿಮವಾಗಿ ಇದುವರೆಗೆ ಅತಿ ಹೆಚ್ಚು ಗಳಿಸಿದ ಹಿಂದಿ ಚಲನಚಿತ್ರವೆಂದು ಕರೆಸಿಕೊಂಡಿತು. ಆ ನಟಿ ಮತ್ಯಾರೂ ಅಲ್ಲ ಸಿಮ್ರತ್ ಕೌರ್. ಸಿಮ್ರತ್ ಕೌರ್ ಅವರ ಸಿನಿಮಾ ವೃತ್ತಿಜೀವನವು ಹಲವು ಸಂಕಷ್ಟಗಳಿಂದ ಕೂಡಿತ್ತು.
ಸಿಮ್ರತ್ ಕೌರ್ 1997ರಲ್ಲಿ ಮುಂಬೈನಲ್ಲಿ ಜನಿಸಿದರು. 20ನೇ ವಯಸ್ಸಿನಲ್ಲಿ ತೆಲುಗು ಚಿತ್ರ 'ಪ್ರೇಮಥೋ ಮೀ ಕಾರ್ತಿಕ್'ನಲ್ಲಿ ಸಿನಿಮಾಗೆ ಪಾದಾರ್ಪಣೆ ಮಾಡಿದರು. ಆದರೆ ನಂತರದ ಕೆಲವು ವರ್ಷಗಳಲ್ಲಿ, ಸಿಮ್ರತ್, ಸೋನಿ ಮತ್ತು ಬಂಗಾರರಾಜು ಚಿತ್ರಗಳಲ್ಲಿ ಪೋಷಕ ಪಾತ್ರಗಳು ಮತ್ತು ಅತಿಥಿ ಪಾತ್ರಗಳನ್ನು ಮಾಡಿದರು.
2020ರಲ್ಲಿ, ಸಿಮ್ರತ್ ತೆಲುಗು ಚಲನಚಿತ್ರ ಡರ್ಟಿ ಹರಿಯಲ್ಲಿ ಪ್ರಮುಖ ಪಾತ್ರವನ್ನು ಗಳಿಸಿದರು. ಇದು ಕಾಮಪ್ರಚೋದಕ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾವಾಗಿತ್ತು. ಇದರಲ್ಲಿ ಶ್ರವಣ್ ರೆಡ್ಡಿ ಸಹ ನಟಿಸಿದ್ದಾರೆ. ಚಿತ್ರವು ಹಲವು ಅಶ್ಲೀಲ ದೃಶ್ಯಗಳಿಂದ ಕೂಡಿತ್ತು. ಹೀಗಾಗಿಯೇ ಸಿನಿಮಾ ಹಲವು ಟೀಕೆಗಳನ್ನು ಎದುರಿಸಿತು.
2022ರಲ್ಲಿ, ಸನ್ನಿ ಡಿಯೋಲ್ ನಟಿಸಿದ ಬ್ಲಾಕ್‌ಬಸ್ಟರ್ ಸಿನಿಮಾ ಗದರ್-2 ನಲ್ಲಿ ಸಿಮ್ರತ್ ನಟಿಸಿದರು. ನಿರ್ದೇಶಕ ಅನಿಲ್ ಶರ್ಮಾ ಅವರು ಸಿಮ್ರತ್ ಅವರ ಆನ್-ಸ್ಕ್ರೀನ್ ಇಮೇಜ್ ಅನ್ನು ಸಂಪೂರ್ಣವಾಗಿ ಬದಲಾಯಿಸಿದರು, ಆಕೆಯನ್ನು ಪಾಕಿಸ್ತಾನಿ ಹುಡುಗಿಯ ಪಾತ್ರದಲ್ಲಿ ತೋರಿಸಿದರು. ಈ ಚಿತ್ರವು ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯಿತು,.
ಜಾಗತಿಕವಾಗಿ ರೂ 691 ಕೋಟಿ ಮತ್ತು ಭಾರತದಲ್ಲಿ ರೂ 524 ಕೋಟಿ ಗಳಿಸಿತು. ಸ್ವಲ್ಪ ಸಮಯದವರೆಗೆ, ಗದರ್ 2 ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರವೆಂದು ಗುರುತಿಸಿಕೊಂಡಿತು. ಶಾರೂಕ್ ಖಾನ್ ಅವರ ಪಠಾಣ್ ಈ ದಾಖಲೆಯನ್ನು ಮುರಿಯಿತು.
ಕೆಲವು ದಿನಗಳ ನಂತರ ಜವಾನ್ ಸಹ ಈ ದಾಖಲೆ ಮುರಿಯಿತು. ಆದರೆ ಗದರ್ 2 ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಬಾಲಿವುಡ್ ಚಲನಚಿತ್ರಗಳಲ್ಲಿ ಒಂದಾಗಿದೆ. ಇದು ಸಿಮ್ರತ್ ಅವರ ವೃತ್ತಿಜೀವನಕ್ಕೆ ಹೊಸ ಟರ್ನ್ ನೀಡಿತು.
ಸಿಮ್ರತ್‌ಗೆ ಬಾಲಿವುಡ್‌ನಲ್ಲಿ ಗದರ್-2 ದೊಡ್ಡ ಬ್ರೇಕ್ ನೀಡಿದ ಸಿನಿಮಾವಾಗಿದೆ. ನಟಿ ಈ ಹಿಂದೆ ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಮತ್ತು OTT ಸರಣಿಗಳಲ್ಲಿ ಕೆಲಸ ಮಾಡಿದ್ದಾರೆ. ಸಿಮ್ರತ್ Instagramನಲ್ಲಿ 810k ಅಭಿಮಾನಿಗಳನ್ನು ಹೊಂದಿದ್ದಾರೆ.