Shriya Saran: ಬ್ಲ್ಯಾಕ್ ಸೀರೆಯಲ್ಲಿ ಕಂಗೊಳಿಸಿದ ಕಬ್ಜ ಬ್ಯೂಟಿ: ಮಿನುಗುವ ಸೀರೆಯಲ್ಲಿ ಬೆಳದಿಂಗಳ ಬಾಲೆಯೆಂದ ಫ್ಯಾನ್ಸ್​!

First Published | Nov 28, 2023, 2:30 AM IST

ಶ್ರಿಯಾ ಶರಣ್  ಕನ್ನಡದ ಪ್ಯಾನ್‌ ಇಂಡಿಯಾ ಕಬ್ಜದಲ್ಲಿ ಮಧುಮತಿ ಪಾತ್ರದಲ್ಲಿ ರಾಣಿಯಂತೆ ಕಂಗೊಳಿಸಿದ್ದರು. ಇದೀಗ ಕಬ್ಜ ಬೆಡಗಿ ತೆಳು ಕಪ್ಪು ಬಣ್ಣದ ಸೀರೆಯುಟ್ಟು ಬೋಲ್ಡ್‌ ಲುಕ್‌ ಕೊಟ್ಟಿದ್ದಾರೆ. 
 

actress shriya saran looks gorgeous in black transparent saree gvd

ಶ್ರೀಯಾ ಶರಣ್ ಬಹುಭಾಷಾ ನಟಿ. ಕನ್ನಡ, ತಮಿಳು, ಹಿಂದಿ, ತೆಲುಗು ಸೇರಿ ಬಹುಭಾಷಾ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉತ್ತಮ ನಟನೆ ಮೂಲಕ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ. ಸಿನಿಮಾ ಮಾತ್ರವಲ್ಲದೇ ಸೌಂದರ್ಯದ ಸಲುವಾಗಿಯೂ ಸಖತ್​ ಸದ್ದು ಮಾಡೋ ಚೆಲುವೆ. 

ಆಕರ್ಷಣೀಯ ನೋಟದಿಂದಲೇ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಂಡಿರುವ ಶ್ರೀಯಾ ವಯಸ್ಸು 41 ಆದರೂ ಯುವತಿಯರೂ ನಾಚುವಂತಹ ಸೌಂದರ್ಯ. ಫಿಟ್ನೆಸ್​​ಗೆ ಹೆಚ್ಚು ಮಹತ್ವ ಕೊಡೋ ಈ ನಟಿಯನ್ನು ಅಭಿಮಾನಿಗಳು ಫಿಟ್ನೆಸ್​ ಐಕಾನ್​ ಎಂದೇ ಕರೆಯುತ್ತಾರೆ. ಆರೋಗ್ಯಕರ, ಫಿಟ್, ಸುಂದರ​ ದೇಹ ಹೊಂದಲು ಅಭಿಮಾನಿಗಳಿಗೆ ಪ್ರೇರಣೆಯಾಗಿದ್ದಾರೆ. 

Tap to resize

ಸೋಷಿಯಲ್​ ಮೀಡಿ​ಯಾದಲ್ಲಿ ಸದಾ ಆ್ಯಕ್ಟಿವ್​ ಆಗಿರುವ ನಟಿ ಶ್ರೀಯಾ ಶರಣ್​​ ಆಗಾಗ ತಮ್ಮ ಮನಮೋಹಕ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ನಟಿ ಶೇರ್ ಮಾಡೋ ಪ್ರತೀ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಜಾಗ ಗಿಟ್ಟಿಸಿಕೊಳ್ಳುತ್ತವೆ. 

ಇದೀಗ ನಟಿ ಶ್ರೀಯಾ ಶರಣ್ ತಮ್ಮ ಸೌಂದರ್ಯಕ್ಕೆ ಕಡಿವಾಣವೇ ಇಲ್ಲ ಎಂಬಂತೆ ಕಪ್ಪು ಬಣ್ಣದ ಸೀರೆ ಉಟ್ಟು ಪೋಸ್ ಕೊಟ್ಟಿದ್ದು, ಸಾಮಾಜಿಕ ಜಾಲತಾಣಲದಲ್ಲಿ ಸಖತ್ ವೈರಲ್ ಆಗಿದೆ, ಜೊತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಜೀರೋ ಸೈಜ್ ಮೈಕಟ್ಟಿನ ಹಾಟ್ ಫೋಟೋಶೂಟ್ ಮಾಡುತ್ತಿರುವ ಶ್ರಿಯಾ ಈಗ ಬೆಳ್ಳಿತೆರೆಗಿಂತ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ವಯಸ್ಸಿಗೆ ತಕ್ಕಂತೆ ಎಲ್ಲರ ಸೌಂದರ್ಯ ಕಡಿಮೆಯಾದರೆ ಶ್ರಿಯಾಗೆ ರಿವರ್ಸ್‌ನಲ್ಲಿ ಗ್ಲಾಮರ್ ಹೆಚ್ಚುತ್ತಿದೆ.

ಶ್ರಿಯಾ ಚಿತ್ರರಂಗಕ್ಕೆ ಕಾಲಿಟ್ಟು 2 ದಶಕಗಳೇ ಕಳೆದಿವೆ. 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶ್ರಿಯಾ ತನ್ನ ಬ್ಯೂಟಿ ಹಾಗೂ ನಟನೆಯಿಂದ ಅಭಿಮಾನಿಗಳ ಮನ ಕದ್ದಿದ್ದಾರೆ.

ಶ್ರಿಯಾ ಮಗುವಿಗೆ ಜನ್ಮ ನೀಡಿದ ನಂತರ ತಾಯ್ತನವನ್ನು ಆನಂದಿಸುತ್ತಿದ್ದಾರೆ. ಮಗುವಿನ ಜೊತೆಗಿನ ಪ್ರತಿ ಕ್ಷಣವನ್ನೂ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಶ್ರಿಯಾ ಶರಣ್ ಕಳೆದ ಎರಡು ದಶಕಗಳಿಂದ ತೆಲುಗು ಚಿತ್ರರಂಗದಲ್ಲಿ ತನ್ನ ನಟನೆ ಮತ್ತು ಗ್ಲಾಮರ್‌ನಿಂದ ಮಿಂಚಿದ್ದಾರೆ.

Latest Videos

click me!