ಚಿರಂಜೀವಿ, ಬಾಲಯ್ಯ ಬಂದ್ರೂ ಕಾಲ್ ಮೇಲೆ ಕಾಲ್ ತೆಗೀಲಿಲ್ಲ, ಆದ್ರೆ ಆ ನಟ ಬಂದರೆ ಸ್ಮಿತಾ ಎದ್ದು ನಿಲ್ಲುತ್ತಿದ್ದರು!

Published : Mar 15, 2025, 06:54 PM ISTUpdated : Mar 15, 2025, 07:04 PM IST

ದಕ್ಷಿಣ ಭಾರತೀಯ ನಟಿ ಸಿಲ್ಕ್ ಸ್ಮಿತಾ 1990ರ ದಶಕದಲ್ಲಿ ತೆಲುಗು ಹಾಗೂ ತಮಿಳು ಚಿತ್ರರಂಗದ ಸ್ಟಾರ್ ನಟರಾಗಿದ್ದ ಚುರಂಜೀವಿ, ಬಾಲಯ್ಯ, ವಿಕ್ಟರಿ ವೆಂಕಟೇಶ್, ರಜನಿಕಾಂತ್ ಬಂದರೂ ಗೌರವ ಕೊಡದೇ ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುತ್ತಿದ್ದಳು. ಆದರೆ, ಒಬ್ಬ ಹಾಸ್ಯನಟ ಬಂದರೆ ಮಾತ್ರ ಎದ್ದು ನಿಂತು ಗೌರವ ಕೊಡುತ್ತಿದ್ದಳು. ಯಾರು ಆ ಹಾಸ್ಯ ನಟ ಇಲ್ಲಿದೆ ನೋಡಿ ಮಾಹಿತಿ.

PREV
18
ಚಿರಂಜೀವಿ, ಬಾಲಯ್ಯ ಬಂದ್ರೂ ಕಾಲ್ ಮೇಲೆ ಕಾಲ್ ತೆಗೀಲಿಲ್ಲ, ಆದ್ರೆ ಆ ನಟ ಬಂದರೆ ಸ್ಮಿತಾ ಎದ್ದು ನಿಲ್ಲುತ್ತಿದ್ದರು!

ದಕ್ಷಿಣ ಭಾರತೀಯ ಚಿತ್ರರಂಗದ ಪ್ರಸಿದ್ಧ ನಟಿ ಸಿಲ್ಕ್ ಸ್ಮಿತಾ ಒಂದು ಕಾಲದಲ್ಲಿ ಭಾರೀ ಸಂಚಲನ ಮೂಡಿಸಿದ್ದಳು. ದೊಡ್ಡ, ದೊಡ್ಡ ಸ್ಟಾರ್‌ಗಳು ಸಹ ಅವಳಿಗಾಗಿ ಕಾಯುತ್ತಿದ್ದರು. ಸ್ಮಿತಾ ಕಾಲ್‌ ಶೀಟ್ ಸಿಗದಿದ್ದರೆ ಸಿನಿಮಾಗಳನ್ನು ಮುಂದೂಡುತ್ತಿದ್ದರು. ಸ್ಮಿತಾ ಎಲ್ಲಾ ಕ್ರೇಜ್ ಅನ್ನು ಹೊಂದಿದ್ದಳು.

28

ಸ್ಟಾರ್ ನಟರಾಗಿದ್ದ ಚಿರಂಜೀವಿ ಮತ್ತು ಬಾಲಯ್ಯ ಸೇರಿದಂತೆ ಎಷ್ಟೇ ದೊಡ್ಡ ನಾಯಕರು ಬಂದರೂ ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುತ್ತಿದ್ದ ಸಿಲ್ಕ್ ಸ್ಮಿತಾ ಕಾಲು ತೆಗೆಯುತ್ತಿರಲಿಲ್ಲ. ಸಿನಿಮಾ ಸೆಟ್‌ನಲ್ಲಿ ದೊಡ್ಡ ಸ್ಟಾರ್ ನಟರೇ ಅವಳ ಕಾಲುಗಳನ್ನು ದಾಟಿಕೊಂಡು ಹೋಗುತ್ತಿದ್ದರು. ಆದರೆ, ಹಾಸ್ಯನಟ ಬಂದರೆ ಮಾತ್ರ ಸ್ಮಿತಾ ಎದ್ದು ನಿಲ್ಲುತ್ತಿದ್ದಳು. ಆ ಹಾಸ್ಯನಟ ಯಾರೆಂದು ನೋಡಿ.

38

ಸಿಲ್ಕ್ ಸ್ಮಿತಾ ದಕ್ಷಿಣ ಭಾರತ ಚಲನಚಿತ್ರೋದ್ಯಮದಲ್ಲಿ ದೊಡ್ಡ ಮಿಂಚಿನ ಸಂಚಲನ ಮೂಡಿಸಿ, ದುರಂತವಾಗಿ ಅಂತ್ಯ ಕಂಡ ನಟಿ. ಅವರ ಜೀವನ ಅನೇಕರಿಗೆ ಮಾದರಿಯಾಗಿದೆ. ಸಿನಿಮಾ ಜೀವನದಲ್ಲಿ ಮಹಿಳೆಯರು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದಕ್ಕೆ ಸ್ಮಿತಾ ಜೀವನವೇ ಪಾಠವಾಗಿದೆ. ಸಿಲ್ಕ್ ಸ್ಮಿತಾ ತಮ್ಮ ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದಾರೆ. ಒಂದು ಕಾಲದಲ್ಲಿ ಆಹಾರವಿಲ್ಲದೆ ಬಳಲುತ್ತಿದ್ದ ಸ್ಮಿತಾ ಹಣದ ಹಾಸಿಗೆ ಮೇಲೆ ಮಲಗುವ ಸ್ಥಿತಿಗೆ ತಲುಪಿದಳು. ತನ್ನ ಸಿನಿ ಜೀವನದಲ್ಲಿ ಕೆಲವರನ್ನು ಮುಗ್ಧವಾಗಿ ನಂಬಿ ಮೋಸ ಹೋಗಿದ್ದಾಳೆ. ಇದೇ ಕಾರಣಕ್ಕೆ ಜೀವನದಲ್ಲಿ ಕೊನೆಯ ದಿನಗಳಲ್ಲಿ ಅವಳು ತನ್ನ ಪ್ರಾಣವನ್ನೇ ತ್ಯಜಿಸಿದಳು.

48

ಸಿಲ್ಕ್ ಸ್ಮಿತಾ ತಮ್ಮ ವೃತ್ತಿಜೀವನದ ಆರಂಭದಲ್ಲಿ ಅನೇಕ ಅವಮಾನಗಳನ್ನು ಎದುರಿಸಿದರು. ಅನೇಕ ಜನರು ಅವನನ್ನು ಕೀಳಾಗಿ ನೋಡುತ್ತಿದ್ದರು. ಯಾವುದೇ ಸಿನಿಮಾದ ಹಿನ್ನೆಲೆ ಇರದೇ ಚಿತ್ರರಂಗಕ್ಕೆ ಬಂದಿದ್ದರಿಂದ ಆಕೆಗೆ ಯಾರೊಬ್ಬರೂ ಗೌರವ ಕೊಡದೇ ನಡೆಸಿಕೊಳ್ಳುತ್ತಿದ್ದರು. ಹೀಗಾಗಿ, ಅನೇಕರಿಂದ ಅವಮಾನ ಎದುರಿಸಿದಳು.

58

ಕ್ರಮೇಣ ಅತ್ಯಂತ ಬೇಡಿಕೆ ಕಲಾವಿದೆಯಾಗಿ ಬೆಳೆದಳು. ಚಿರಂಜೀವಿ, ಬಾಲಯ್ಯ, ನಾಗಾರ್ಜುನ ಮತ್ತು ವೆಂಕಟೇಶ್ ಅವರಂತಹ ದೊಡ್ಡ ಸ್ಟಾರ್ ನಟರೂ ಕೂಡ ಸ್ಮಿತಾಳ ಡೇಟ್ಸ್‌ಗಳಿಗಾಗಿ ಕಾಯುವಂತಾಇತ್ತು. ಒಂದು ಹಂತದಲ್ಲಿ ಆಕೆಗೆ ಸ್ಟಾರ್ ಹೀರೋಗಳನ್ನು ಮೀರಿಸುವ ಕ್ರೇಜ್ ಸಿಕ್ಕಿತ್ತು. ಆದರೆ, ಸಿಲ್ಕ್ ಸ್ಮಿತಾ ತನಗೆ ಅವಮಾನ ಮಾಡಿದ ಯಾರನ್ನೂ ಸುಮ್ಮನೆ ಬಿಡದೇ ಸೇಡು ತೀರಿಸಿಕೊಳ್ಳುತ್ತಿದ್ದಳು.

68

ತನಗೆ ಅವಮಾನ ಮಾಡಿದವರ ಮುಂದೆ ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುತ್ತಿದ್ದಳು. ಒಮ್ಮೆ ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಂಡಾಗ, ಚಿರಂಜೀವಿ, ಬಾಲಯ್ಯರಂತಹ ದೊಡ್ಡ ಸ್ಟಾರ್‌ಗಳು ಬಂದರೂ ಕಾಲು ತೆಗೆಯುವುದಿಲ್ಲ. ಅದೇ ಸಮಯದಲ್ಲಿ ಹಾಸ್ಯ ನಟರಾಗಿದ್ದ ಬಾಬು ಮೋಹನ್ ಬಂದಾಗ, ಎದ್ದು ನಿಂತು ಗೌರವ ಕೊಟ್ಟು ಜಾಗವನ್ನು ಬಿಟ್ಟುಕೊಡುತ್ತಿದ್ದರು. ಇದನ್ನು ಸ್ವತಃ ಬಾಬು ಮೋಹನ್ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

78

ಒಮ್ಮೆ ವಿದೇಶದಲ್ಲಿ ಚಿತ್ರೀಕರಣ ಮಾಡುವಾಗ, ಸ್ಮಿತಾ ತನ್ನನ್ನು ಶಾಪಿಂಗ್‌ಗೆ ಕರೆದುಕೊಂಡು ಹೋಗಿ, ಒಂದು ಜೊತೆ ಸ್ಟೈಲಿಶ್ ಕಪ್ಪು ಕನ್ನಡಕವನ್ನು ಖರೀದಿಸಿ ನನಗೊಂದು ಕೊಟ್ಟಳು. ನಾನು ಚೆನ್ನಾಗಿದೆ ಎಂದು ಹೇಳಿದಾಗ ಸಾವಿರಾರು ರೂ. ಬೆಲೆಬಾಳುವ ಕನ್ನಡಕವನ್ನು ನನಗೆ ಗಿಫ್ಟ್ ಆಗಿ ನೀಡಿದಳು. ಇದರಲ್ಲಿ ನೀನು ದೊಡ್ಡ ಹೀರೋನಂತೆ ಕಾಣುತ್ತೀಯ ಎಂದು ಹೇಳಿದಳು. ಯಾರಿಗೂ ಬೆಲೆ ಕೊಡದ ಸ್ಮಿತಾ ಮೋಹನ್‌ ಬಾಬುನನ್ನು ಮಾತ್ರ ಬಾಸ್ ಎಂದು ಕರೆಯುತ್ತಿದ್ದಳು. ತನಗೆ ಯಾವುದೇ ಸಮಸ್ಯೆ ಬಂದರೂ ಮೋಹನ್ ಬಾಬು ಬಳಿ ಹೇಳಿಕೊಳ್ಳುತ್ತಿದ್ದಳು.

88

ಇನ್ನು ಸಿಲ್ಕ್ ಸ್ಮಿತಾ ಕಪ್ಪು ಕನ್ನಡಕ ಹಾಕಿಕೊಂಡು ಸೆಟ್‌ನಲ್ಲಿ ಕುಳಿತಾಗ ಯಾರು ಅವಳನ್ನು ನೋಡುತ್ತಿದ್ದಾರೆ? ಯಾರಾರು ತಮ್ಮನ್ನು ಗಮನಿಸುತ್ತಿದ್ದಾರೆಂದು ಗಮನಿಸುತ್ತಾರೆ. ಅದರ ಆಧಾರದ ಮೇಲೆ, ಯಾರನ್ನು ಯಾವ ಲೆಕ್ಕದಲ್ಲಿ ಗೌರವಿಸಬೇಕೆಂದು ಅವಳು ನಿರ್ಧರಿಸುತ್ತಿದ್ದಳು. ಸಿಲ್ಕ್ ಸ್ಮಿತಾ ತುಂಬಾ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದಳು. ತುಂಬಾ ಮುಗ್ಧಳು, ಅನೇಕ ಜನರನ್ನು ನಂಬಿ ಮೋಸ ಹೋಗಿ, ತಮ್ಮ ಜೀವನವನ್ನು ಹಾಳು ಮಾಡಿಕೊಂಡಳು ಎಂದು ಸ್ವತಃ ಬಾಬು ಮೋಹನ್ ತಿಳಿಸಿದ್ದಾರೆ.

Read more Photos on
click me!

Recommended Stories