ಒಟ್ಟಿಗೆ ಬಾಳಬೇಕು ಅಂತ ಫಿಕ್ಸ್‌ ಆದ್ರು; ನಿಶ್ಚಿತಾರ್ಥ ಮುರ್ಕೊಂಡ್ರು! ಸೆಲೆಬ್ರಿಟಿಗಳ ಈ ನಿರ್ಧಾರವಾದ್ರೂ ಯಾಕೆ?

Published : Mar 15, 2025, 01:26 PM ISTUpdated : Mar 15, 2025, 02:30 PM IST

 ಸ್ಯಾಂಡಲ್‌ವುಡ್‌ನಿಂದ ಹಿಡಿದು, ಬಾಲಿವುಡ್‌ವರೆಗೆ ಕೆಲ ಸೆಲೆಬ್ರಿಟಿಗಳು ನಿಶ್ಚಿತಾರ್ಥವನ್ನು ಮುರಿದುಕೊಂಡಿದ್ದಾರೆ. ಇದಕ್ಕೆ ಕಾರಣ ಏನಿರಬಹುದು? 

PREV
111
ಒಟ್ಟಿಗೆ ಬಾಳಬೇಕು ಅಂತ ಫಿಕ್ಸ್‌ ಆದ್ರು; ನಿಶ್ಚಿತಾರ್ಥ ಮುರ್ಕೊಂಡ್ರು! ಸೆಲೆಬ್ರಿಟಿಗಳ ಈ ನಿರ್ಧಾರವಾದ್ರೂ ಯಾಕೆ?

ಮೆಹೆರಿನ್‌ ಫಿರ್ಜಾದಾ ಅವರು ರಾಜಕಾರಣಿ ಭವ್ಯ ಬಿಶ್ನೋಯ್‌ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ನಾಲ್ಕು ತಿಂಗಳಿಗೆ ಬ್ರೇಕಪ್‌ ಮಾಡಿಕೊಂಡಿದ್ದಾರೆ. ಇದಕ್ಕೆ ನಿಖರ ಕಾರಣ ಹೇಳಿಲ್ಲ. 
 

211

ಉದ್ಯಮಿ ವರುಣ್‌ ಹಾಗೂ ತ್ರಿಶಾ ಅವರು 2015ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಇದಾದ ಬಳಿಕ ಈ ಜೋಡಿ ಬೇರೆ ಆಯ್ತು. ನಿಖರ ಕಾರಣ ಏನು ಎಂದು ತಿಳಿದುಬಂದಿಲ್ಲ. 

311

2019ರಲ್ಲಿ ಅನೀಶಾ ಅಲ್ಲ ಅವರ ಜೊತೆಗೆ ವಿಶಾಲ್‌ ನಿಶ್ಚಿತಾರ್ಥ ಆಗಿತ್ತು. ಜನವರಿಯಲ್ಲಿ ನಿಶ್ಚಿತಾರ್ಥ ಆಗಿತ್ತು, ಅಕ್ಟೋಬರ್‌ ವೇಳೆಗೆ ಇವರ ಮದುವೆ ಆಗಬೇಕಿತ್ತು. ಈ ಜೋಡಿ ಅದಕ್ಕೂ ಮೊದಲೇ ಬ್ರೇಕಪ್‌ ಮಾಡಿಕೊಂಡಿತ್ತು. ವಿಶಾಲ್‌ ಅವರು ಇನ್ನೂ ಸಿಂಗಲ್‌ ಆಗಿದ್ದು, ಅನೀಶಾ ಅವರು ಬೇರೆ ಮದುವೆ ಆಗಿದ್ದಾರೆ. 

411

ಸಲ್ಮಾನ್‌ ಖಾನ್‌ ಜೊತೆ ಸಾಕಷ್ಟು ನಟಿಯರ ಜೊತೆ ಹೆಸರು ಥಳುಕು ಹಾಕಿಕೊಂಡಿದೆ. ಸಂಗೀತಾ ಬಿಜ್ಲಾನಿ ಜೊತೆ ಸಲ್ಮಾನ್‌ ಹೆಸರು ಕೇಳಿ ಬಂದಿತ್ತು. ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಇಂದು ಸಲ್ಮಾನ್‌ ಮದುವೆ ಆಗಿಲ್ಲ. ಸಂಗೀತಾಗೆ ಬೇರೆ ಮದುವೆಯಾಗಿದ್ದು, ಸಲ್ಮಾನ್‌ ಜೊತೆ ಒಳ್ಳೆಯ ಸ್ನೇಹ ಸಂಬಂಧ ಹೊಂದಿದ್ದಾರೆ. 

511

ಬಿಗ್‌ ಬಾಸ್‌ 7 ಖ್ಯಾತಿಯ ಗೌಹರ್‌ ಖಾನ್‌ ಅವರು ಸಾಜೀದ್‌ ಖಾನ್‌ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದರು. 2003ರಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು. ಆದರೆ ಇವರಿಬ್ಬರೂ ಕೆಲ ವೈಯಕ್ತಿಕ ಕಾರಣಕ್ಕೆ ದೂರ ಆದರು. ಗೌಹರ್‌ ಖಾನ್‌ ಅವರು ಈಗ ಜೈದ್‌ ದರ್ಬಾರ್‌ ಅವರನನು ಮದುವೆಯಾಗಿ ಮಗುವಿನ ತಂದೆಯಾಗಿದ್ದಾರೆ. 
 

611

ಕರೀಷ್ಮಾ ಕಪೂರ್‌ ಹಾಗೂ ಅಭಿಷೇಕ್ ಬಚ್ಚನ್‌ ಪ್ರೀತಿಸುತ್ತಿದ್ದರು. ಇವರಿಬ್ಬರ ನಿಶ್ಚಿತಾರ್ಥ ಕೂಡ ಆಗಿತ್ತು ಎನ್ನಲಾಗಿದೆ. ಆದರೆ ಯಾಕೆ‌ ಇವರಿಬ್ಬರು ಮದುವೆ ಆಗಲಿಲ್ಲ ಎಂದು ನಿಖರವಾದ ಕಾರಣವನ್ನು ಈ ಜೋಡಿ ಇಂದಿಗೂ ಬಾಯಿ ಬಿಟ್ಟಿಲ್ಲ. 
 

711

ಸಾಕಷ್ಟು ನಟಿಯರ ಜೊತೆ ಕರಣ್‌ ಸಿಂಗ್‌ ಗ್ರೋವರ್‌ ಹೆಸರು ಕೇಳಿ ಬಂದಿತ್ತು. ಇನ್ನು ಅವರು ಮೂವರು ನಟಿಯರನ್ನು ಮದುವೆ ಕೂಡ ಆಗಿದ್ದಾರೆ. ಆದರೆ ಅವರು ಬರ್ಖಾ ಸಿಂಗ್‌ ಜೊತೆ ನಿಶ್ಚಿತಾರ್ಥ ಮಾಡಿಕೊಂಡರೂ ಕೂಡ ಮದುವೆ ಆಗಲಿಲ್ಲ. 2006ರಲ್ಲಿ ನಡೆದ ಕಥೆ ಇದು. ಕರಣ್‌ ತುಂಬ ಹುಡುಗಿಯರ ಜೊತೆ ಫ್ಲರ್ಟ್‌ ಮಾಡ್ತಾರೆ ಎಂದು ಮದುವೆ ಆಗಲಿಲ್ಲ ಎಂದು ಹೇಳಲಾಗಿದೆ. 
 

811

ʼಕಿರಿಕ್‌ ಪಾರ್ಟಿʼ ಸಿನಿಮಾ ಟೈಮ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ರಕ್ಷಿತ್‌ ಶೆಟ್ಟಿ ಜೊತೆಗೆ ಪ್ರೀತಿಯಲ್ಲಿ ಬಿದ್ದರು. 2017ರಲ್ಲಿ ಈ ಜೋಡಿ ಕೂರ್ಗ್‌ನಲ್ಲಿ ಗ್ರ್ಯಾಂಡ್‌ ಆಗಿ ನಿಶ್ಚಿತಾರ್ಥ ಮಾಡಿಕೊಂಡಿತು. ಇವರಿಬ್ಬರ ಮಧ್ಯೆ ದಶಕಗಳ ಕಾಲ ವಯಸ್ಸಿನ ಅಂತರ ಕೂಡ ಇತ್ತು. ಇದಾದ ಬಳಿಕ 2018ರಲ್ಲಿ ಇವರಿಬ್ಬರು ಬ್ರೇಕಪ್‌ ಮಾಡಿಕೊಂಡರು. ಇಂದು ರಶ್ಮಿಕಾ ಮಂದಣ್ಣ ಐದು ಭಾಷೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ರಕ್ಷಿತ್‌ ಶೆಟ್ಟಿ ಅವರು ಒಂದಾದ ಮೇಲೆ ಒಂದರಂತೆ ಹಿಟ್‌ ಸಿನಿಮಾ ನೀಡುತ್ತಿದ್ದಾರೆ. 

911

ಸೃಜನ್‌ ಲೋಕೇಶ್‌ ಹಾಗೂ ವಿಜಯಲಕ್ಷ್ಮೀ ಅವರಿಗೆ ನಿಶ್ಚಿತಾರ್ಥ ಆಗಿತ್ತು. ಇನ್ನೇನು ಮದುವೆ ಆಗಬೇಕು ಎಂದುಕೊಳ್ಳುತ್ತಿರುವಾಗಲೇ ವಿಜಯಲಕ್ಷ್ಮೀ ಅವರು ಬ್ರೇಕಪ್‌ ಮಾಡಿಕೊಂಡರು ಎನ್ನಲಾಗಿದೆ. ಈ ಬಗ್ಗೆ ನಿಖರ ಕಾರಣ ಹೇಳಿಲ್ಲ. 

1011

ಸದಾ ಮನ ಬಂದಂತೆ ಮಾತನಾಡುತ್ತ, ಕಾಂಟ್ರವರ್ಸಿ ಹೇಳಿಕೆ ನೀಡುವ ರಾಖಿ ಸಾವಂತ್‌ ಅವರು ರಾಷ್ಟ್ರೀ ವಾಹಿನಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ‘ರಾಖಿ ಕಾ ಸ್ವಯಂವರ’ ಎನ್ನುವ ಶೋನಲ್ಲಿ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಎನ್‌ಆರ್‌ಐ ಉದ್ಯಮಿ ಎಲೇಶ್‌ ಪರುಜನವಾಲಾ ಜೊತೆ ಅವರು ಎಂಗೇಜ್‌ ಆಗಿದ್ದರು. ಶೋ ಮುಗಿದಕೂಡಲೇ ಅವರು ಹೊರಗಡೆ ಬಂದರು. 

1111

2021ರಲ್ಲಿ ಗಾಯಕ ಮಿಕಾ ಸಿಂಗ್‌ ಹಾಗೂ ಆಕಾಂಕ್ಷಾ ಪುರಿ ರಿಯಾಲಿಟಿ ಶೋವೊಂದರಲ್ಲಿ ಪರಿಚಯ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದಾದ ನಂತರದಲ್ಲಿ ಈ ಜೋಡಿ ದೂರ ಆಯ್ತು. 
 

Read more Photos on
click me!

Recommended Stories