ಹನಿಮೂನ್‌ನಲ್ಲೂ ಹೊಸ ಸಾಹಸಕ್ಕಿಳಿದ ಶೋಭಿತಾ ಧೂಳಿಪಾಲ, ನಾಗಚೈತನ್ಯ! ಫೋಟೋ ವೈರಲ್!‌

Published : Mar 15, 2025, 02:51 PM ISTUpdated : Mar 15, 2025, 03:20 PM IST

ಕಳೆದ ವರ್ಷ ಡಿಸೆಂಬರ್‌ನಲ್ಲಿ ಮದುವೆಯಾಗಿದ್ದ ನಾಗಚೈತನ್ಯ ಹಾಗೂ ಶೋಭಿತಾ ಅವರು ಹನಿಮೂನ್‌ ಮೂಡ್‌ನಲ್ಲಿದ್ದಾರೆ. ಇದರ ಜೊತೆ ಹೊಸ ಹೊಸ ವಿಷಯಗಳನ್ನು Explore ಮಾಡುತ್ತಿದ್ದಾರೆ. 

PREV
17
ಹನಿಮೂನ್‌ನಲ್ಲೂ ಹೊಸ ಸಾಹಸಕ್ಕಿಳಿದ ಶೋಭಿತಾ ಧೂಳಿಪಾಲ, ನಾಗಚೈತನ್ಯ! ಫೋಟೋ ವೈರಲ್!‌

ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಅವರು ಹನಿಮೂನ್‌ ಮೂಡ್‌ನಲ್ಲಿದ್ದಾರೆ. ಮದುವೆಯಾದ ಬಳಿಕ ಈ ಜೋಡಿ ಒಂದಿಲ್ಲೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗಿತ್ತು. ಈಗ ಇವರಿಬ್ಬರು ವಿದೇಶದಲ್ಲಿ ಕಾರ್‌ ರೇಸಿಂಗ್‌, ಫೈಟಿಂಗ್‌ ಮ್ಯಾಚ್‌ಗಳಲ್ಲಿ ಭಾಗಿಯಾಗುತ್ತಿದ್ದರು. 
 

27

ಶೋಭಿತಾ ಅವರು ಈ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅನೇಕರು ಈ ಫೋಟೋ ನೋಡಿ ಖುಷಿ ವ್ಯಕ್ತಪಡಿಸಿದ್ದಾರೆ. 

37

ಎರಡು ವರ್ಷಗಳ ಕಾಲ ನಾಗಚೈತನ್ಯ ಹಾಗೂ ಶೋಭಿತಾ ಪ್ರೀತಿಸಿದ್ದರು. ಸಾಕಷ್ಟು ಬಾರಿ ಇವರಿಬ್ಬರು ಇರುವ ಫೋಟೋ ವೈರಲ್‌ ಆದರೂ ಕೂಡ ನಾವು ಸ್ನೇಹಿತರು ಎಂದು ಸಮಜಾಯಿಷಿ ಕೊಟ್ಟಿದ್ದರು.  
 

47

ಹೈದರಾಬಾದ್‌ನಲ್ಲಿ 2024 ಡಿಸೆಂಬರ್ 4 ರಂದು ನಾಗ ಚೈತನ್ಯ, ಶೋಭಿತಾ ಧೂಳಿಪಾಲ ಅವರು ಅನ್ನಪೂರ್ಣ ಸ್ಟುಡಿಯೋದಲ್ಲಿ ಮದುವೆಯಾಗಿದ್ದರು. ತುಂಬ ಖಾಸಗಿಯಾಗಿ ಈ ಮದುವೆ ನಡೆದಿತ್ತು. 

57


ಶೋಭಿತಾ ಹಾಗೂ ನಾಗಚೈತನ್ಯ ಅವರು ಮದುವೆಯಾದ ಬಳಿಕ ಒಂದಿಲ್ಲೊಂದು ಮದುವೆ, ಸಭೆ-ಸಮಾರಂಭಗಳಲ್ಲಿ ಅವರು ಭಾಗವಹಿಸಿದ್ದರು. ಇದರ ಜೊತೆಗೆ ಈಗ ಹಾಲಿಡೇ ಮೂಡ್‌ನಲ್ಲಿದ್ದಾರೆ. 
 

67

ನಾಗಚೈತನ್ಯ ಅವರಿಗೆ ಕಾರ್‌ ಎಂದರೆ ತುಂಬ ಇಷ್ಟ. ಈಗ ಶೋಭಿತಾ ಅವರು ಪತಿ ಜೊತೆಗೆ ಕಾರ್‌ ರೇಸ್‌ನಲ್ಲಿ ಭಾಗಿಯಾಗಿದ್ದಾರೆ. ಒಟ್ಟಿನಲ್ಲಿ ಈ ಜೋಡಿ ಫುಲ್‌ ಖುಷಿ ಆಗಿದೆಯಂತೆ. 

77

ಶೋಭಿತಾ ಅವರು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್‌ ಆಗಿದ್ದು, ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 

Read more Photos on
click me!

Recommended Stories