ಕಿಯಾರಾಳನ್ನು ಮದ್ವೆಯಾಗಿ ಸಿಕ್ಕಾಪಟ್ಟೆ ಖುಷಿಯಾಗಿರುವೆ; ಪೋಸ್ಟ್‌ ವೆಡ್ಡಿಂಗ್ ಗ್ಲೋ ಬಗ್ಗೆ ಸಿದ್ಧಾರ್ಥ್ ಮಲ್ಹೋತ್ರಾ

First Published Mar 1, 2023, 1:10 PM IST

ನಿಜ ಜೀವನದಲ್ಲಿ ವಿಕ್ರಮ್ ಮತ್ತು ಡಿಂಪಿ ರೀತಿ ಫೀಲ್ ಆಗುತ್ತಿದೆ ಎಂದು ಮೊದಲ ಸಲ ಮದುವೆ ಬಗ್ಗೆ ಮಾತನಾಡಿದ ಸಿದ್ಧಾರ್ಥ್...

ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್‌ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾನಿ ಪೋಸ್ಟ್‌ ಮ್ಯಾರೇಜ್‌ ಲೈಫ್‌ನ ಎಂಜಾಯ್ ಮಾಡುತ್ತಿದ್ದಾರೆ. 
 

ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಸಿದ್ಧಾರ್ಥ್‌ ಮದುವೆ ಜೀವನದ ಬಗ್ಗೆ ಹೇಳಿದ್ದಾರೆ. ಕಿಯಾರಾ ಮತ್ತು ನನಗೆ ನಿಜಕ್ಕೂ ವಿಕ್ರಮ್ ಮತ್ತು ಡಿಂಪಿ ಪ್ರೀತಿ ಮನಸ್ಸಿಗೆ ಹತ್ತಿರವಾಗಿದೆ. 
 

Latest Videos


'ಪ್ಯಾರಲಲ್‌ ಪ್ರಪಂಚದಲ್ಲಿ ವಿಕ್ರಮ್ ಮತ್ತು ಡಿಂಪಿ ಒಂದಾಗಿದ್ದಾರೆ. ಶೇರ್ಷಾ ಸಿನಿಮಾ ನಮ್ಮಿಬ್ಬರಿಗೂ ತುಂಬಾ ಪ್ರೀತಿ ಕೊಟ್ಟಿದೆ. ಒಂದು ಸಿನಿಮಾ ಹಿಟ್ ಆಗಿ ಪ್ರೀತಿ ಪಡೆದುಕೊಂಡೆ ನಮಗೆ ಇನ್ನೇನು ಬೇಕು' ಎಂದು ಸಿದ್ಧಾರ್ಥ್ ಹೇಳಿದ್ದಾರೆ.

'ವಿಶಾಲ್ ಬಾತ್ರಾ ಸಹೋದರ ನಮ್ಮ ವಿಚಾರ ತಿಳಿದು ತುಂಬಾನೇ ಎಮೋಷನಲ್ ಆಗಿದ್ದರು. ನಮ್ಮ ಮದುವೆಯಲ್ಲಿ ಭಾಗಿಯಾಗಿ ತುಂಬಾ ಖುಷಿ ಪಟ್ಟರು' ಎಂದಿದ್ದಾರೆ ಸಿದ್ಧಾರ್ಥ್‌. 

'ಪೋಸ್ಟ್‌ ವೆಡ್ಡಿಂಗ್‌ ಗ್ಲೋ ತುಂಬಾ ರಿಯಲ್ ಆಗಿದೆ. ನಮ್ಮ ಹೊಸ ಜೀವನ ವಂಡರ್‌ಫುಲ್ ಆಗಿದೆ. ನಾವು ನಿಜಕ್ಕೂ ಸಿಕ್ಕಾಪಟ್ಟೆ ಖುಷಿಯಾಗಿರುವೆ' ಎಂದು ಸಿದ್ಧಾರ್ಥ್‌ ಹೇಳಿದ್ದಾರೆ.

 ಹೈ ಸೆಕ್ಯೂರಿಟಿಯಲ್ಲಿ ಮದುವೆಯಾಗಿರುವ ಸಿದ್ಧಾರ್ಥ್‌ ಮತ್ತು ಕಿಯಾರಾ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳುತ್ತಿದ್ದಾರೆ. ಸೂರ್ಯಗ್ರ ಅರಮನೆಯಲ್ಲಿ ಫೆಬ್ರವರಿ 7ರಂದು ಮದುವೆ ಆದರು.
 

ಕೆಲವು ದಿನಗಳ ಹಿಂದೆ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಕಿಯಾರಾಳನ್ನು ನನ್ನ ಹೆಂಡತಿಯನ್ನು ಹೆಮ್ಮೆಯಿಂದ ಕರೆಯುತ್ತಿರುವೆ ಎಂದು ಮಾತನಾಡಿದ್ದಾರೆ. ನೆಟ್ಟಿಗರು ಮಿಶ್ರ ಅಭಿಪ್ರಾಯ ವ್ಯಕ್ತ ಪಡಿಸಿದ್ದರು. 

click me!