ನೋವು ನಷ್ಟ ಸಂಕಟ; ಕಷ್ಟ ದಿನಗಳಿಂದ ಹೊರ ಬಂದಿದ್ದು ಹೇಗೆಂದು ಹಂಚಿಕೊಂಡ ಸಮಂತಾ

Published : Feb 28, 2023, 11:39 AM IST

ನಟಿ ಸಮಂತಾ ರುತ್ ಪ್ರಭು ಸಿನಿಮಾರಂಗದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ತುಂಬಾ ಸ್ಟ್ರಾಂಗ್‌ ರೋಲ್‌ಗಳನ್ನು ಪ್ಲೇ ಮಾಡಿದ್ದಾರೆ. ನೋವು ನಷ್ಟ ಸಂಕಟಗಳನ್ನು ಹೇಗೆ ಎದುರಿಸಬೇಕೆಂದು ಸಮಂತಾ ಹೇಳಿದ್ದಾರೆ....

PREV
17
ನೋವು ನಷ್ಟ ಸಂಕಟ; ಕಷ್ಟ ದಿನಗಳಿಂದ ಹೊರ ಬಂದಿದ್ದು ಹೇಗೆಂದು ಹಂಚಿಕೊಂಡ ಸಮಂತಾ

ಟಾಲಿವುಡ್,ಕಾಲಿವುಡ್ ಮತ್ತು ಬಾಲಿವುಡ್‌ ಪ್ರಪಂಚವನ್ನು ರೂಲ್ ಮಾಡುತ್ತಿರುವ ಊ ಅಂಟಾವಾ ಚೆಲುವೆ ಸಮಂತಾ ಜೀವನದಲ್ಲಿ ನೋವು, ನಷ್ಟ ಮತ್ತು ಸಂಕಟಳನ್ನು ಹೇಗೆ ಎದುರಿಸಬೇಕೆಂದು ಮಾತನಾಡಿದ್ದಾರೆ. 

27

ಈ ಪ್ರಪಂಚದಲ್ಲಿ ಯಾರೂ ಪರ್ಫೆಕ್ಟ್‌ ಅಲ್ಲ: ರೂಹಿಷಿ ಟ್ರಸ್ಟ್‌ ಮತ್ತು ಡತ್ಲಾ ಸಂಸ್ಥೆ ನಡೆಸಿದ Psychiatry at your doorstep ಕಾರ್ಯಕ್ರಮದಲ್ಲಿ ಸಮಂತಾ ಭಾಗಿಯಾಗಿ ನಮ್ಮ ಜೀವನ ಇನ್ನಿತ್ತರರ ರೀತಿ ಪರ್ಫೆಕ್ಟ್‌ ಆಗಿಲ್ಲ ಎಂದು ಹೇಳಿಕೊಂಡಿದ್ದರು. 

37

ಸಹಾಯ ಕೇಳಿ: ತುಂಬಾ ನೋವು ಅಥವಾ ಸಂಕಟದಲ್ಲಿ ಇದ್ದರೆ ಒಬ್ಬರ ಜೊತೆ ಕುಳಿತುಕೊಂಡು ಮಾತನಾಡಬೇಕು. ಸಮಸ್ಯೆ ಏನೇ ಇರಲಿ ನಮ್ಮವರೊಟ್ಟಿಗೆ ಚರ್ಚೆ ಮಾಡಿ ನೋವನ್ನು ಹಂಚಿಕೊಂಡ ಪರಿಹಾರ ಸಿಗುತ್ತದೆ.

47

ಸ್ನೇಹಿತರು: ಸಮಂತಾ ಹೇಳುವ ಪ್ರಕಾರ ಸ್ಟ್ರಾಂಗ್ ಸಮಸ್ಯೆಗಳಿಗೆ ಸ್ನೇಹಿತರು ಸಹಾಯ ಮಾಡುತ್ತಾರೆ. ಸಮಂತಾ ಕಷ್ಟದ ಸಮಯದಲ್ಲಿ ಸ್ನೇಹಿತರೇ ಸಹಾಯ ಮಾಡಿದ್ದಂತೆ.

57

Counselling: ಸ್ನೇಹಿತರ ಬಳಿ ಸಮಸ್ಯೆ ಹಂಚಿಕೊಂಡಾಗ ತಕ್ಷಣವೇ ಕೌನ್ಸಿಲಿಂಗ್ ಮಾಡಿಸಿಕೊಳ್ಳುವಂತೆ ಸಲಹೆ ಕೊಟ್ಟಿದ್ದಾರೆ. ಹೀಗಾಗಿ ಸಮಂತಾ ಹೇಳುವ ಪ್ರಕಾರ ಕೌನ್ಸಿಲಿಂಗ್ ಮುಖ್ಯವಾಗುತ್ತದೆ. 
 

67

 ಪರ್ಸನಲ್‌ ಲೈಫ್‌ನಲ್ಲಿ ತುಂಬಾ ಕಷ್ಟಗಳನ್ನು ನೋಡಿರುವ ಸಮಂತಾಗೆ ಎಲ್ಲಿಂದ ಇಷ್ಟೊಂದು ಧೈರ್ಯ ಬಂದಿದ್ದು ಎಂದು ಪ್ರಶ್ನೆ ಮಾಡಲಾಗಿತ್ತು. ಆರೋಗ್ಯ ಸಮಸ್ಯೆ ಎದುರಾದದಾಗ ಪತಿ ನಾಗಚೈತನ್ಯಾರಿಂದ ದೂರ ಉಳಿದಿದ್ದರು.
 

77

ಒಬ್ಬ ವ್ಯಕ್ತಿ ಬೇಸರದಲ್ಲಿದ್ದರೆ ಏನೋ ಆಗಿದೆ ಎನ್ನುವ ರೀತಿಯಲ್ಲಿ ವರ್ತಿಸುತ್ತಾರಂತೆ. ಇದನ್ನು ನಾರ್ಮಲ್ ಮಾಡಬೇಕು ಪ್ರತಿಯೊಬ್ಬರು ಬೇಸರ ಮಾಡಿಕೊಳ್ಳುತ್ತಾರೆ ಹೀಗಾಗಿ ಬೇಸರ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂದು ಅರ್ಥ ಮಾಡಿಸಬೇಕು.
 

Read more Photos on
click me!

Recommended Stories