ಬಹಿರಂಗವಾಗಿ 'ಸೀತಾ ರಾಮಂ' ನಟಿಗೆ ಪ್ರಪೋಸ್ ಮಾಡಿದ ಅಂಕಲ್; ಸರಿಯಾಗಿ ತಿರುಗೇಟು ನೀಡಿದ ಮೃಣಾಲ್

First Published Feb 28, 2023, 10:29 AM IST

ತಮಾಷೆಗೆ ವಿಡಿಯೋ ಹಂಚಿಕೊಂಡ ಮೃಣಾಲ್. ಕಾಮೆಂಟ್‌ನಲ್ಲಿ ಪ್ರಪೋಸ್‌ ಮಾಡಿದ ವ್ಯಕ್ತಿಗೆ ಏನೆಂದು ಉತ್ತರ ಕೊಟ್ಟ ಚೆಲುವೆ? 
 

ಹಿಂದಿ ಮತ್ತು ತೆಲುಗು ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿ ಮೃಣಾಲ್ ಠಾಕೂರ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ವರ್ಕ್‌ ಆಂಡ್ ಪರ್ಸನಲ್ ಲೈಫ್‌ನ ಪ್ರತಿಯೊಂದು ಅಪ್ಲೇಟ್‌ಗಳನ್ನು ಹಂಚಿಕೊಳ್ಳುತ್ತಾರೆ.

ಕೆಲವು ದಿನಗಳ ಹಿಂದೆ ಮೃಣಾಲ್ ಸ್ಲೋ ಮೋಷನ್‌ ರೊಮ್ಯಾಂಟಿಕ್ ವಿಡಿಯೋ ಹಂಚಿಕೊಂಡಿದ್ದರು. ಧರಿಸಿರುವ ಆಭರಣ, ವೈಟ್ ಸೆಲ್ವಾರ್‌ನಲ್ಲಿ ಮಿಂಚುತ್ತಿದ್ದಾರೆ. ಮೃಣಾಲ್‌ ನೋಡುತ್ತಿದ್ದಂತೆ ಸೀತಾ ಪಾತ್ರವನ್ನು ನೆನಪು ಮಾಡಿಕೊಳ್ಳುತ್ತಾರೆ. 

ಈ ವಿಡಿಯೋದಲ್ಲಿ ನಾನು ಮುದ್ದಾಗಿರುವೆ ಬೋರ್ ಆದರೆ ಕೆಲವು ನಿಮಿಷಗಳ ನಂತರ ಡಿಲೀಟ್ ಮಾಡುವೆ ಎಂದು ಮೃಣಾಲ್ ಬರೆದುಕೊಂಡಿದ್ದರು. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಪ್ರಪೋಸ್ ಮಾಡಿದ್ದಾರೆ. 

ನಿಮ್ಮ ವಿಡಿಯೋ ನನಗೆ ಇಷ್ಟವಾಗಿ ನಾನು ನಿಮ್ಮನ್ನು ಮದುವೆ ಮಾಡಿಕೊಳ್ಳಲು ರೆಡಿಯಾಗಿರುವೆ ಎಂದು ವ್ಯಕ್ತಿಯೊಬ್ಬ ಕಾಮೆಂಟ್ ಮಾಡಿದ್ದಾನೆ. ಇದಕ್ಕೆ 'ನಿನಗೆ ನೇರವಾಗಿ ಉತ್ತರ ಕೊಡುವೆ 'NO' ಎಂದು ಮೃಣಾಲ್ ಉತ್ತರಿಸಿದ್ದಾರೆ.

'ಕಾಮನ್ ಮ್ಯಾನ್‌ನ ಮದುವೆ ಮಾಡಿಕೊಳ್ಳುವ ಹುಡುಗಿ ಮೃಣಾಲ್ ಅಲ್ಲ ಸುಮ್ಮನೆ ಯಾಕೆ ಪ್ರಪೋಸ್ ಮಾಡಿ ಟೈಂ ವೇಸ್ಟ್‌ ಮಾಡಿಕೊಳ್ಳುತ್ತೀರಾ?' ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದಾನೆ.

ಸೀತಾ ರಾಮಂ ಸಿನಿಮಾ ನಂತರ ಮೃಣಾಲ್ ಕೈ ತುಂಬಾ ಆಫರ್‌ಗಳು ಬಂದಿದೆ. ಅಕ್ಷಯ್ ಕುಮಾರ್ ಜೊತೆ ಸೆಲ್ಫಿ ಸಿನಿಮಾದಲ್ಲಿ ಸ್ಪೆಷಲ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಸೆಲ್ಫಿ ಸಿನಿಮಾದಲ್ಲಿ ಡಯಾನಾ ಪೆಂಟಿ, ಇಮ್ರಾನ್ ಹಶ್ಮಿ ಅಭಿನಯಿಸಿದ್ದಾರೆ. 

ಸೀತಾ ರಾಮಂ ಸಿನಿಮಾದಿಂದ ಕಲರ್‌ಫುಲ್‌ ಫ್ಲೋರಲ್‌ ಸೀರೆಗಳು ತುಂಬಾನೇ ಟ್ರೆಂಡ್‌ ಆಗಲು ಶುರುವಾಗಿತ್ತು. ಸಿಂಪಲ್ ಅಂಡ್ ಕ್ಯೂಟ್ ಲವ್ ಸ್ಟೋರಿಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. 

click me!