ಮದುವೆಯಾಗಿ ಮೊದಲ ಬಾರಿಗೆ ಮುಂಬೈಗೆ ಬಂದ ನಟ ಸಿದ್ದಾರ್ಥ್‌ ದಂಪತಿ, ಗಮನ ಸೆಳೆದ ಕಿಯಾರಾಳ ತಾಳಿ- ಸಿಂಧೂರ!

Published : Feb 11, 2023, 08:40 PM IST

ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಅದ್ಧೂರಿಯಾಗಿ ಮದುವೆಯಾದ ಕಿಯಾರಾ ಅಡ್ವಾಣಿ (Kiara Advani)  ಮತ್ತು ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಮದುವೆಯಾದ ಬಳಿಕ ಮೊದಲ ಬಾರಿಗೆ ಖಾಸಗಿ ಫ್ಲೈಟ್ ಮೂಲಕ ಮುಂಬೈಗೆ ಬಂದಿಳಿದಿದ್ದಾರೆ. ಈ ವೇಳೆ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಫೆ.12ಕ್ಕೆ ಬಾಲಿವುಡ್‌ಗಾಗಿ ಗ್ರಾಂಡ್ ಆರತಕ್ಷತೆ ನಡೆಯಲಿದೆ. ವಿಶೇಷವೆಂದರೆ ಈ ವೇಳೆ ಕಿಯಾರಾ  ಮಂಗಳಸೂತ್ರ ಮತ್ತು ಸಿಂಧೂರ ಧರಿಸಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಈ ಹಿಂದೆ ಇತ್ತೀಚೆಗೆ ಮದುವೆಯಾದ ಕ್ರಿಕೆಟರ್ ರಾಹುಲ್ ಪತ್ನಿ ಅಥಿಯಾ ಶೆಟ್ಟಿ ಮಂಗಳಸೂತ್ರ ಮತ್ತು ಸಿಂಧೂರ  ಧರಿಸದೇ ಇದ್ದಿದ್ದು ಟ್ರೋಲ್ ಆಗಿತ್ತು. 

PREV
14
ಮದುವೆಯಾಗಿ ಮೊದಲ ಬಾರಿಗೆ  ಮುಂಬೈಗೆ ಬಂದ ನಟ ಸಿದ್ದಾರ್ಥ್‌ ದಂಪತಿ, ಗಮನ ಸೆಳೆದ ಕಿಯಾರಾಳ ತಾಳಿ- ಸಿಂಧೂರ!

ಹಳದಿ ಮತ್ತು ಬಿಳಿ ಬಣ್ಣದ ಚೂಡಿದಾರ್‌ ನಲ್ಲಿ ಕಿಯಾರಾ ಜೊತೆಗೆ ಬಿಳಿ ಕುರ್ತಾ ಪೈಜಾಮಾದಲ್ಲಿ  ಸಿದ್ಧಾರ್ಥ್  ಸರಳ ಮತ್ತು ಸುಂದರವಾಗಿ ಕಾಣಿಸಿಕೊಂಡರು. 

24

ಫೆಬ್ರವರಿ 12 ರ ಭಾನುವಾರದಂದು ಮುಂಬೈನಲ್ಲಿ ತಮ್ಮ ಬಾಲಿವುಡ್ ಸ್ನೇಹಿತರಿಗಾಗಿ ಬಹುದೊಡ್ಡ ಮಟ್ಟದಲ್ಲಿ ಅದ್ಧೂರಿ ಆರತಕ್ಷತೆ ಇಟ್ಟುಕೊಂಡಿದ್ದು, ಒಂದು ದಿನ ಮುಂಚಿತವಾಗಿ ದಂಪತಿಗಳು ಮುಂಬೈಗೆ ಬಂದಿಳಿದರು. 

34

ಫೆಬ್ರವರಿ 7ರಂದು ಸುವರ್ಣ ನಗರಿ ಎಂದೆನಿಸಿಕೊಂಡಿರುವ ಸೂರ್ಯಗಢ ಅರಮನೆಯಲ್ಲಿ ನಡೆದ ಸುಂದರ ಮತ್ತು ಅದ್ಧೂರಿ ಸಮಾರಂಭದಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

44

ಮದುವೆ ಬಳಿಕ ದೆಹಲಿಯ ಮನೆಯಲ್ಲಿ  ಆರತಕ್ಷತೆ ಪಾರ್ಟಿ ಇಟ್ಟುಕೊಂಡಿದ್ದರು. ಇದು ಖಾಸಗಿ ಕಾರ್ಯಕ್ರಮವಾಗಿದ್ದು, ಸ್ನೇಹಿತರು ಮತ್ತು ಕುಟುಂಬವನ್ನು ಮಾತ್ರ ಆಹ್ವಾನಿಸಲಾಗಿತ್ತು. ಇದರ ಫೋಟೋಗಳು ವೈರಲ್ ಆಗಿತ್ತು.

Read more Photos on
click me!

Recommended Stories