ಕೆಜಿಎಫ್ ನಟಿ ಮೌನಿ ರಾಯ್ ಇತ್ತೀಚಿನ ಫೋಟೋಶೂಟ್‌ನ ಕೆಲವು ಫೋಟೋಗಳ ಸೆಟ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ನಾಗಿನ್ ಖ್ಯಾತಿಯ ಮೌನಿ ರಾಯ್ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಹಾಟ್ ಅಂಡ್ ಬೋಲ್ಡ್ ಆಗಿದ್ದಾರೆ. ಈಗ ಮೌನಿ ತಮ್ಮ ಹಾಟೆಸ್ಟ್ ಫೋಟೋಗಳ ಮೂಲಕ ಇಂಟರ್‌ನೆಟ್‌ಗೆ ಬೆಂಕಿ ಹಂಚಿದ್ದಾರೆ
'ಹೃದಯದಿಂದ ಮಾತ್ರ ಸರಿಯಾಗಿ ನೋಡಬಹುದು; ಅತ್ಯಗತ್ಯವಾದದ್ದು ಕಣ್ಣಿಗೆ ಕಾಣುವುದಿಲ್ಲ..' ಎಂಬ ಶೀರ್ಷಿಕೆಯೊಂದಿಗೆ ನಟಿ ವಿಂಟೇಜ್ ಫೋಟೋಶೂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಮೌನಿ ಅವರು ಕಪ್ಪು ಬಣ್ಣದ ಟೈ-ಅಪ್ ಬಟ್ಟೆ ಜೊತೆ ಬೂದು ಬಣ್ಣದ ಹಾಲ್ಟರ್ ನೆಕ್‌ಲೈನ್ ಬ್ರಾಲೇಟ್ ಧರಿಸಿ ಫೋಟೋಶೂಟ್‌ಗಾಗಿ ಬರಿಗಾಲ ವಿಭಿನ್ನ ಪೋಸ್‌ಗಳನ್ನು ನೀಡಿದ್ದಾರೆ.
ಬದಿಯಲ್ಲಿ ಟೈ-ಅಪ್ ವಿವರವನ್ನು ಹೊಂದಿರುವ ಪಾರದರ್ಶಕ ಕಪ್ಪು ಬಟ್ಟೆಯು, ಮುಂದೆ ಥೈ ಹೈಯ್ ಸ್ಲಿಟ್ ಹೊಂದಿದ್ದು ಮೌನಿ ಇನ್ನು ಹೆಚ್ಚು ಮಾದಕವಾಗಿ ಕಾಣಲೂ ಸಹಾಯ ಮಾಡಿದೆ.
ತಮ್ಮ ಲುಕ್ ಪೂರ್ಣಗೊಳಿಸಲು ನಟಿ ಆಕ್ಸಿಡಯಸ್ ಬೆಳ್ಳಿಯ ಆಭರಣಗಳನ್ನು ಆರಿಸಿಕೊಂಡಿದ್ದು, ಚೈನ್ ಲಿಂಕ್ ಚೋಕರ್, ದೊಡ್ಡ ಪದಕದ ನೆಕ್ಲೇಸ್, ಕಡಗಗಳನ್ನು ಧರಿಸಿದ್ದಾರೆ. ಜೊತಗೆ ಮೇಕಪ್‌ನಲ್ಲಿ ಸ್ಮೋಕಿ ಐ ಶ್ಯಾಡೋ, ಸ್ಲೀಕ್ ಐಲೈನರ್, ಕೋಹ್ಲ್-ಸ್ಮಡ್ಡ್ ಕಣ್ಣುಗಳು, ಮಸ್ಕರಾ, ನ್ಯೂಡ್ ಲಿಪ್ ಶೆಡ್ ಬಳಸಿದ್ದಾರೆ.
ನಟಿಸಿರುವ ಸಿನಿಮಾಗಳ ಸಂಖ್ಯೆ ಕಡಿಮೆಯಾದರೂ ಸದಾ ಸುದ್ದಿಯಲ್ಲಿರುವ ಮೌನಿ ಕೊನೆಯದಾಗಿ ಬ್ರಹ್ಮಾಸ್ತ್ರ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.