ಕರಣ್ ಜೋಹರ್ ಅವಳಿ ಮಕ್ಕಳಿಗೆ 6 ವರ್ಷ: ಎಮೋಷನಲ್ ಆಗಿ ವಿಶ್ ಮಾಡಿದ ಬಾಲಿವುಡ್ ನಿರ್ದೇಶಕ

Published : Feb 07, 2023, 05:32 PM IST

ಕರಣ್ ಜೋಹರ್ (Karan Johar) ಅವರ  ಮಕ್ಕಳಾದ ಯಶ್ ಮತ್ತು ರೂಹಿ ಫೆಬ್ರವರಿ 6ರಂದು 6ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ ಮತ್ತು ಈ ಸಮಯದಲ್ಲಿ  ಚಲನಚಿತ್ರ ನಿರ್ಮಾಪಕ ಕರಣ್‌ ಅವರು ತಮ್ಮ ಅವಳಿ ಮಕ್ಕಳಿಗೆ  ತುಂಬಾ ಉತ್ತಮವಾದ ಸಲಹೆ ನೀಡಿ ವಿಶ್‌ ಮಾಡಿದ್ದಾರೆ. ಕರಣ್‌ ಜೋಹರ್‌ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಅವರ ಪ್ರೀತಿ ಮತ್ತು ಸಂತೋಷವನ್ನು ವ್ಯಕ್ತಪಡಿಸುವ ದೀರ್ಘ ಟಿಪ್ಪಣಿಯನ್ನು ಬರೆದಿದ್ದಾರೆ. 

PREV
17
ಕರಣ್ ಜೋಹರ್ ಅವಳಿ ಮಕ್ಕಳಿಗೆ 6 ವರ್ಷ: ಎಮೋಷನಲ್ ಆಗಿ ವಿಶ್ ಮಾಡಿದ ಬಾಲಿವುಡ್ ನಿರ್ದೇಶಕ

ಫೆಬ್ರವರಿ 1, 2022 ರಂದು ತನ್ನ ಅವಳಿ ಮಕ್ಕಳ ಜನ್ಮದಿನದ ಮೊದಲು ಚಿತ್ರನಿರ್ಮಾಪಕರು ಆಯೋಜಿಸಿದ್ದ ಹುಟ್ಟುಹಬ್ಬದ ಆಚರಣೆಯ ವೀಡಿಯೊ ಆಗಿದೆ. ವೀಡಿಯೊದಲ್ಲಿ,  ಕರಣ್, ಅವರ ತಾಯಿ ಹಿರೂ ಜೋಹರ್ ಮತ್ತು ಮಕ್ಕಳು ಯಶ್ ಮತ್ತು ರೂಹಿ ಕಪ್ಪು ಡ್ರೆಸ್‌ನಲ್ಲಿ  ಕಾಣಿಸಿಕೊಂಡಿದ್ದಾರೆ.

27

ಯಶ್, ರೂಹಿ ಮತ್ತು ಕರಣ್‌ ಒಂದೇ ರೀತಿಯ ಮಿಕ್ಕಿ ಮೌಸ್ ಕಾರ್ಟೂನ್ ಸ್ವೆಟ್‌ಶರ್ಟ್‌ಗಳು ಮತ್ತು ಮ್ಯಾಚಿಂಗ್ ಬಾಟಮ್‌ಗಳಲ್ಲಿ ಸಖತ್‌ ಕ್ಯೂಟ್‌ ಆಗಿ ಕಾಣಿಸಿದ್ದಾರೆ.

37

ಕರಣ್‌ ಜೋಹರ್‌ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಹಂಚಿಕೊಂಡು ತಮ್ಮ ಮಕ್ಕಳಿಗೆ ಯಾವಾಗಲೂ ಕರುಣಾಮಯಿ ಆಗಿರಿ ಎಂದು ಸಲಹೆ ನೀಡಿದ್ದಾರೆ.

47

'ನನ್ನ ಹೃದಯದ ಅಮೂಲ್ಯ ತುಣುಕುಗಳು ಇಂದು 6ನೇ ವರ್ಷಕ್ಕೆ ಕಾಲಿಡುತ್ತವೆ. ಈ ಪ್ರೀತಿಯನ್ನು ವಿವರಿಸುವುದು ಕಷ್ಟ. ಆದರೆ ಇದು ಇತರ ಎಲ್ಲಾ ಭಾವನೆಗಳು ಹಿಂದಿಕ್ಕಿ ತುಂಬಾ ಪ್ರೀತಿಯ ಸ್ಫೋಟದಂತೆ ಭಾಸವಾಗುತ್ತದೆ.ಈ ಪೋಷಕರ ಪ್ರಯಾಣದಲ್ಲಿ ನನ್ನೊಂದಿಗೆ ತಾಯಿಯನ್ನು ಹೊಂದಿರುವುದು ನನಗೆ ಆಶೀರ್ವಾದ. ಅವಳಿಲ್ಲದೆ  ನಾನು ಎಲ್ಲಿಯೂ ಇಲ್ಲ ಎಂದು ದೇವರಿಗೆ ತಿಳಿದಿದೆ. ಅವಳು ನಮ್ಮ ಮೂವರಿಗೂ ಆಧಾರ ಸ್ತಂಭ. ಹುಟ್ಟುಹಬ್ಬದ ಶುಭಾಶಯಗಳು ರೂಹಿ ಮತ್ತು ಯಶ್ ನೀವು ಏನಾಗಬೇಕೆಂದು ಬಯಸುತ್ತೀರಿ ಆದರೆ ದಯವಿಟ್ಟು ಯಾವಾಗಲೂ ದಯೆಯಿಂದಿರಿ. ಡ್ಯಾಡಿ ನಿಮ್ಮನ್ನು ತುಂಬಾ ತುಂಬಾ ಪ್ರೀತಿಸುತ್ತಾರೆ ಎಂದು' ಕರಣ್‌ ಜೋಹರ್‌ ಪೋಸ್ಟ್‌ನಲ್ಲಿ ಬರೆದಿದ್ದಾರೆ.

57

ಕರಣ್‌ ಜೋಹರ್‌ ಫೆಬ್ರವರಿ 1 ರಂದು ಮುಂಬೈನಲ್ಲಿ ತಮ್ಮ ಅವಳಿ ಮಕ್ಕಳಾದ ರೂಹಿ ಮತ್ತು ಯಶ್‌ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಿದ್ದರು.  

67

ಬಾಲಿವುಡ್ ಸೆಲೆಬ್ರಿಟಿಗಳಾದ  ಕರೀನಾ ಕಪೂರ್ ಖಾನ್, ಗೌರಿ ಖಾನ್, ಶಿಲ್ಪಾ ಶೆಟ್ಟಿ ಮತ್ತು ಸೋಹಾ ಅಲಿ ಖಾನ್ ಸೇರಿದಂತೆ ಸೇರಿದಂತೆ ಹಲವರು ತಮ್ಮ  ಚಿಕ್ಕ ಮಕ್ಕಳೊಂದಿಗೆ ಈ ಸೆಲಬ್ರೆಷನ್‌ನಲ್ಲಿ ಭಾಗವಹಿಸಿದ್ದರು.

77

ಕೆಲಸದ ಮುಂಭಾಗದಲ್ಲಿ, ಕರಣ್ ತಮ್ಮ ಮುಂಬರುವ  ಚಿತ್ರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಮೂಲಕ ಬೆಳ್ಳಿ ಪರದೆಯ ಮೇಲೆ ಪುನರಾಗಮನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

Read more Photos on
click me!

Recommended Stories