ಒಂದೇ ಜಾಕೆಟ್‌ನಲ್ಲಿ ನೇಪಾಳ ಟ್ರಿಪ್ ಮುಗಿಸಿ ಇನ್ನೈದು ವರ್ಷ ಇದನ್ನು ಮುಟ್ಟೋಲ್ಲ ಎಂದ ಶ್ರದ್ಧಾ ಶ್ರೀನಾಥ್

First Published | Mar 25, 2024, 12:19 PM IST

ಬಹುಭಾಷಾ ನಟಿ ಶ್ರದ್ಧಾ ಶ್ರೀನಾಥ್ ಒಬ್ಬರೇ ನೇಪಾಳ ಪ್ರವಾಸ ಮುಗಿಸಿ ಬಂದಿದ್ದಾರೆ. ಈಗ ತಮ್ಮ ಪ್ರವಾಸದ ಫೋಟೋಗಳನ್ನು ಒಂದೊಂದಾಗಿ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ, ಈ ಬಗ್ಗೆ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. 

ಬಹುಭಾಷಾ ನಟಿ ಶ್ರದ್ಧಾ ಶ್ರೀನಾಥ್ ಒಬ್ಬರೇ ನೇಪಾಳ ಪ್ರವಾಸ ಮುಗಿಸಿ ಬಂದಿದ್ದಾರೆ. ಈಗ ತಮ್ಮ ಪ್ರವಾಸದ ಫೋಟೋಗಳನ್ನು ಒಂದೊಂದಾಗಿ ಹಂಚಿಕೊಳ್ಳುತ್ತಿದ್ದಾರೆ. 

ತಾವೊಬ್ಬರೇ ಹೋಗಿದ್ದರಿಂದ ಹೆಚ್ಚಿನ ಫೋಟೋಗಳು ಸೆಲ್ಫೀಯೇ ಆಗಿವೆ ಎಂದಿರುವ ಅವರು ಅಪರಿಚಿತರ ಕೈಲಿ ಕೆಲ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುವಾಗ ತಮಗೆ ನಂಬಿಕೆ ಸಮಸ್ಯೆಗಳು ಉದ್ಭವವಾಗುತ್ತವೆ ಎಂದಿದ್ದಾರೆ. 

Tap to resize

ಚಿತ್ರಗಳಲ್ಲಿ ನಟಿ ನಪಾಳದ ಹಿಮದಲ್ಲಿ ಸಂಭ್ರಮಿಸುವುದನ್ನು, ಹೆಲಿಕಾಪ್ಟರ್ ಹಾರಾಟವನ್ನು, ಸ್ಕೈ ಡೈವಿಂಗ್ ಮಾಡುವುದು, ಚಾರಣ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ತೊಡಗಿರುವುದನ್ನು ಕಾಣಬಹುದು. 

'ಆಪರೇಶನ್ ಅಲಮೇಲಮ್ಮ' ನಟಿಯು ತಾವು ಈ ಟ್ರಿಪ್‌ನ ಉದ್ದಕ್ಕೂ ಒಂದೇ ಜಾಕೆಟ್ ತೆಗೆದುಕೊಂಡು ಹೋಗಿದ್ದರಿಂದ ಎಲ್ಲ ಪೋಟೋಗಳಲ್ಲೂ ಅದನ್ನೇ ಧರಿಸಿದ್ದೇನೆ ಎಂದಿದ್ದಾರೆ.

ಇದು ಎಷ್ಟು ರೇಜಿಗೆ ಹುಟ್ಟಿಸಿದೆ ಎಂದರೆ ಜಾಕೆಟ್ ಚೆನ್ನಾಗಿದ್ದರೂ ಇನ್ನೈದು ವರ್ಷ ತಾವದನ್ನು ಬಳಸಬಾರದೆಂದು ನಿರ್ಧರಿಸಿ ಕ್ಲೋಸೆಟ್‌ನ ಕೆಳಭಾಗದಲ್ಲಿ ಡಂಪ್ ಮಾಡಿರುವುದಾಗಿ ಶ್ರದ್ಧಾ ಹೇಳಿದ್ದಾರೆ. 

ನಾನು ಯಾರು? ನನ್ನ ಉದ್ದೇಶವೇನು? ಯಾರಾದರೂ ನನ್ನ ಚಿತ್ರವನ್ನು ತೆಗೆಯುವಾಗ ನನ್ನ ಕೈಗಳಿಂದ ನಾನು ಏನು ಮಾಡಬೇಕು? ಎಂಬ ಕೆಲವು ಪ್ರಶ್ನೆಗಳು ರಾತ್ರಿಯ ಸಮಯದಲ್ಲಿ ನನ್ನನ್ನು ಕಾಡುತ್ತವೆ ಎಂದಿರುವ ಶ್ರದ್ಧಾ ತಮ್ಮ ಈ ಟ್ರಿಪ್ ಕೊಂಚ ಭಿನ್ನವಾಗಿತ್ತು ಎಂದು ಹೇಳಿದ್ದಾರೆ. 

ಟ್ರಿಪ್ ಎಂಬ ಕಾರಣಕ್ಕೆ ದಿನವೂ ಹೊರ ಹೋಗುತ್ತಿರಲಿಲ್ಲ. ಕೆಲ ದಿನ ಹೋಟೆಲ್ ಕೋಣೆಯಲ್ಲಿಯೇ ಉಳಿದು, ಪುಸ್ತಕ ಓದುತ್ತಾ, ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ, ಸೂರ್ಯಾಸ್ತ ನೋಡುತ್ತಾ ಕಳೆದಿದುದಾಗಿ ನಟಿ ಹೇಳಿದ್ದಾರೆ. 

ತಮಿಳು, ತೆಲುಗು, ಮಲೆಯಾಳಂ, ಕನ್ನಡ ಹಾಗೂ ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿರುವ ಶ್ರದ್ಧಾ ಕಡೆಯದಾಗಿ ಸೈಂಧವ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. 

ತಮ್ಮ ಚಿತ್ರಗಳ ಆಯ್ಕೆಯನ್ನು ಜತನದಿಂದ ಮಾಡುವ ಯು ಟರ್ನ್ ನಟಿಯ, ಲೆಟರ್ಸ್ ಟು ಮಿ. ಖನ್ನಾ, ಆರ್ಯನ್, ಕಲಿಯುಗಂ, ಗೋಧ್ರಾ ಚಿತ್ರಗಳು ಬಿಡುಗಡೆಯಾಗಲು ಬಾಕಿ ಇವೆ. 

Latest Videos

click me!