ಮದುವೆ ಯಾವಾಗ ಎಂಬ ಪ್ರಶ್ನೆಗೆ ಶ್ರದ್ಧಾ ಕಪೂರ್‌ ಹಿಂಗ್ ಹೇಳಿ ಬಿಡೋದಾ?

Published : Oct 05, 2023, 04:58 PM IST

ಶ್ರದ್ಧಾ ಕಪೂರ್ (Shraddha Kapoor) ಬಾಲಿವುಡ್‌ ಯಂಗ್‌ ನಟಿಯರಲ್ಲಿ ಒಬ್ಬರು. ಆಗಾಗ ಇವರ ಆಫೇರ್‌ ಹಾಗೂ ಮದುವೆ ವಿಷಯಗಳ ರೂಮರ್‌ಗಳು ಕಾಣಿಸಿಕೊಂಡರೂ, ಈವರೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ನಟಿ ಅಭಿಮಾನಿಗಳು ಸಹ ಅವರ ಮದುವೆ ಬಗ್ಗೆ ಕಾತುರರಾಗಿದ್ದಾರೆ ಎಂದರೆ ತಪ್ಪಿಲ್ಲ. ಇತ್ತೀಚಿಗೆ ಶ್ರದ್ಧಾರ ಫ್ಯಾನ್ ಒಬ್ಬರು ಅವರ ಮದುವೆಯ ಬಗ್ಗೆ ಖೇಳಿದಾಗ ನಟಿ ನೀಡಿದ ಉತ್ತರ ಸಖತ್‌ ವೈರಲ್‌ ಆಗಿದೆ . 

PREV
19
ಮದುವೆ ಯಾವಾಗ ಎಂಬ ಪ್ರಶ್ನೆಗೆ ಶ್ರದ್ಧಾ ಕಪೂರ್‌ ಹಿಂಗ್ ಹೇಳಿ ಬಿಡೋದಾ?

ಶ್ರದ್ಧಾ ಕಪೂರ್ ಇತ್ತೀಚೆಗೆ ತನ್ನ ಮದುವೆಯ ಯೋಜನೆಗಳ ಬಗ್ಗೆ  ಅಭಿಮಾನಿ ಕೇಳಿದ ಪ್ರಶ್ನೆಗೆ ನೀಡಿದ ಪ್ರತಿಕ್ರಿಯೆಯೊಂದಿಗೆ ಇಂಟರ್ನೆಟ್‌ನಲ್ಲಿ ಟ್ರೆಂಡ್‌ ಆಗಿದ್ದಾರೆ. 

29

ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ನಟಿ ಒಂದೆರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಗುಲಾಬಿ ಬಣ್ಣದ ಸಣ್ಣ ಉಡುಪನ್ನು ಧರಿಸಿ ಮತ್ತು ಅವರ ಹೊಸ ಕೇಶವಿನ್ಯಾಸವನ್ನು ತೋರಿಸುವುದನ್ನು ಕಾಣಬಹುದು. 

39

ಅವರು ಫೋಟೋಗಳಿಗೆ 'ಬಿಗ್ ಹೆಡ್ = ಬಿಗ್ ಬ್ರೈನ್' ಎಂದು ಶ್ರದ್ಧಾ ಶೀರ್ಷಿಕೆ ನೀಡಿದರು ಮತ್ತು ಅದರೊಂದಿಗೆ ಕೆಲವು ಎಮೋಜಿಗಳನ್ನು ಹಾಕಿದರು. 

49

ಶ್ರದ್ಧಾರ ಫೋಟೋಗಳನ್ನುನೋಡಿದ ತಕ್ಷಣ, ಅಭಿಮಾನಿಗಳು ಲೈಕ್‌ ಮತ್ತು ಸುಂದರವಾದ ಕಾಮೆಂಟ್‌ಗಳೊಂದಿಗೆ ಕಾಮೆಂಟ್ ವಿಭಾಗವನ್ನು ತುಂಬಿದ್ದಾರೆ. 

59

ಆದರೆ, ಬಳಕೆದಾರರೊಬ್ಬರು ಆಕೆಯನ್ನು ‘ಮದುವೆ ಯಾವಾಗ ಮಾಡಿಕೊಳ್ಳುತ್ತೀಯಾ?’ ಎಂದು ಪ್ರಶ್ನಿಸಿದ ಕಾಮೆಂಟ್ ಎಲ್ಲರ ಗಮನ ಸೆಳೆದಿದೆ. ಅದರಲ್ಲಿಯೂ ಈ ಪ್ರಶ್ನೆಗೆ, ಶ್ರದ್ಧಾ ನೀಡಿದ ಉತ್ತರ ಸಖತ್‌ ವೈರಲ್‌ ಆಗಿದೆ.

69

ಮದುವೆ ಬಗ್ಗೆ ಕೇಳಿದ ಅಭಿಮಾನಿಯ ಪ್ರಶ್ನೆಗೆ 'ಪಕ್ಕದ ಮನೆ ಆಂಟಿ ರಿಯಲ್ ಐಡಿಯಿಂದ ಬಾ' ಎಂದು ಶ್ರದ್ಧಾ ಹಾಸ್ಯದ ಪ್ರತಿಕ್ರಿಯೆಯೊಂದಿಗೆ  ಉತ್ತರಿಸಿದ್ದಾರೆ. 

79

ನಟಿಯ ತಮಾಷೆಯ ಉತ್ತರಕ್ಕೆ ಪ್ರತಿಕ್ರಿಯಿಸಿದ ಒಬ್ಬ ಅಭಿಮಾನಿ, 'ಹ್ಯಾಟ್ಸ್ ಆಫ್....ನೀವು ಬುದ್ಧಿವಂತರು' ಎಂದು ಹೇಳಿದರು, ಇನ್ನೊಬ್ಬರು, 'ಇದು ಪರಿಪೂರ್ಣವಾದದ್ದು' ಎಂದು ಬರೆದು ನಗುವ ಎಮೋಜಿಗಳು ಹಂಚಿಕೊಂಡಿದ್ದಾರೆ.

89

ಕೆಲಸದ ವಿಷಯಕ್ಕೆ ಬಂದರೆ ರಣಬೀರ್ ಕಪೂರ್ ಜೊತೆಗಿನ 'ತು ಜೂಥಿ ಮೈನ್ ಮಕ್ಕರ್' ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಶ್ರದ್ಧಾ, ಮುಂದೆ ರಾಜ್‌ಕುಮಾರ್ ರಾವ್ ಜೊತೆ 'ಸ್ತ್ರೀ 2' ನಲ್ಲಿ ನಟಿಸಲಿದ್ದಾರೆ. 

99

ಅಮರ್ ಕೌಶಿಕ್ ಅವರು ನಿರ್ದೇಶಿಸಿದ ಸ್ತ್ರೀ 2 ಚಿತ್ರದಲ್ಲಿ ಅಪರಶಕ್ತಿ ಖುರಾನಾ, ಅಭಿಷೇಕ್ ಬ್ಯಾನರ್ಜಿ ಮತ್ತು ಪಂಕಜ್ ತ್ರಿಪಾಠಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

Read more Photos on
click me!

Recommended Stories