ಜೋ ಜೋನಾಸ್, ಸೋಫಿ ಟರ್ನರ್ ವಿಚ್ಛೇದನಕ್ಕೆ ಪ್ರಿಯಾಂಕಾ ಚೋಪ್ರಾ ಕಾರಣವೇ?

Published : Oct 04, 2023, 05:23 PM IST

ಅಮೇರಿಕನ್ ಗಾಯಕ ಮತ್ತು ಗೀತ ರಚನೆಕಾರ ಜೋ ಜೊನಾಸ್ (Joe Jonas), ಸೋಫಿ ಟರ್ನರ್ (Sophie Turner) ಅವರ ವಿಚ್ಛೇದನದ ಸುದ್ದಿ ಬೆಳಕಿಗೆ ಬಂದಾಗಿನಿಂದಲೂ ಮುಖ್ಯಾಂಶಗಳಲ್ಲಿ ಸುದ್ದಿಯಾಗುತ್ತಿದ್ದಾರೆ. ಅವರ ವಿಚ್ಛೇದನದ ಬಗ್ಗೆ ಹಲವಾರು ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಮೂಲಗಳ ಪ್ರಕಾರ, ವಿವಾದಾತ್ಮಕ ವಿಚ್ಛೇದನಕ್ಕೆ ಪ್ರಿಯಾಂಕಾ ಚೋಪ್ರಾ ಜೋನಾಸ್ಕಾ ರಣವಾಗಿರಬಹುದು ಎಂಬ ಶಾಕಿಂಗ್‌ ವರದಿ ಹೊರಬಿದ್ದಿದೆ

PREV
17
ಜೋ ಜೋನಾಸ್, ಸೋಫಿ ಟರ್ನರ್ ವಿಚ್ಛೇದನಕ್ಕೆ ಪ್ರಿಯಾಂಕಾ ಚೋಪ್ರಾ ಕಾರಣವೇ?

ಇತ್ತೀಚಿನ ವರದಿಗಳು ಜೋ ಅವರ ಸಹೋದರ ನಿಕ್ ಜೋನ್ಸ್ ಮತ್ತು ಅವರ ಪತ್ನಿ ಪ್ರಿಯಾಂಕಾ ಚೋಪ್ರಾ ಹೈ ಪ್ರೊಫೈಲ್ ಬ್ರೇಕಪ್‌ನಲ್ಲಿ ಪಾತ್ರವಹಿಸಿದ್ದಾರೆಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 

27

ಡೈಲಿ ಮೇಲ್ ವರದಿ ಪ್ರಕಾರ, ಜೋನಾಸ್ ಕುಟುಂಬ ಆಗಾಗ್ಗೆ ಸೋಫಿಯನ್ನು ಪ್ರಿಯಾಂಕಾಗೆ ಹೋಲಿಸಿ ಸೋಫಿಗೆ ಗಮನಾರ್ಹ ಒತ್ತಡವನ್ನು (Stress) ಉಂಟು ಮಾಡಿದೆ ಎಂದು ಹೇಳಲಾಗುತ್ತಿದೆ. 

37

ನಿಕ್ ಮತ್ತು ಪ್ರಿಯಾಂಕಾ ತಮ್ಮ ವಯಸ್ಸಿನ ಅಂತರದ ಹೊರತಾಗಿಯೂ ಹೆಚ್ಚು ಸ್ಥಿರವಾದ ಸಂಬಂಧವನ್ನು (Strong Relationship) ಹೊಂದಿದ್ದಾರೆಂದು ಜೋನಾಸ್ ಕುಟುಂಬ ಅಭಿಪ್ರಾಯ ಹೊಂದಿದೆ.

47

ಜೋ ಮತ್ತು ಸೋಫಿ ಇದೇ ರೀತಿಯ ಕೆಮಿಸ್ಟ್ರಿ ಹೊಂದಬೇಕೆಂದು ಅವರು ಬಯಸಿದ್ದರು. ಈ  ಹೋಲಿಕೆಯು ಸೋಫಿಗೆ ಹೆಚ್ಚು ಒತ್ತಡವನ್ನುಂಟುಮಾಡಿತು ಎಂದು ಸೋಫಿಯ ಆಪ್ತ ಸ್ನೇಹಿತರೊಬ್ಬರು ಬಹಿರಂಗಪಡಿಸಿದರು 

57

ವಿಚ್ಛೇದನಕ್ಕೆ (Divorce) ಪ್ರಿಯಾಂಕಾ ಚೋಪ್ರಾಗೂ ನೇರವಾಗಿ ಯಾವುದೇ ಸಂಬಂಧವಿಲ್ಲದಿದ್ದರೂ, ಸೋಫಿಗೆ ತನ್ನ ಬಗ್ಗೆ ಕಡಿಮೆ ವಿಶ್ವಾಸ (Confidence) ಮೂಡಲು ಪ್ರಿಯಾಂಕಾ ಅವರ ಸ್ಟಾರ್‌ಡಮ್ (Stardom) ಕಾರಣ ಎಂದೂ ಹೇಳಲಾಗುತ್ತದೆ.

67

ಈಗ ಈ ಜೋಡಿಯ ವಿಚ್ಛೇದನದಲ್ಲಿ ವಿಶೇಷವಾಗಿ ಮಕ್ಕಳ ಪಾಲನೆ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ವಿವಾದಾಸ್ಪದ ತಿರುವು ಪಡೆದಿದೆ. .

77

ವರದಿಗಳ ಪ್ರಕಾರ ಜೋ ಅವರು ತಮ್ಮ ಹೆಣ್ಣುಮಕ್ಕಳ ಪಾಲನೆಗೆ ಅವಕಾಶ ಕೋರಿದ್ದರು. ಆದರೆ  ಸೋಫಿಯಾ ಅವರು ಜೋ ಜೊನಾಸ್ ತಮ್ಮ ಹೆಣ್ಣುಮಕ್ಕಳನ್ನು  ಹಿಂದಿರುಗಿಸಬೇಕೆಂದು ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದರು.

Read more Photos on
click me!

Recommended Stories