ಇನ್‌ಸ್ಟಾದಲ್ಲಿ ನಂ.1 ಜನಪ್ರಿಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಶ್ರದ್ಧಾ ಕಪೂರ್‌!

First Published | Oct 21, 2024, 10:06 AM IST

ಪ್ರಸಿದ್ಧ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ 9.3 ಕೋಟಿ ಫಾಲೋವರ್‌ಗಳನ್ನು ಹೊಂದಿರುವ ಶ್ರದ್ಧಾ. ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್‌, ದೀಪಿಕಾ ಪಡುಕೋಣೆ ಅವರನ್ನು ಹಿಂದಿಕ್ಕಿ ನಂ.1 ಜನಪ್ರಿಯ ನಟಿ ಸ್ಥಾನಕ್ಕೆ.

ಹೀರೋಗಳಂತೆಯೇ ನಟಿಯರ ನಡುವೆಯೂ ನಂ.1 ಪಟ್ಟಕ್ಕೆ ಆಗಾಗ ಸ್ಪರ್ಧೆ ನಡೆಯುತ್ತಿರುತ್ತದೆ. ಬಾಲಿವುಡ್‌ನಲ್ಲಿ ಈ ನಂಬರ್‌ ರೇಸು ಕೊಂಚ ಜೋರಾಗಿಯೇ ಇರುತ್ತದೆ. 

ಈಗ ಇದೇ ರೇಸಿನಲ್ಲಿ ಶ್ರದ್ಧಾ ಕಪೂರ್‌ ‘ನಾನೇ ನಂಬರ್‌ 1’ ಎನ್ನುತ್ತಿದ್ದಾರೆ. ಈ ಪಟ್ಟದಲ್ಲಿ ಖಾಯಂ ಆಗಿ ಮಿಂಚುತ್ತಿದ್ದ ನಟಿಯರಾದ ಪ್ರಿಯಾಂಕ ಚೋಪ್ರಾ, ದೀಪಿಕಾ ಪಡುಕೋಣೆ, ಆಲಿಯಾ ಭಟ್‌ ಅವರನ್ನೇ ಹಿಂದಿಕ್ಕಿದ್ದಾರೆ.
 

Tap to resize

ಹೇಗೆ ಎನ್ನುತ್ತೀರಾ? ಈಗೀಗ ಜನಪ್ರಿಯತೆ ನಿರ್ಧಾರ ಆಗುವುದು ಎಷ್ಟು ಫಾಲೋವರ್‌ ಹೊಂದಿದ್ದಾರೆ ಎಂಬುದರ ಆಧಾರದ ಮೇಲೆ. ಸದ್ಯ ಶ್ರದ್ಧಾ ಕಪೂರ್‌ ತಮ್ಮ ಇನ್​ಸ್ಟಾಗ್ರಾಮ್‌ನಲ್ಲಿ 93.7 ಮಿಲಿಯನ್‌ ಮಂದಿ ಫಾಲೋವರ್‌ಗಳನ್ನು ಹೊಂದುವ ಮೂಲಕ ನಂ.1 ಜನಪ್ರಿಯ ನಟಿ ಎನಿಸಿಕೊಂಡಿದ್ದಾರೆ. 

ಪ್ರಿಯಾಂಕ ಚೋಪ್ರಾ 92.0 ಮಿಲಿಯನ್, ಆಲಿಯಾ 85.5 ಮಿಲಿಯನ್, ದೀಪಿಕಾ 80.3 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ. ಶ್ರದ್ಧಾ ನಟನೆಯ ಸ್ತ್ರೀ 2   ಚಿತ್ರದ  ಯಶಸ್ಸು  ಫಾಲೋವರ್ಸ್‌ಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ.

ವಿಶ್ವಾದ್ಯಂತ 456 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಕಂಡಿರುವ ಸ್ತ್ರೀ 2 ಚಿತ್ರದ ಯಶಸ್ಸು ನಿಸ್ಸಂದೇಹವಾಗಿ ಅವರ ಫಾಲೋವರ್ಸ್‌ಗಳ ಸಂಖ್ಯೆಯನ್ನು ಹೆಚ್ಚಿಸಿದೆ.
 

ಈ ನಡುವೆ, ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯೂ ಶ್ರದ್ಧಾ. ಸ್ತ್ರೀ 2 ಚಿತ್ರಕ್ಕಾಗಿ ಶ್ರದ್ಧಾ 5 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

Latest Videos

click me!