ಓವಿಯಾ ಲೀಕ್ಡ್ ವಿಡಿಯೋ: ಮುಂದಿನ ಬಾರಿ ಫುಲ್ ವಿಡಿಯೋ ಹಂಚಿಕೊಳ್ತೀನೆಂದ ಕಿರಾತಕ ನಟಿ!

Published : Oct 20, 2024, 04:32 PM ISTUpdated : Jan 12, 2025, 04:26 PM IST

ನಟಿ ಓವಿಯಾ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಕ್ಸ್ ನಲ್ಲಿ ವಿಡಿಯೋದ ಸ್ಕ್ರೀನ್‌ಶಾಟ್‌ಗಳು ಹರಿದಾಡುತ್ತಿವೆ.  ಈ ಬಗ್ಗೆ ಸ್ವತಃ ಓವಿಯಾ ಅವರನ್ನು ಈ ವಿಡಿಯೋ ನಿಮ್ಮದೇ ಎಂಬುದಕ್ಕೆ ಭುಜದ ಮೇಲೆ ಕಾಣಿಸಿಕೊಂಡ ಟ್ಯಾಟೂ ಸಾಕ್ಷಿ ಎಂದು ಹೇಳಿದ್ದಾರೆ. ಇದಕ್ಕೆ ನಟಿ ಓವಿಯಾ ನೀಡಿದ ಪ್ರತಿಕ್ರಯೆ ಮಾತ್ರ ಭಾರಿ ವೈರಲ್ ಆಗಿದೆ.

PREV
16
ಓವಿಯಾ ಲೀಕ್ಡ್ ವಿಡಿಯೋ: ಮುಂದಿನ ಬಾರಿ ಫುಲ್ ವಿಡಿಯೋ ಹಂಚಿಕೊಳ್ತೀನೆಂದ ಕಿರಾತಕ ನಟಿ!

ದಕ್ಷಿಣ ಭಾರತದ ನಟಿ ಓವಿಯಾ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದ ಸ್ಕ್ರೀನ್‌ಶಾಟ್‌ಗಳು ಎಕ್ಸ್ ನಲ್ಲಿ ಹರಿದಾಡುತ್ತಿವೆ. ವಿಡಿಯೋದಲ್ಲಿ ಕಾಣಿಸಿಕೊಳ್ಳುವ ಮಹಿಳೆಯ ಭುಜದ ಮೇಲಿರುವ ಹಚ್ಚೆ (Tattoo) ಓವಿಯಾ ಅವರ ಹಚ್ಚೆಗೆ ಹೋಲುವಂತಿದ್ದು, ಇದು ಓವಿಯಾ ಅವರದ್ದೇ ವಿಡಿಯೋ ಎಂಬ ವದಂತಿಗೆ ಕಾರಣವಾಗಿದೆ.

26

#OviyaLeaked ಎಂಬ ಹ್ಯಾಷ್‌ಟ್ಯಾಗ್ ಎಕ್ಸ್ ನಲ್ಲಿ ಟ್ರೆಂಡಿಂಗ್ ಆಗಿದೆ. ಆದರೆ, ಈ ವದಂತಿಗಳ ನಡುವೆ, ಓವಿಯಾ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಬಂದ ಕಾಮೆಂಟ್‌ಗೆ ನೀಡಿದ ಉತ್ತರ ವೈರಲ್ ಆಗಿದೆ. ಇಲ್ಲಿ ಕೆಟ್ಟದಾಗಿ ಕಾಮೆಂಟ್‌  ಮಾಡುತ್ತಿದ್ದ ನೆಟ್ಟಿಗರೆ ಮುಟ್ಟಿ ನೋಡಿಕೊಳ್ಳುವಂತೆ ಹೇಳಿದ್ದಾರೆ.

36

ಓವಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಪೋಸ್ಟ್ ಮಾಡಿ ವೈರಲ್ ಆಗಿರುವ ವಿಡಿಯೋ ಬಗ್ಗೆ ಮಾತನಾಡಿದ್ದಾರೆ. 'ಅನೇಕರು ವಿಡಿಯೋ ಲಿಂಕ್ ಮತ್ತು ಹೈ ಡೆಫಿನಿಷನ್ ವಿಡಿಯೋ ಕೇಳ್ತಿದ್ದಾರೆ, ನಿಮಗೆ ಅದರ ಅವಶ್ಯಕತೆ ಏನು? ನಿಮ್ಮ ಮನೆಯಲ್ಲೇ ಲೈವ್ ಆಗಿ ನೋಡಬಹುದಲ್ಲವೇ? ಎಂದು ಓವಿಯಾ ಪ್ರಶ್ನಿಸಿದ್ದಾರೆ.

46

ವಿಡಿಯೋ ಬಗ್ಗೆ ಜನರು ಏನೇನೋ ಹೇಳ್ತಿದ್ದಾರಲ್ಲ ಎಂಬ ಪ್ರಶ್ನೆಗೆ, 'ಅವರು ಹೇಳಲಿ ಬಿಡಿ' ಎಂದು ಓವಿಯಾ ಉತ್ತರಿಸಿದ್ದಾರೆ. ವಿಡಿಯೋ ನಿಮ್ಮದೇನಾ ಎಂಬ ಪ್ರಶ್ನೆಗೆ 'ಅದು ಸಸ್ಪೆನ್ಸ್ ಆಗಿರಲಿ' ಎಂದಿದ್ದಾರೆ. ವಿಡಿಯೋದ ಪೂರ್ಣ ಆವೃತ್ತಿ ಹಂಚಿಕೊಳ್ಳಿ ಎಂದು ಕೆಲವರು ಕೇಳಿದ್ದಕ್ಕೆ, 'ಮುಂದಿನ ಬಾರಿ' ಎಂದು ಓವಿಯಾ ಹೇಳಿದ್ದಾರೆ.

56

ಮಲಯಾಳಂ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ತ್ರಿಶೂರ್ ಮೂಲದ ನಟಿ ಓವಿಯಾ ಹೆಲೆನ್. 2007 ರಲ್ಲಿ ಬಿಡುಗಡೆಯಾದ ಪೃಥ್ವಿರಾಜ್ ನಾಯಕತ್ವದ 'ಕಂಗಾರು' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಅವರು ಹಲವಾರು ತಮಿಳು ಚಿತ್ರಗಳಲ್ಲಿ ನಟಿಸಿದರು. ಇನ್ನು ನಟಿ ಓವಿಯಾ ಕನ್ನಡ ಸ್ಟಾರ್ ನಟ ಯಶ್ ಅರೊಂದಿಗೆ 'ಕಿರಾತಕ' ಸಿನಿಮಾದಲ್ಲಿಯೂ ನಟಿಸಿದ್ದಾರೆ.

66

ಬಿಗ್ ಬಾಸ್ ತಮಿಳು ಮೊದಲ ಸೀಸನ್ ಮೂಲಕ ಓವಿಯಾ ಖ್ಯಾತಿ ಪಡೆದರು. ಅನೇಕ ಅಭಿಮಾನಿಗಳನ್ನು ಗಳಿಸಿದರು. ಬಿಗ್ ಬಾಸ್ ನಲ್ಲಿ ಸಹ ಸ್ಪರ್ಧಿ ಆರವ್ ಜೊತೆ ಓವಿಯಾ ಆತ್ಮೀಯರಾಗಿದ್ದರು. ಆರವ್ ಓವಿಯಾ ಅವರಿಂದ ದೂರವಾಗಲು ಪ್ರಾರಂಭಿಸಿದಾಗ, ಓವಿಯಾ ಬಿಗ್ ಬಾಸ್ ಮನೆಯ ಈಜುಕೊಳಕ್ಕೆ ಹಾರಿದ್ದು ವಿವಾದಕ್ಕೆ ಕಾರಣವಾಯಿತು. ನಂತರ, ಓವಿಯಾ ಕಾರ್ಯಕ್ರಮದಿಂದ ಹೊರನಡೆದರು. ಆಗ ಓವಿಯಾ ಅವರಿಗೆ ಅಪಾರ ಅಭಿಮಾನಿ ಬಳಗವಿತ್ತು.

Read more Photos on
click me!

Recommended Stories