ಮೊದಲ ಭೇಟಿಯಲ್ಲೇ ಪ್ರಪೋಸ್‌ ಮಾಡಿ ಮದುವೆಯಾದ ಸೂಪರ್‌ಸ್ಟಾರ್‌ ರಜನಿಕಾಂತ್!

First Published | Feb 26, 2022, 8:37 PM IST

ದಕ್ಷಿಣದ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಮದುವೆಯಾಗಿ 41 ವರ್ಷಗಳಾಗಿವೆ. ಬಾಲಿವುಡ್ ಸೇರಿದಂತೆ ದಕ್ಷಿಣದ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಕೆಲಸ ಮಾಡಿದ ರಜನಿಕಾಂತ್ ಫೆಬ್ರವರಿ 26, 1981 ರಂದು ಲತಾ ರಂಗಾಚಾರಿ ಅವರನ್ನು (Marriage) ವಿವಾಹವಾದರು. ಮದುವೆಯ ನಂತರ ರಜನಿಕಾಂತ್ ಮತ್ತು ಲತಾ ಇಬ್ಬರು ಹೆಣ್ಣುಮಕ್ಕಳಾದ ಐಶ್ವರ್ಯ ಮತ್ತು ಸೌಂದರ್ಯ ಅವರಿಗೆ ತಂದೆಯಾದರು. ಅಂದಹಾಗೆ, ರಜನಿಕಾಂತ್ ಮತ್ತು ಲತಾ ಅವರ ಪ್ರೇಮಕಥೆಯು ಚಲನಚಿತ್ರ ಕಥೆಗಿಂತ ಕಡಿಮೆಯಿಲ್ಲ. 
 

ರಜನಿಕಾಂತ್ ಮೊದಲ ಭೇಟಿಯಲ್ಲೇ ಲತಾಗೆ ಮನಸೋತಿದ್ದರು. 1981ರಲ್ಲಿ ರಜನೀಕಾಂತ್ ಅವರು ‘ತಿಲ್ಲೂ ಮಲ್ಲು’ ಸಿನಿಮಾದ ಚಿತ್ರೀಕರಣದಲ್ಲಿದ್ದಾಗ ನಡೆದ ವಿಚಾರ. ಈ ಚಿತ್ರದ ಚಿತ್ರೀಕರಣದ ವೇಳೆ ರಜನಿಕಾಂತ್ ಕಾಲೇಜು ನಿಯತಕಾಲಿಕದಿಂದ ಸಂದರ್ಶನಕ್ಕೆ ಕೋರಿಕೆ ಬಂದಿತ್ತು.  ಕಾಲೇಜಿನ ಪರವಾಗಿ ಸಂದರ್ಶನಕ್ಕೆ ಹಾಜರಾಗಬೇಕಿದ್ದ ಮಹಿಳೆ ಬೇರೆ ಯಾರೂ ಅಲ್ಲ, ಲತಾ ರಂಗಾಚಾರಿ.

ಸಂದರ್ಶನಕ್ಕೆ ಬಂದಿದ್ದ ಲತಾರನ್ನು ನೋಡಿ ರಜನೀಕಾಂತ್ ಮನಸೋತಿದ್ದರು. ಸಂದರ್ಶನದ ಸಮಯದಲ್ಲಿ, ಇಬ್ಬರೂ ಬೆಂಗಳೂರಿನವರದೇ ಆದ  ಕಾರಣ  ಸಾಕಷ್ಟು ಕಂಫರ್ಟಬಲ್‌ ಆಗಿದ್ದರು. ಸಂದರ್ಶನದ ಕೊನೆಯಲ್ಲಿ ರಜನಿಕಾಂತ್ ಲತಾ ರಂಗಾಚಾರಿಗೆ ಮದುವೆಗೆ ಪ್ರಪೋಸ್‌  ಮಾಡಿದರು.

Tap to resize

ರಜನಿಕಾಂತ್ ಅವರ ಪ್ರಸ್ತಾಪವನ್ನು ಕೇಳಿದ ಲತಾ ಮೊದಲು ಆಶ್ಚರ್ಯಚಕಿತರಾದರು. ಆದರೆ, ಲತಾ ನಂತರ ಮುಗುಳ್ನಕ್ಕು, ಇದಕ್ಕಾಗಿ ತನ್ನ ಪೋಷಕರೊಂದಿಗೆ ಮಾತನಾಡಬೇಕು ಎಂದು ಹೇಳಿದರು. ಪ್ರಸ್ತಾಪಿಸಿದ ನಂತರ, ರಜನಿಕಾಂತ್ ಅವರು ಲತಾ ಅವರ ಪೋಷಕರು ಮದುವೆಗೆ ಒಪ್ಪುತ್ತಾರೆಯೇ ಅಥವಾ ಇಲ್ಲವೇ ಎಂದು ತಿಳಿದಿಲ್ಲ ಎಂದು ಯೋಚಿಸಿದರು. ಆದರೆ, ಅದೃಷ್ಟವಶಾತ್ ಇಬ್ಬರೂ ಪೋಷಕರು ಒಪ್ಪಿದರು. 

ಇದರ ನಂತರ, ರಜನಿಕಾಂತ್ ಮತ್ತು ಲತಾ ಫೆಬ್ರವರಿ 26, 1981 ರಂದು ವಿವಾಹವಾದರು. ರಜನಿಕಾಂತ್ ಮತ್ತು ಲತಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯಳ ಹೆಸರು ಐಶ್ವರ್ಯ, ಕಿರಿಯವಳು ಸೌಂದರ್ಯ.

ದಕ್ಷಿಣದ ಖ್ಯಾತ ನಟ ಧನುಷ್ ಅವರನ್ನು ಐಶ್ವರ್ಯಾ ವಿವಾಹವಾಗಿದ್ದರು. ಆದರೆ, ಈ ವರ್ಷದ ಜನವರಿಯಲ್ಲಿ ಧನುಷ್ ಮತ್ತು ಐಶ್ವರ್ಯಾ ವಿಚ್ಛೇದನ ಪಡೆದರು. ಧನುಷ್ ಅವರು ದಕ್ಷಿಣದ ಸೂಪರ್‌ಸ್ಟಾರ್‌ ಜೊತೆಗೆ ಬಾಲಿವುಡ್ ಚಲನಚಿತ್ರಗಳಾದ ರಾಂಝಾನಾ, ಶಮಿತಾಭ್ ಮತ್ತು ಅತ್ರಾಂಗಿ ರೇಗಳಲ್ಲಿ ಕೆಲಸ ಮಾಡಿದ್ದಾರೆ.

ರಜನಿಕಾಂತ್ ಸೌತ್‌ನ ಸೂಪರ್‌ಸ್ಟಾರ್ ಆಗಿದ್ದು, ಅವರ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸಾಕಷ್ಟು ಗಳಿಸಿವೆ, ಆದರೆ ಅವರ ಚಿತ್ರವು ಪ್ಲೇ ಆಗದಿದ್ದರೆ ಅಥವಾ ಫ್ಲಾಪ್ ಅದಲ್ಲಿ, ಯಾವುದೇ ಹಿಂಜರಿಕೆಯಿಲ್ಲದೆ, ವಿತರಕರ ಹಣವನ್ನು ತಕ್ಷಣವೇ ಹಿಂತಿರುಗಿಸುತ್ತಾರೆ. 
 

ರಜನಿಕಾಂತ್ ಸೂಪರ್ ಸ್ಟಾರ್ ಆಗಿರಬಹುದು ಆದರೆ ನಿಜ ಜೀವನದಲ್ಲಿ ತುಂಬಾ ಸರಳವಾಗಿ ಬದುಕುತ್ತಾರೆ. ರಜನಿಕಾಂತ್ ತಮ್ಮ ಪ್ರತಿಯೊಂದು ಚಿತ್ರ ಬಿಡುಗಡೆಯಾದ ನಂತರ ಹಿಮಾಲಯಕ್ಕೆ ಹೋಗಿ ಅಲ್ಲಿ ಏಕಾಂತದಲ್ಲಿ ಧ್ಯಾನ ಮಾಡುತ್ತಾರೆ.
 

ರಜನಿಕಾಂತ್ ಅವರಿಗೆ ದಕ್ಷಿಣ ಭಾರತದಲ್ಲಿ ದೇವರ ಸ್ಥಾನಮಾನ ಸಿಕ್ಕಿದೆ. ಅವರ ಅನೇಕ ದೇವಾಲಯಗಳನ್ನು ದಕ್ಷಿಣ ಭಾರತದಲ್ಲಿ ನಿರ್ಮಿಸಲಾಗಿದೆ ಮತ್ತು ಅವರು ಬಾಲಿವುಡ್‌ನಲ್ಲೂ ಬಹಳ ಪ್ರಸಿದ್ಧರಾಗಿದ್ದಾರೆ. ಆದರೆ ರಜನಿಕಾಂತ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೊದಲು ಬಸ್ ಕಂಡಕ್ಟರ್ ಆಗಿದ್ದರು.

Rajinikanth

ರಜನಿಕಾಂತ್  ಬಸ್ಸಿನಲ್ಲಿ ಟಿಕೆಟ್ ಕಟಿಂಗ್ ಮಾಡುತ್ತಿದ್ದಾಗ, ಅವರ ಶೈಲಿಯಿಂದ ಪ್ರಭಾವಿತರಾದ ನಿರ್ದೇಶಕರು ಅವರಿಗೆ ಚಲನಚಿತ್ರಗಳಲ್ಲಿ ಅವಕಾಶ ನೀಡಿದರು. ಅಂದಿನಿಂದ ಅವರ ಅದೃಷ್ಟ ಬದಲಾಯಿತು. ರಜನಿಕಾಂತ್ ಸೂಪರ್ ಸ್ಟಾರ್ ಆದರು.

Latest Videos

click me!