ಶಿಲ್ಪಾ ಶೆಟ್ಟಿಯನ್ನು ಮನೆಮುರುಕಿ ಎಂದಿದ್ದ ರಾಜ್ ಕುಂದ್ರಾ ಮೊದಲ ಪತ್ನಿ.. 'ಇದು ಅವಮಾನ..' ನಟಿ ಹೇಳಿದ್ದೇನು?

First Published | Jun 8, 2024, 10:55 AM IST

ಶಿಲ್ಪಾ ಶೆಟ್ಟಿಯನ್ನು ಅವರ ಪತಿ ರಾಜ್ ಕುಂದ್ರಾ ಅವರ ಮಾಜಿ ಪತ್ನಿ ಕವಿತಾ ಅವರ ಮದುವೆಯ ನಂತರ ಮನೆಮುರುಕಿ ಎಂದು ಕರೆದಿದ್ದರು. ಪತ್ನಿ ಬಳಿ ಕ್ಷಮೆ ಕೇಳಿದ ರಾಜ್ ಕುಂದ್ರಾ!

ಶಿಲ್ಪಾ ಶೆಟ್ಟಿ ಕುಂದ್ರಾ ಬಾಲಿವುಡ್‌ನಲ್ಲಿ ಜನಪ್ರಿಯ ಹೆಸರು, ಅವರು ತಮ್ಮ ಫಿಟ್‌ನೆಸ್ ಮತ್ತು ಸೊಗಸಾದ ನೃತ್ಯ ಚಲನೆಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ಸ್ಟಾರ್‌ಡಮ್‌ನಿಂದಾಗಿ, ಅವರ ವೈಯಕ್ತಿಕ ಜೀವನವು ಯಾವಾಗಲೂ ಪ್ರಚಾರದಲ್ಲಿರುತ್ತದೆ.

ಶಿಲ್ಪಾ ಉದ್ಯಮಿ ರಾಜ್ ಕುಂದ್ರಾ ಅವರನ್ನು ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಫೆಬ್ರವರಿ 2009ರಲ್ಲಿ ವಿವಾಹವಾದರು. ನಟಿಯೊಂದಿಗೆ ವಿವಾಹವಾಗುವ ಮೊದಲು, ರಾಜ್ ಅವರು ಉದ್ಯಮಿಯ ಮಗಳು ಕವಿತಾ ಅವರನ್ನು ಮದುವೆಯಾಗಿದ್ದರು. 

Tap to resize

ಶಿಲ್ಪಾ ಅವರನ್ನು ರಾಜ್ ಮದುವೆಯಾದ ನಂತರ, ಅವರ ಮಾಜಿ ಪತ್ನಿ ಕವಿತಾ ನಟಿಯನ್ನು ಮನೆಮುರುಕಿ ಎಂದು ಕರೆದಿದ್ದರು. 'ಅವರಿಬ್ಬರು ಒಟ್ಟಿಗಿರುವ ಫೋಟೋ ನೋಡಿದಾಗ ಅವಳು ನನ್ನ ಗಂಡನೊಂದಿಗೆ ಇದ್ದಾಳೆ, ಅವಳು ನನ್ನ ಜೀವನವನ್ನು ನಡೆಸುತ್ತಿದ್ದಾಳೆ ಎಂದು ನನಗನಿಸುತ್ತದೆ' ಎಂದಿದ್ದರು.
 

'ನಾನು ನಮ್ಮ ವೈವಾಹಿಕ ಜೀವನ ಕೂಡಿಸಲು ಪ್ರಯತ್ನಿಸುತ್ತಿರುವಾಗ ಅವನು ನನಗಿಂತ ಉತ್ತಮ, ಬುದ್ಧಿವಂತ ಮತ್ತು ಪ್ರಸಿದ್ಧ ವ್ಯಕ್ತಿಯನ್ನು ಕಂಡುಕೊಂಡಿದ್ದರಿಂದ ವಿಚ್ಚೇದನಕ್ಕಾಗಿ ಪೀಡಿಸುತ್ತಿದ್ದಾನೆ' ಎಂದು ಕವಿತಾ ಗಂಡನ ಬಗ್ಗೆ ದೂರಿದ್ದರು. 

ರಾಜ್ ಕುಂದ್ರಾ ಅವರ ಮಾಜಿ ಪತ್ನಿಯಿಂದ ಹೋಮ್ ಬ್ರೇಕರ್ ಎಂದು ಕರೆದಿದ್ದಕ್ಕೆ ಶಿಲ್ಪಾ ಶೆಟ್ಟಿ ಪ್ರತಿಕ್ರಿಯಿಸಿದ್ದರು, 'ಈ ಮನೆಮುರುಕಿ ಪದ ಅವಮಾನ ತಂದಿದೆ..'

ರಾಜ್ ವಿಚ್ಛೇದನ ಪಡೆಯುವವರೆಗೂ ಸ್ನೇಹಿತರಿಗಿಂತ ಹೆಚ್ಚು ಇರಲು ಸಾಧ್ಯವಿಲ್ಲ ಎಂದು ರಾಜ್‌ಗೆ ಕಟ್ಟುನಿಟ್ಟಾಗಿ ಹೇಳಿದ್ದೆ ಎಂದು ಶಿಲ್ಪಾ ಹೇಳಿಕೊಂಡಿದ್ದಾರೆ. 

ಕವಿತಾರಿಂದ ರಾಜ್ ವಿಚ್ಛೇದನದಲ್ಲಿ ತಾನು ಯಾವುದೇ ಪಾತ್ರವನ್ನು ವಹಿಸಲಿಲ್ಲ ಎಂದಿದ್ದ ಶಿಲ್ಪಾ, 'ನಾನು ಮನೆ ಹಾಳು ಮಾಡುವವಳಲ್ಲ. ಅವರು ವಿಚ್ಛೇದನ ಪಡೆಯುವವರೆಗೂ ನಮ್ಮ ಸಂಬಂಧವು ಸ್ನೇಹಕ್ಕಿಂತ ಮುಂದೆ ಹೋಗುವುದಿಲ್ಲ ಎಂದು ನಾನು ಅವನಿಗೆ ಸ್ಪಷ್ಟಪಡಿಸಿದ್ದೆ, ಮನೆಮುರುಕಿ ಎಂಬ ಹೇಳಿಕೆ ನನ್ನ ಹೆತ್ತವರಿಗೂ ಅವಮಾನ ತಂದಿದೆ' ಎಂದಿದ್ದರು. 

ಇನ್ನೊಂದು ಸಂದರ್ಶನದಲ್ಲಿ ಮಾತನಾಡಿದ್ದ ಶಿಲ್ಪಾ, 'ನಾನು ನಿಜವಾಗಿಯೂ ಅಸಮಾಧಾನಗೊಂಡಿದ್ದೇನೆ. ಅವಳು ರಾಜ್‌ನನ್ನು ಬಿಟ್ಟು ಹೋಗುವಾಗ ನನಗವನ ಪರಿಚಯವೂ ಇರಲಿಲ್ಲ, ಅವನು ವಿಚ್ಛೇದನ ಪಡೆದ 4 ತಿಂಗಳ ಬಳಿಕ ನನಗವನು ಪರಿಚಯವಾದ' ಎಂದಿದ್ದರು. 

ಮೇಲಿನ ಎರಡೂ ಹೇಳಿಕೆಗಳೂ ಪರಸ್ಪರ ವಿರುದ್ಧವಾಗಿವೆ. ಒಮ್ಮೆ ಡೈವೋರ್ಸ್ ಸಿಗೋವರೆಗೂ ಫ್ರೆಂಡ್ಸ್ ಎಂದಿದ್ದ ಶಿಲ್ಪಾ, ಮತ್ತೊಮ್ಮೆ ಡೈವೋರ್ಸ್ ಸಿಕ್ಕ ಮೇಲೆಯೇ ಪರಿಚಯವಾದದ್ದು ಎಂದಿದ್ದರು. 

ಶಿಲ್ಪಾ ಮೇಲಿನ ಕವಿತಾ ಆರೋಪದಿಂದ ರಾಜ್ ಕುಂದ್ರಾ ಕೂಡ ಆಘಾತಕ್ಕೊಳಗಾದರು, ಅದಕ್ಕಾಗಿ ಅವರು ಶಿಲ್ಪಾ ಮತ್ತು ಅವರ ಕುಟುಂಬಕ್ಕೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದರು. 

ಕವಿತಾ ತನಗೆ ವಿವಾಹದಲ್ಲಿ ಮೋಸ ಮಾಡಿದ್ದಾಳೆ, ಆಕೆಯ ಸೋದರಮಾವ ಸ್ವಲ್ಪ ದಿನ ನಮ್ಮ ಮನೆಯಲ್ಲಿ ವಾಸಿಸಲು ಬಂದಾಗ ಅವರಿಬ್ಬರೂ ಸಂಬಂಧ ಹೊಂದಿದ್ದರು, ನಾನು ಅವರ ಸಂದೇಶಗಳನ್ನು ಕೂಡಾ ನೋಡಿದ್ದೇನೆ ಎಂದು ರಾಜ್ ಆರೋಪಿಸಿದ್ದರು. 

ಇಂದು, ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಮದುವೆಯಾದ 15 ವರ್ಷಗಳ ನಂತರವೂ ಒಬ್ಬರನ್ನೊಬ್ಬರು ಬಿಟ್ಟುಕೊಡದೇ ಬದುಕುತ್ತಿದ್ದಾರೆ. ಮತ್ತು ಅವರಿಗೆ ವಿಯಾನ್ ಮತ್ತು ಸಮೀಶಾ ಎಂಬ ಇಬ್ಬರು ಮಕ್ಕಳಿದ್ದಾರೆ. 

Latest Videos

click me!