ಸೈಫ್‌ ಆಲಿ ಖಾನ್‌ ಹರೆಯದ ರಹಸ್ಯ, ಪ್ರೇಮ ಪುರಾಣ ಬಹಿರಂಗಪಡಿಸಿದ ತಾಯಿ ಶರ್ಮಿಳಾ ಟ್ಯಾಗೋರ್‌

Published : Dec 26, 2023, 03:41 PM IST

ಫೇಮಸ್‌ ಸೆಲಬ್ರೆಟಿ ಟಾಕ್‌ ಶೋ ಕಾಫಿ ವಿತ್ ಕರಣ್ 8 (Koffee With Karan 8)  ನ ಮುಂಬರುವ ಸಂಚಿಕೆಯಲ್ಲಿ, ಸೈಫ್ ಅಲಿ ಖಾನ್ (Saif Ali Khan)  ಮತ್ತು ಅವರ ತಾಯಿ ಶರ್ಮಿಳಾ ಟ್ಯಾಗೋರ್ (Sharmila Tagore) ಅವರು ಕಾಣಿಸಿಕೊಳ್ಳಲಿದ್ದಾರೆ. ಇದರ ಪ್ರೋಮೋ ಬಿಡುಗಡೆಯಾಗಿದ್ದು ಶರ್ಮಿಳಾ ಅವರು ತಮ್ಮ ಮಗ ಸೈಫ್‌ ಅವರ ಹರೆಯದ ರಹಸ್ಯಗಳು ಮತ್ತು ಪ್ರೇಮ ವ್ಯವಹಾರಗಳ ಬಗ್ಗೆ ಕುತೂಹಲಕಾರಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. 

PREV
16
ಸೈಫ್‌ ಆಲಿ ಖಾನ್‌  ಹರೆಯದ ರಹಸ್ಯ, ಪ್ರೇಮ ಪುರಾಣ ಬಹಿರಂಗಪಡಿಸಿದ ತಾಯಿ ಶರ್ಮಿಳಾ ಟ್ಯಾಗೋರ್‌

ಕರಣ್ ಜೋಹರ್ ಆಯೋಜಿಸುವ ಜನಪ್ರಿಯ ಟಾಕ್ ಶೋ ಕಾಪೀ ವಿಥ್‌ ಕರಣ್‌ನಲ್ಲಿ ಸೈಫ್ ಅಲಿ ಖಾನ್ ಮತ್ತು ಶರ್ಮಿಳಾ ಟ್ಯಾಗೋರ್ ಅವರು ಕಾಣಿಸಿಕೊಳ್ಳಲಿದ್ದಾರೆ.

26

ತಾಯಿ-ಮಗ ಜೋಡಿಯು ತಮ್ಮ ಜೀವನದ ವಿವಿಧ ಅಂಶಗಳ ಮೇಲೆ ಬೆಳಕು ಚೆಲ್ಲುವ ಜೊತೆಗೆ ತಮಾಷೆ ಮತ್ತು ಪ್ರಾಮಾಣಿಕತೆಯ ಮಿಶ್ರಣಗಳ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

36

ಕಾರ್ಯಕ್ರಮದ ತಯಾರಕರು ಬಿಡುಗಡೆ ಮಾಡಿರುವ ಪ್ರೋಮೋ ತಾಯಿ ಮಗನ ಮುಂದಿನ ಸಂಚಿಕೆ ಸಖತ್‌ ಮನೋರಂಜನೆ ನೀಡುವ ಭರವಸೆಯನ್ನು ನೀಡುತ್ತದೆ. 

46

ಹೆಚ್ಚಿನ ಅಧ್ಯಯನಕ್ಕಾಗಿ ವಿಶ್ವವಿದ್ಯಾನಿಲಯವನ್ನು ತ್ಯಜಿಸುವ ಸೈಫ್‌ನ ನಿರ್ಧಾರದಿಂದ ಹಿಡಿದು ಶರ್ಮಿಳಾ ಅವರು ಆಗಾಗ್ಗೆ ತನ್ನ ಮಗನನ್ನು ಗದರುವವರೆಗೆ ಹಲವು ವಿಷಯಗಳ ಬಹಿರಂಗಪಡಿಸುವಿಕೆಗಳು ಹಗುರವಾದ ಹಾಸ್ಯದಿಂದ ಕೂಡಿವೆ

56

ಶರ್ಮಿಳಾ ಮಗನ ಹದಿಹರೆಯದ ದಿನಗಳ ಬಗ್ಗೆ ಅನಾವರಣಗೊಳಿಸುವಾಗ ಸೈಫ್‌ ಅವರಲ್ಲಿ ಅಸಮಾಧಾನ ಸ್ಪಷ್ಟವಾಗಿ ಗೋಚರವಾಗುವುದು ಪ್ರೋಮೋದ ಒಂದು ಮುಖ್ಯ ಅಂಶವಾಗಿದೆ.
 

66

ಕಾಫಿ ವಿತ್ ಕರಣ್ 8 ಮುಂದಿನ ಸಂಚಿಕೆಯಲ್ಲಿ  ಸೈಫ್ ಅಲಿ ಖಾನ್ ಮತ್ತು ಶರ್ಮಿಳಾ ಟ್ಯಾಗೋರ್ ಅವರ ಪ್ರಾಮಾಣಿಕ ಭಾಗವನ್ನು ವೀಕ್ಷಿಸಲು ಉತ್ಸುಕರಾಗಿರುವ ಅಭಿಮಾನಿಗಳ ನಿರೀಕ್ಷೆಯು ಹೆಚ್ಚಾಗುತ್ತಿದೆ.  

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories