ಓಪನ್ ಹೇರು ಬಿಟ್ಕೊಂಡು ಕಿಲ್ಲಿಂಗ್ ಲುಕ್ ಕೊಟ್ಟ ಕೃತಿ ಸನೋನ್: ಜೀವ ಝಲ್ ಅಂತದೆ ಎಂದ ಫ್ಯಾನ್ಸ್!

First Published | Dec 25, 2023, 11:22 AM IST

ಬಾಲಿವುಡ್​ನ ಬಹುಬೇಡಿಕೆಯ ತಾರೆಗಳಲ್ಲಿ ಕೃತಿ ಸನೋನ್ ಒಬ್ಬರು. ಸದ್ಯ ದಕ್ಷಿಣ ಚಿತ್ರರಂಗಕ್ಕೂ ಪರಿಚಯವಾಗಿದ್ದಾರೆ. ಸಿನಿಮಾಗಳ ಜೊತೆ ಜೊತೆಗೆ ಸೌಂದರ್ಯದ ಮೂಲಕವೂ ಗಮನ ಸೆಳೆಯುವ ಕೃತಿ ಸನೋನ್​​​ ಆಗಾಗ್ಗೆ ಹೊಸ ಆಕರ್ಷಕ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. 

ಇದೀಗ ಸ್ಟೈಲಿಶ್​​ ಸೀರೆಯುಟ್ಟು ಕ್ಯಾಮರಾ ಎದುರು ಬಂದು ಕಿಲ್ಲರ್ ಲುಕ್​ ಕೊಟ್ಟ ಕೃತಿ ಸೌಂದರ್ಯಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಸಿಂಪಲ್ ಸ್ಟೈಲಿಶ್​ ಎನ್ನುವಂತಹ ಸೀರೆಯಲ್ಲಿ ಮಾರ್ಡನ್​ ಲುಕ್​​ ಕೊಟ್ಟಿದ್ದಾರೆ. 

ಅಭಿನೇತ್ರಿಯ ಅಂದ ಸಾರುವ ಹೊಸ ಚಿತ್ರಗಳಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟಿಯ ಸೌಂದರ್ಯವನ್ನು ನೆಟ್ಟಿಗರು ಗುಣಗಾನ ಮಾಡುತ್ತಿದ್ದು, ಜೀವ ಜಲ್ ಅಂತದೆ ಎಂದು ಕಾಮೆಂಟ್ ಮಾಡಿದ್ದಾರೆ.

Tap to resize

2014ರಲ್ಲಿ ನೆನೊಕ್ಕಡಿನ್​​ ಮತ್ತು ಹೀರೋಪಂತಿ ಮೂಲಕ ಸಿನಿಮಾ ವೃತ್ತಿಜೀವನ ಆರಂಭಿಸಿದ ಕೃತಿ ಸನೋನ್​ ಬರೇಲಿ ಕಿ ಬರ್ಫಿ, ಲುಕಾ ಚುಪ್ಪಿ, ದಿಲ್​ವಾಲೆ, ಹೌಸ್​ಫುಲ್​​ 4, ಮಿಮಿ, ಬಚ್ಚನ್​ ಪಾಂಡೆ, ಭೇಡಿಯಾ ಸೇರಿ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕೊನೆಯದಾಗಿ ಆದಿಪುರುಷ್ ಮತ್ತು ಗಣ್​ಪತ್​ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. 

ನಟಿಯ ಅಭಿನಯ ಕೌಶಲ್ಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ 'ಮಿಮಿ' ಸಿನಿಮಾಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡರು. ಪ್ರತೀ ಸಿನಿಮಾದಲ್ಲೂ ವಿಭಿನ್ನವಾಗಿ ಕಾಣಿಸಿಕೊಳ್ಳುವ ಅಭಿನೇತ್ರಿಯ ಮುಂದಿನ ಚಿತ್ರಗಳ ಮೇಲೂ ಸಾಕಷ್ಟು ಕುತೂಹಲಗಳಿವೆ.  

ದಿಲ್ವಾಲೆ, ಬರೇಲಿ ಕಿ ಬರ್ಫಿ, ಲುಕಾ ಚುಪ್ಪಿ ಮತ್ತು ಪಾನಿಪತ್ ಚಿತ್ರಗಳಲ್ಲಿ ನಟಿ ಕೃತಿ ಸನನ್ ಕಾಣಿಸಿಕೊಂಡಿದ್ದಾರೆ. ಮನಿ ಮಿಂಟ್ ಪ್ರಕಾರ ನಟಿ ಕೃತಿ ಸನನ್ ಆಸ್ತಿ 80 ಕೋಟಿ ರೂ ಇದ್ದು, ಮಾಸಿಕ ಗಳಿಕೆ 30 ಲಕ್ಷ ರೂ ಹಾಗೂ ವಾರ್ಷಿಕ ಆದಾಯ 4 ಕೋಟಿ ರೂ ಇದೆ.

ಕೃತಿ ಸನನ್ ಬಾಲಿವುಡ್ ಇಂಡಸ್ಟ್ರಿಯಲ್ಲಿ ಟಾಪ್ ನಟಿಯಾಗಿ ಬೆಳೆದಿದ್ದಾರೆ..ನಟನೆಯ ಜೊತೆಗೆ ಕೃತಿ ಸನನ್ ಬ್ರಾಂಡ್ ಎಂಡಾರ್ಸ್​ಮೆಂಟ್​ಗಳು ಮತ್ತು ಅನೇಕ ಟಿವಿ ಶೋಗಳು ಮತ್ತು ಪ್ರಶಸ್ತಿ ಕಾರ್ಯಕ್ರಮಗಳ ಮೂಲಕ ಈ ಹಣವನ್ನು ಗಳಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ ಕೃತಿ ಒಂದು ಚಿತ್ರಕ್ಕೆ ಸುಮಾರು 2 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಾರಂತೆ.. ಸಿನಿಮಾಗಳ ಹೊರತಾಗಿ, ಕೃತಿ ಜಾಹೀರಾತಿನ ಮೂಲಕ ಸಾಕಷ್ಟು ಹಣವನ್ನು ಗಳಿಸುತ್ತಾರೆ. 

Latest Videos

click me!