ಜಾಗತಿಕ ಐಕಾನ್ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಸಹ-ನಟರೊಂದಿಗೆ ಡೇಟಿಂಗ್ ಮಾಡಿದ್ದಾಗಿ ಒಪ್ಪಿಕೊಂಡಿರುವ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಶಾಹಿದ್ ಕಪೂರ್, ಶಾರುಖ್ ಖಾನ್ ಅವರಂತಹ ನಟರ ಹೆಸರನ್ನು ಪ್ರಸ್ತಾಪಿಸಿದ್ದು, ಇದರ ಜೊತೆಗೆ, ಅವರು ಬಾಲಿವುಡ್ ತೊರೆವ ಬಗ್ಗೆ ಹೇಳಿದ್ದೇನು?
ಜಾಗತಿಕ ಐಕಾನ್, ಪ್ರಿಯಾಂಕಾ ಚೋಪ್ರಾ (Priyanka Chopra) ಒಂದಿಲ್ಲೊಂದು ವಿಷಯಗಳಿಂದ ಸದಾ ಸುದ್ದಿಯಲ್ಲಿ ಇರುವಂಥವರು. ಹಲವು ನಟ-ನಟಿಯರಂತೆ ಪ್ರಿಯಾಂಕಾ ಚೋಪ್ರಾ ನಡೆದು ಬಂದ ಹಾದಿಯೂ ಕಠಿಣವಾದದ್ದೇ. ತಮ್ಮ ಬಣ್ಣ, ಮೂಗಿನಿಂದಾಗಿ ಇದಾಗಲೇ ಹಲವಾರು ಬಾರಿ ಬಾಡಿ ಷೇಮಿಂಗ್ಗೆ ಒಳಗಾಗಿ ಕೊನೆಗೆ ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗಿದ್ದೂ ಇದೆ.
26
ಬಾಲಿವುಡ್ಗೆ ಗುಡ್ಬೈ
ಇದೀಗ ಅವರು ಬಾಲಿವುಡ್ ಬಿಡಲಿದ್ದಾರೆ ಎನ್ನುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಇದರ ನಡುವೆಯೇ, ಈ ಹಿಂದೆ ನಟಿ ಖುದ್ದು ತಾವು ಹಲವರ ಜೊತೆ ಡೇಟಿಂಗ್ ಮಾಡಿರುವುದಾಗಿ ಒಪ್ಪಿಕೊಂಡಿರುವ ವಿಡಿಯೋಗಳೂ ವೈರಲ್ ಆಗುತ್ತಿವೆ. ನಿಕ್ ಜೋನಸ್ ಅವರನ್ನು ಮದುವೆಯಾಗಿ, ಬಾಡಿಗೆ ತಾಯ್ತನದ ಮೂಲಕ ಮಾಲ್ತಿ ಮೇರಿ (Malti Marie) ಎಂಬ ಮಗಳನ್ನು ಪಡೆದಿರುವ ನಟಿ ಪ್ರಿಯಾಂಕಾ, ಡೇಟಿಂಗ್ ಕುರಿತು ಮಾತನಾಡಿರುವ ವಿಡಿಯೋ ಇದಾಗಿದೆ.
36
ಹಲವರ ಜೊತೆ ನಟನೆ
ಇದರಲ್ಲಿ ನಟಿ, ನಿಕ್ ಜೋನಾಸ್ ಅವರೊಂದಿಗೆ ಮದುವೆಯಾಗಿರುವ ಮೊದಲು ತಾವು ಡೇಟಿಂಗ್ ಮಾಡಿದ ನಟರ ಬಗ್ಗೆ ಮಾತನಾಡಿದ್ದಾರೆ. ಅಷ್ಟಕ್ಕೂ ಇವರ ಹೆಸರು ಶಾರುಖ್ ಖಾನ್ (Shah rukh Khan) ಅವರ ಹೆಸರನ್ನು ಮೊದಲಿಗೆ ತೆಗೆದುಕೊಂಡಿರುವ ನಟಿ, ಆ ಬಳಿಕ ಶಾಹಿದ್ ಕಪೂರ್, ಹರ್ಮನ್ ಬವೇಜಾ ಅವರಂತಹ ಅನೇಕ ಬಾಲಿವುಡ್ ನಟರೊಂದಿಗೆ ಡೇಟಿಂಗ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ದೇಸಿಗರ್ಲ್ ಬಾಲಿವುಡ್ನಲ್ಲಿ ಅನೇಕ ಸೂಪರ್ ಸ್ಟಾರ್ಗಳ ಜೊತೆ ನಟಿಸಿದ್ದಾರೆ. ಪ್ರಿಯಾಂಕಾ ಅವರ ಹೆಸರು ನಟರಾದ ಶಾಹಿದ್ ಕಪೂರ್ ಮತ್ತು ಹರ್ಮಾನ್ ಬಾವ್ಜೆ ಅವರೊಂದಿಗೆ ತಳುಕಿ ಹಾಕಿಕೊಂಡಿತ್ತು. ಹರ್ಮಾನ್ ಬಾವ್ಜಾ ಮತ್ತು ಪ್ರಿಯಾಂಕಾ ಮದುವೆಯಾಗಲು ಕೂಡ ಮುಂದಾಗಿದ್ದರು ಎನ್ನುವ ಸುದ್ದಿ ಕೂಡ ಹರಡಿತ್ತು. ಅಂದಹಾಗೆ, ಶಾಹಿದ್ ಕಪೂರ್ ಜೊತೆ ಕೂಡ ಮದುವೆಯ ಸುದ್ದಿ ಕೇಳಿಬಂದಿತ್ತು. ಆದರೆ ನಟನ ಜೊತೆ ಬ್ರೇಕಪ್ ಬಳಿಕ ಪ್ರಿಯಾಂಕಾ ನಿಕ್ ಜೋನಸ್ ಜೊತೆ ಡೇಟ್ ಮಾಡಲು ಶುರು ಮಾಡಿದ್ದರು.
ಇದರಲ್ಲಿ ನಟಿ, ತಮ್ಮ ಬಾಯ್ಫ್ರೆಂಡ್ಸ್ (Boyfriends) ಎಲ್ಲಾ ಒಳ್ಳೆಯವರು ಮತ್ತು ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದರು. ನಾನು ನಟಿಸಿದ ನಟರ ಜೊತೆ ಆಗಾಗ ಡೇಟ್ ಮಾಡುತ್ತಿದ್ದೆ ಎಂದು ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ. ನಾನು ಯಾವಾಗಲೂ ನನ್ನ ಸೆಟ್‌ನಲ್ಲಿ ಭೇಟಿಯಾದ ಸಹ ನಟರೊಂದಿಗೆ ಡೇಟಿಂಗ್ ಮಾಡಿದ್ದೇನೆ. ಸಂಬಂಧಕ್ಕೆ ಬೆಲೆ ಕೊಡುತ್ತೇನೆ. ಪ್ರತಿಯೊಂದು ಸಂಬಂಧವು ಹೇಗಿರಬೇಕು ಎಂಬ ಕಲ್ಪನೆಯನ್ನು ನಾನು ಹೊಂದಿದ್ದೇನೆ. ನನ್ನ ಜೀವನದಲ್ಲಿ ಬಂದ ಜನರ ಬಗ್ಗೆ ಹೇಗೆ ಸಂಬಂಧ ಹೊಂದಬೇಕು, ಡೇಟಿಂಗ್ ಯಾವ ವ್ಯಕ್ತಿಯ ಜೊತೆ ಮಾಡಬೇಕು ಎಂಬ ತಿಳಿವಳಿಕೆ ನನಗಿತ್ತು. ಆದ್ದರಿಂದ ಉತ್ತಮ ವ್ಯಕ್ತಿಗಳೊಂದಿಗೆ ಡೇಟಿಂಗ್ ಮಾಡಿದ್ದೇನೆ ಎಂದು ನಟಿ ಪ್ರಿಯಾಂಕಾ ಹೇಳಿದ್ದಾರೆ. ನನ್ನ ಎಲ್ಲಾ ಡೇಟಿಂಗ್ ಕೂಡ ಅದ್ಭುತವಾಗಿವೆ. ಆದರೆ ಅವರೊಂದಿಗಿನ ಸಂಬಂಧವು ಕೆಟ್ಟದಾಗಿ ಕೊನೆಗೊಂಡಿತು. ನಾನು ಈಗಲೂ ಕೂಡ ಮಾಜಿ ಗೆಳೆಯರನ್ನು ಇಷ್ಟಪಡುತ್ತೇನೆ ಎಂದಿದ್ದಾರೆ.
56
ಬಾಲಿವುಡ್ಗೆ ಗುಡ್ಬೈ?
ಇದೇ ವೇಳೆ ಬಾಲಿವುಡ್ಗೆ ಗುಡ್ಬೈ ಹೇಳ್ತಿದ್ದಾರೆ ನಟಿ ಎನ್ನುವ ಸದ್ದು ಸಕತ್ ಸದ್ದು ಮಾಡುತ್ತಿದೆ. ಈ ಬಗ್ಗೆ ಮಾತನಾಡಿರುವ ನಟಿ, ಸದ್ಯ ಹಾಲಿವುಡ್ನಲ್ಲಿ ಬಿಜಿಯಾಗಿದ್ದೇನೆ. ಹಾಲಿವುಡ್ ಚಿತ್ರ 'ದಿ ಬ್ಲಫ್' ಚಿತ್ರ ಬಿಡುಗಡೆಯಾಗಲಿದೆ.
66
ಬಾಲಿವುಡ್ ತೊರೆಯೋ ಇಷ್ಟವಿರಲಿಲ್ಲ
ಬಾಲಿವುಡ್‌ನಿಂದ ದೂರ ಸರಿಯುವ ಉದ್ದೇಶವನ್ನು ಎಂದಿಗೂ ಹೊಂದಿರಲಿಲ್ಲ. ಆದರೆ, ಹಿಂದಿ ಸಿನಿಮಾದಲ್ಲಿ ಕೆಲಸ ಮಾಡುವಾಗ, ಕೆಲವೊಂದು ಸೀಮಿತವಾಗಿರುತ್ತದೆ. ಆದರೆ ಹಾಲಿವುಡ್ನಲ್ಲಿ ಹಾಗಿಲ್ಲ. ಇದರ ಹೊರತಾಗಿಯೂ ಬಾಲಿವುಡ್ ತೊರೆಯುವುದು ಎಂದಿಗೂ ತಮ್ಮ ಮೂಲ ಯೋಜನೆಯ ಭಾಗವಾಗಿರಲಿಲ್ಲ ಎಂದಿರುವ ನಟಿ, ಸದ್ಯ ಬಾಲಿವುಡ್ನಲ್ಲಿ ನಟಿಸುವ ಸಾಧ್ಯತೆಯ ಬಗ್ಗೆ ಅಲ್ಲಗಳೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.