ಗೌರಿ ಖಾನ್‌ ಶೇರ್‌ ಮಾಡಿರುವ ಮಕ್ಕಳ ಕ್ಯೂಟ್‌ ಫೋಟೋ ವೈರಲ್‌!

Suvarna News   | Asianet News
Published : Sep 30, 2021, 04:48 PM IST

ಶಾರುಖ್ ಖಾನ್ (Shahrukh Khan) ಅವರ ಪತ್ನಿ ಗೌರಿ ಖಾನ್ (Gauri Khan)ತಮ್ಮ ಕೆಲಸದ ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ (Social Media) ತುಂಬಾ ಸಕ್ರಿಯರಾಗಿದ್ದಾರೆ. ಅವರು ಆಗಾಗ ತನ್ನ ಕೆಲಸಕ್ಕೆ ಸಂಬಂಧಿಸಿದ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಇದಲ್ಲದೇ, ಆಕೆ ತನ್ನ ಮಕ್ಕಳ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ, ಗೌರಿ ತನ್ನ ಇಬ್ಬರು ಮಕ್ಕಳಾದ ಆರ್ಯನ್ ಖಾನ್ ಮತ್ತು ಅಬ್ರಾಮ್ ಖಾನ್ ಅವರ ಮುದ್ದಾದ  ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಗೌರಿ ಶೇರ್‌ ಮಾಡಿರುವ ಫೋಟೋ ಸಕ್ಕತ್‌ ವೈರಲ್‌ ಆಗಿದೆ.

PREV
17
ಗೌರಿ ಖಾನ್‌ ಶೇರ್‌ ಮಾಡಿರುವ ಮಕ್ಕಳ ಕ್ಯೂಟ್‌ ಫೋಟೋ ವೈರಲ್‌!

ಫೋಟೋದಲ್ಲಿ ಶಾರುಖ್‌ ಗೌರಿ ಕಿರಿಯ ಮಗ ಅಬ್ರಾಮ್ ಅಣ್ಣ ಅರ್ಯನ್‌ ಮಡಿಲಲ್ಲಿ ಕುಳಿತು ವೀಡಿಯೋ ಗೇಮ್ ನೋಡುತ್ತಿದ್ದಾನೆ. 'ಬಾಯ್ಸ್ ನೈಟ್ ಔಟ್' ಎಂದು ಗೌರಿ ಫೋಟೋಗೆ ಕ್ಯಾಪ್ಷನ್‌ ನೀಡಿದ್ದಾರೆ. ಗೌರಿ ಹಂಚಿಕೊಂಡ ಫೋಟೋವನ್ನು ಅಭಿಮಾನಿಗಳ ಜೊತೆಗೆ ಸೆಲೆಬ್ರಿಟಿಗಳು ಸಹ ಬಹಳ ಇಷ್ಟ ಪಟ್ಟಿದ್ದಾರೆ.

 

27

ಅಬ್ರಾಮ್ ತನ್ನ ಅಣ್ಣ ಆರ್ಯನ್  ಮಡಿಲಲ್ಲಿ ಕುಳಿತಿದ್ದು, ವೀಡಿಯೋ ಗೇಮ್ ಅನ್ನು ನೋಡುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದು. ಈ ಸಮಯದಲ್ಲಿ, ಇಬ್ಬರ ಗಮನವೂ ಕೇವಲ ವಿಡಿಯೋ ಗೇಮ್ ಮೇಲೆ ಮಾತ್ರ ಇದೆ. ಈ ಪೋಸ್ಟ್ ಗೆ ಅಭಿಮಾನಿಗಳು ನಿರಂತರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. 
 

37

ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಫಿಲ್ಮ್‌ ಮೇಕಿಂಗ್‌ ಕೋರ್ಸ್‌ ಮಾಡಿದ್ದಾನೆ.  ಆರ್ಯನ್  ಲಂಡನ್‌ನ ಸೆವೆನೋಕ್ಸ್ ಶಾಲೆಯಲ್ಲಿ ಓದಿದ್ದಾನೆ. ಇದರ ನಂತರ, ಅವರು ಲಾಸ್ ಏಂಜಲೀಸ್‌ನ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಚಲನಚಿತ್ರ ನಿರ್ಮಾಣವನ್ನು ಅಧ್ಯಯನ ಮಾಡಿದರು.

47

ವರದಿಗಳ ಪ್ರಕಾರ ಆರ್ಯನ್ ನಟನೆಯ ಬದಲು ಚಲನಚಿತ್ರ ತಯಾರಿಕೆಯಲ್ಲಿ ವೃತ್ತಿಯನ್ನು ಮಾಡಲು ಬಯಸುತ್ತಾನೆ.
ಅರ್ಯನ್‌ ಆಗಾಗ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಕಚೇರಿಯ ಹೊರಗೆ ಕಾಣಿಸಿಕೊಂಡಿದ್ದಾನೆ.

57

ದಿ ಲಯನ್ ಕಿಂಗ್ ಚಿತ್ರದ ಹಿಂದಿ ರೀಮೇಕ್ ಗಾಗಿ ಅರ್ಯನ್‌  ಸಿಂಬಾ ಪಾತ್ರಕ್ಕಾಗಿ ತನ್ನ  ಧ್ವನಿಯನ್ನು ನೀಡಿದ್ದಾನೆ. ಅದೇ ಸಮಯದಲ್ಲಿ, ಅಬ್ರಾಮ್ ಪ್ರಸ್ತುತ ಮನೆಯಲ್ಲಿ ಸಮಯ ಕಳೆಯುತ್ತಿದ್ದಾನೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಮುಚ್ಚಿರುವ ಶಾಲೆಗಳು ಇನ್ನೂ ತೆರೆದಿಲ್ಲ.

https://kannada.asianetnews.com/gallery/cine-world/shah-rukh-khan-son-aryan-khan-fun-with-brother-abram-khan-dpl-qkv70s
 

67

ಮುಂಬರುವ ದಿನಗಳಲ್ಲಿ ಶಾರುಖ್‌ ಪಠಾಣ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಶಾರುಖ್ ಕೊನೆ ಬಾರಿಗೆ  2018ರ ಜೀರೋ ಸಿನಿಮಾದಲ್ಲಿ ಕೆಲಸ ಮಾಡಿದ್ದರು. ಅಂದಿನಿಂದ ಅವರ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ. ಬಹಳ ಸಮಯದಿಂದ ಒಳ್ಳೆಯ ಸ್ಕ್ರಿಪ್ಟ್‌ಗಾಗಿ ಕಾಯುತ್ತಿದ್ದ ಅವರು ಪಠಾಣ್ ಚಿತ್ರಕ್ಕೆ ಸಹಿ ಹಾಕಿದರು. 

77

ಈ ಸಿನಿಮಾದಲ್ಲಿ ಅವರೊಂದಿಗೆ ದೀಪಿಕಾ ಪಡುಕೋಣೆ (Deepika Padukone) ಪ್ರಮುಖ ಪಾತ್ರದಲ್ಲಿದ್ದಾರೆ. ಶಾರುಖ್ ಅವರ ಕಮ್‌ ಬ್ಯಾಕ್‌ ಫಿಲ್ಮ್‌ ಪಠಾಣ್ ಬಿಡುಗಡೆ ದಿನಾಂಕಕ್ಕಾಗಿ ಅಭಿಮಾನಿಗಳು ಕಾತುರದಿಂದ  ಕಾಯುತ್ತಿದ್ದಾರೆ. ವರದಿಗಳ ಪ್ರಕಾರ, ಈ ಚಿತ್ರವನ್ನು ಮುಂದಿನ ವರ್ಷದ ಮೊದಲಾರ್ಧದ ನಂತರ ಬಿಡುಗಡೆ ಮಾಡಬಹುದು.

click me!

Recommended Stories