ಸಿಕ್ಕಾಪಟ್ಟೆ ಸುದ್ದಿಯಾದ ಸುಶಾಂತ್ ಮಾಜಿ ಗೆಳತಿ ಬಿಗ್‌ಬಾಸ್‌ಗೆ: ರಿಯಾ ಸಂಭಾವನೆ ?

First Published | Sep 30, 2021, 2:39 PM IST
  • ಸುಶಾಂತ್ ಸಾವಿನಿಂದ ಸುದ್ದಿಯಾದ ನಟನ ಮಾಜಿ ಗೆಳತಿ
  • ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡ್ತಿರೋ ರಿಯಾ ಚಕ್ರರ್ತಿ
  • ನಟಿ ಪಡೆಯೋ ಸಂಭಾವನೆ ಎಷ್ಟು ಗೊತ್ತಾ ?
Rhea Chakraborty Offered Whopping Amount for Salman Khans Bigg Boss 15 dpl

ನಟಿ ರಿಯಾ ಚಕ್ರವರ್ತಿ(Rhea Chakraborty) ಈ ವಾರದ ಆರಂಭದಲ್ಲಿ ಅಂಧೇರಿ ಸ್ಟುಡಿಯೋದಲ್ಲಿ ಕಾಣಿಸಿಕೊಂಡರು. ಅವರು ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್(Salman Khan) ನಡೆಸಿಕೊಡುವ ಕಾರ್ಯಕ್ರಮವಾದ ಬಿಗ್ ಬಾಸ್ 15 ನಲ್ಲಿ ಕಾಣಿಸಿಕೊಳ್ಳಬಹುದು ಎಂಬ ಸುದ್ದಿ ಈಗ ಜೋರಾಗಿದೆ.

Rhea Chakraborty Offered Whopping Amount for Salman Khans Bigg Boss 15 dpl

ಈ ಹಿಂದೆಯೇ ನಟ ಸುಶಾಂತ್ ಸಿಂಗ್ ರಜಪೂತ್‌ನ ಇಬ್ಬರು ಮಾಜಿ ಗೆಳತಿಯರಾದ ಅಂಕಿತಾ ಲೋಖಂಡೆ ಹಾಗೂ ರಿಯಾ ಚಕ್ರವರ್ತಿ ಬಿಗ್‌ಬಾಸ್ ಮನೆಯೊಳಗೆ ಬರುತ್ತಾರೆ ಎಂಬ ಸುದ್ದಿ ವೈರಲ್ ಅಗಿತ್ತು.

Tap to resize

ಹೌಸ್‌ಮೇಟ್‌ಗಳಲ್ಲಿ ಒಬ್ಬರಾಗಲಿರುವ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ಡಾಲ್‌ಜಿಯತ್ ಕೌರ್ ಸೋಮವಾರ ಅದೇ ಸ್ಟುಡಿಯೋದಲ್ಲಿ ಕಾಣಿಸಿಕೊಂಡ ನಂತರ ಜನಪ್ರಿಯ ರಿಯಾಲಿಟಿ ಶೋನಲ್ಲಿ ರಿಯಾ ಕಾಣಿಸಿಕೊಳ್ಳುವ ಬಗ್ಗೆ ಚರ್ಚೆ ಇನ್ನೂ ಜೋರಾಗಿದೆ.

ರಿಯಾ ಹೌಸ್‌ಮೇಟ್ ಆಗಿದ್ದಾರಾ ಅಥವಾ ಅವರು ಶನಿವಾರ ಕಾರ್ಯಕ್ರಮದ ಆರಂಭಿಕ ರಾತ್ರಿಯಲ್ಲಿ ಪ್ರದರ್ಶನ ನೀಡುತ್ತಾರೆಯೇ ಮೊದಲ ಪ್ರದರ್ಶನ ನೀಡಬಹುದಾದ ಪ್ರಕಾಶ್ ಮತ್ತು ಕೌರ್ ಅವರು ಸ್ಟುಡಿಯೋದಲ್ಲಿ ಇದ್ದದ್ದು ಕಾಕತಾಳೀಯವೋ ಎಂಬುದು ಅಸ್ಪಷ್ಟ.

ಶೋನಲ್ಲಿ ಭಾಗವಹಿಸುವುದಕ್ಕಾಗಿ ಚೆಹ್ರೆ ನಟಿಗೆ ವಾರಕ್ಕೆ 35 ಲಕ್ಷ ರೂಪಾಯಿಗಳನ್ನು ನೀಡಲಾಗಿದೆಯೆಂದು ಹೇಳಲಾಗಿದೆ. ಆದರೂ ಸದ್ಯಕ್ಕೆ ಯಾವುದನ್ನೂ ದೃಢಪಡಿಸಲಾಗಿಲ್ಲ.

ಬಿಗ್ ಬಾಸ್ 13 ರ ವಿಜೇತರಾಗಿ ಹೊರಹೊಮ್ಮಿದ ನಟ ಸಿದ್ಧಾರ್ಥ್ ಶುಕ್ಲಾ ಅವರು ಕಾರ್ಯಕ್ರಮದಲ್ಲಿ ಎರಡು ವಾರ ಭಾಗವಹಿಸಿ ವಾಸ್ತವ್ಯ ಮಾಡಿದ್ದಕ್ಕೆ ಸುಮಾರು 35-40 ಲಕ್ಷ ರೂಪಾಯಿಗಳನ್ನು ಪಡೆದರು ಎಂದು ವರದಿಯಾಗಿದೆ.

ರಿಯಾಲಿಟಿ ಶೋ ಬಿಗ್ ಬಾಸ್ ನ 15 ನೇ ಸೀಸನ್ ಅಕ್ಟೋಬರ್ 2 ರಿಂದ ಆರಂಭವಾಗಲಿದ್ದು ಶಮಿತಾ ಶೆಟ್ಟಿ, ನಿಶಾಂತ್ ಭಟ್, ಡೊನಾಲ್ ಬಿಶ್ತ್ ಮತ್ತು ಪ್ರತೀಕ್ ಸೆಹಜ್ಪಾಲ್ ಅವರಂತಹ ಕೆಲವು ಹೆಸರುಗಳನ್ನು ಈಗಾಗಲೇ ದೃಢಪಡಿಸಲಾಗಿದೆ ಎನ್ನಲಾಗುತ್ತಿದೆ.

ಸೀಸನ್ ಗೆ ಸ್ಪರ್ಧಿಗಳ ಸಂಪೂರ್ಣ ಪಟ್ಟಿ ಇನ್ನೂ ಬಹಿರಂಗವಾಗಿಲ್ಲ. ಕರಣ್ ಕುಂದ್ರಾದಿಂದ ನಿಧಿ ಭಾನುಶಾಲಿಯವರೆಗೆ, ಈ ವರ್ಷದ ಶೋ ಸಂಭಾವ್ಯ ಬಿಬಿ ಸ್ಪರ್ಧಿಗಳಾಗಿ ಹಲವಾರು ಸೆಲೆಬ್ರಿಟಿ ಹೆಸರುಗಳು ಚರ್ಚೆಯಲ್ಲಿದೆ.

Latest Videos

click me!