Aryan Khan Drug Case: ಸಲ್ಮಾನ್ ಸಿನಿಮಾದ ಮೇಲೂ ಪರಿಣಾಮ !

First Published | Oct 20, 2021, 7:57 PM IST

ಶಾರುಖ್ ಖಾನ್ (Shah Rukh Khan) ಪುತ್ರ  ಆರ್ಯನ್ ಖಾನ್ (Aryan Khan)  ಡ್ರಗ್ಸ್ (Drug) ಪ್ರಕರಣದಿಂದಾಗಿ ಸದ್ಯ ಆರ್ಥರ್ ರೋಡ್ ಜೈಲಿನಲ್ಲಿ ಇದ್ದಾನೆ. ಈ ಕಾರಣದಿಂದ, ಶಾರುಖ್‌ ಅವರು ತಮ್ಮ ಮುಂಬರುವ ಚಿತ್ರಗಳ ಚಿತ್ರೀಕರಣವನ್ನು ನಿಲ್ಲಿಸಿದ್ದಾರೆ. ಆದರೆ ಈಗದು ಸಲ್ಮಾನ್ ಖಾನ್  (Salman Khan) ಅವರ ಟೈಗರ್ 3 (Tiger 3) ಸಿನಿಮಾದ ಮೇಲೂ ಪರಿಣಾಮ ಬೀರುತ್ತಿದೆ. ಶಾರುಖ್ ಖಾನ್ ಫಿಲ್ಮ್ ಪಠಾಣ್ ಮಾತ್ರವಲ್ಲದೆ ಸಲ್ಮಾನ್ ಖಾನ್ ಅವರ ಟೈಗರ್ 3 ಚಿತ್ರೀಕರಣ ಆರ್ಯನ್ ಖಾನ್ ಬಂಧನದಿಂದಾಗಿ ವಿಳಂಬವಾಗಿದೆ ಎಂದು ವರದಿಗಳು ಹೇಳುತ್ತಿವೆ. ಕಾರಣವೇನು? ಮುಂದೆ ಓದಿ.

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಿಂದಾಗಿ ಸದ್ಯ ಆರ್ಥರ್ (Arthur Jail) ರೋಡ್ ಜೈಲಿನಲ್ಲಿ ಇದ್ದಾನೆ. ಅವನ ಜಾಮೀನು ಅರ್ಜಿಯ ವಿಚಾರಣೆ  ಅಕ್ಟೋಬರ್ 20 ಬುಧವಾರ ನಡೆಯಲಿದೆ. ಜಾಮೀನು ಸಿಗಲಿದೆಯೋ ಇಲ್ಲವೋ ಎಂಬ ವಿಷಯ ಇಂದು ನಿರ್ಧಾರವಾಗಲಿದೆ. 

ಈ ನಡುವೆ  ಶಾರುಖ್ ತನ್ನ ಮಗ ಜೈಲಿನಲ್ಲಿರುವುದರಿಂದ ತನ್ನ ಮುಂಬರುವ ಸಿನಿಮಾದ ಸೂಟಿಂಗ್‌ (Shooting) ನಿಲ್ಲಿಸಿದ್ದಾರೆ ಎಂಬ ಸುದ್ದಿಯಿತ್ತು, ಆದರೆ ಈಗ ಅದು ಸಲ್ಮಾನ್ ಖಾನ್ ಅವರ ಟೈಗರ್‌ 3 (Tigor3) ಸಿನಿಮಾದ ಮೇಲೆ ಕೂಡ ಪರಿಣಾಮ ಬೀರುತ್ತಿದೆ ಎಂದು ವರದಿಯಾಗಿದೆ. ಇದು ಏಕೆ?

Tap to resize

ಸಲ್ಮಾನ್ ಖಾನ್ ವಿದೇಶದಲ್ಲಿ ಚಿತ್ರೀಕರಣ ಮುಗಿಸಿ ಮರಳಿದ್ದಾರೆ. ಮೂರು ದೇಶಗಳಲ್ಲಿ ಟೈಗರ್ 3 ಶೂಟಿಂಗ್‌ ಮುಗಿಸಿ ಸಲ್ಮಾನ್ ಇತ್ತೀಚೆಗೆ ದೇಶಕ್ಕೆ ವಾಪಸ್ಸಾಗಿದ್ದಾರೆ. ಅವರು ರಷ್ಯಾ (Russia), ಆಸ್ಟ್ರಿಯಾದಲ್ಲಿ ಚಿತ್ರೀಕರಿಸಿದ್ದರು. ನಂತರ ಮುಂಬೈನಲ್ಲಿ ಕೆಲವು ಫೈಟಿಂಗ್‌ (Fighting) ದೃಶ್ಯಗಳನ್ನು ಚಿತ್ರೀಕರಿಸಲಾಯಿತು. ಇದಕ್ಕಾಗಿ ನಗರದ ವಿವಿಧ ಸ್ಥಳಗಳಲ್ಲಿ ಸೆಟ್‌ಗಳನ್ನು ತಯಾರಿಸಲಾಯಿತು.

ಸಲ್ಮಾನ್ ಖಾನ್ ಪಠಾಣ್‌ನಲ್ಲಿ ಒಂದು ಮುಖ್ಯಪಾತ್ರವನ್ನು ಮಾಡಬೇಕಿತ್ತು ಆದರೆ ಈಗ ಅವರಿಗೆ ಅದನ್ನು ಶೂಟ್‌ ಮಾಡಲು ಸಾಧ್ಯವಾಗಲಿಲ್ಲ, ಈ ಕಾರಣದಿಂದಾಗಿ ಅವರ ಸಿನಿಮಾ ಅರ್ಧಕ್ಕೆ ನಿಂತಿದೆ.

ವರದಿಗಳ ಪ್ರಕಾರ, ಶಾರುಖ್ ಅವರ ಪಠಾಣ್ ಚಿತ್ರದ ನಂತರ ಸಲ್ಮಾನ್ ಅವರ ಟೈಗರ್ 3 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಶಾರುಖ್ ಚಿತ್ರದಲ್ಲಿ ಸಲ್ಮಾನ್ ಅತಿಥಿ ಪಾತ್ರದಲ್ಲಿ (Guest Appearance) ಕಾಣಿಸಿಕೊಳ್ಳುತ್ತಾರೆ. ಚಿತ್ರದ ಕೊನೆಯಲ್ಲಿ, ಸಲ್ಮಾನ್ ತನ್ನ ಟೈಗರ್ 3 ಲುಕ್ ಅನ್ನು ತೋರಿಸುತ್ತಾರೆ ಮತ್ತು ನಂತರ ಚಿತ್ರವನ್ನು ಮುಂದಕ್ಕೆ ತೆಗೆದುಕೊಳ್ಳಲಾಗುತ್ತದೆ. 

ಈ ಎರಡೂ ಚಿತ್ರಗಳು ಯಶ್ ರಾಜ್ ಬ್ಯಾನರ್ (Yash Raj Banner) ಅಡಿಯಲ್ಲಿ ತಯಾರಾಗುತ್ತಿವೆ.. ಶಾರುಖ್ ಅವರ ಪಠಾಣ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ (Deepika Padukone)  ಮತ್ತು ಜಾನ್ ಅಬ್ರಹಾಂ (John Abraham) ಕಾಣಿಸಿಕೊಂಡರೆ, ಸಲ್ಮಾನ್ ಅವರ ಟೈಗರ್ 3 ಚಿತ್ರದಲ್ಲಿ ಕತ್ರಿನಾ ಕೈಫ್ (Katrina Kaif) ಮತ್ತು ಇಮ್ರಾನ್ ಹಶ್ಮಿ (Imran Hashmi) ಕಾಣಿಸಿಕೊಳ್ಳಲಿದ್ದಾರೆ. 

ಶಾರುಖ್ ಕೂಡ ಈ ತಿಂಗಳು ಶೂಟಿಂಗ್ ಗಾಗಿ ಸ್ಪೇನ್‌ (Spain)ಗೆ ಹೋಗಬೇಕಿತ್ತು, ಆದರೆ ಆವರ ಮಗನ ಬಂಧನದಿಂದಾಗಿ, ಶಾರುಖ್‌ ತಮ್ಮ ಪ್ರೋಗ್ರಾಂಗಳನ್ನು ರದ್ದುಗೊಳಿಸಿದರು. ಆರ್ಯನ್ ಗೆ ಜಾಮೀನು ಸಿಗುವವರೆಗೆ ಅವರು ಯಾವುದೇ ಪ್ರಾಜೆಕ್ಟ್ ಗಾಗಿ ಶೂಟ್ ಮಾಡುವುದಿಲ್ಲ ಎಂದು ವರದಿಯಾಗಿದೆ.

Latest Videos

click me!