ಸಮಂತಾ ಫೇವರೇಟ್‌ ಹೀರೋಗೆ ಆಕೆಯ ಜೊತೆಗೇ ನಟಿಸೋ ಆಸೆ: ಸ್ಯಾಮ್ ಲಕ್ಕಿ

First Published | Sep 27, 2021, 4:37 PM IST
  • ಸಮಂತಾಗೆ ಬಾಲಿವುಡ್‌ನ ಫೇವರೇಟ್ ಹೀರೋ ಇವರು
  • ಸಮಂತಾ ಜೊತೆ ನಟಿಸ್ಬೇಕು ಎಂದ ಶಾಹೀದ್
  • ನೆಚ್ಚಿನ ಹೀರೋನೇ ಹೀಗಂದ್ರೆ ಸಮಂತಾ ಲಕ್ಕೀ ಅಲ್ವಾ ಹೇಳಿ ?

ಮನೋಜ್ ಬಾಜಪೇಯಿ ಪ್ರಮುಖ ಪಾತ್ರದಲ್ಲಿರುವ ದಿ ಫ್ಯಾಮಿಲಿ ಮ್ಯಾನ್ 2 ನಲ್ಲಿ ಸಮಂತಾ ಅಕ್ಕಿನೇನಿ ರಾಜಿಯ ಪಾತ್ರ ಭಾರೀ ಮೆಚ್ಚುಗೆ ಗಳಿಸಿತು.

ರೊಮ್ಯಾಂಟಿಕ್ ಹೀರೋಯಿನ್ ಆಗಿ ಮಾತ್ರ ನಟಿಸಿದ್ದ ಸಮಂತಾ ಪರಿವರ್ತನೆಯ ಪಾತ್ರ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರಶಂಸೆಯನ್ನು ಪಡೆಯಿತು.

Tap to resize

ಬಾಲಿವುಡ್ ನಟ ಶಾಹಿದ್ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಸರಣಿಯಲ್ಲಿ ಸಮಂತಾ ಅಭಿನಯಕ್ಕಾಗಿ ನಟಿಯನ್ನು ಹೊಗಳಿದ್ದಾರೆ. ಅವರು ಎಂದಾದರೂ ಸಮಂತಾ ಜೊತೆ ಕೆಲಸ ಮಾಡಲು ಇಷ್ಟಪಡುತ್ತಾರೆ ಎಂದು ನಟ ತಿಳಿಸಿದ್ದಾರೆ.

ಅಭಿಮಾನಿಯೊಬ್ಬರು ಫ್ಯಾಮಿಲಿ ಮ್ಯಾನ್ 2ನಲ್ಲಿ ಸಮಂತಾ(Samantha Akkineni) ಅಭಿನಯದ ಬಗ್ಗೆ ಕೆಲವು ಮಾತುಗಳನ್ನು ಹೇಳಲು ಶಾಹಿದ್ ಕಪೂರ್ ಅವರನ್ನು ಕೇಳಿದಾಗ ನಟ ಉತ್ತರಿಸಿದ್ದಾರೆ.

ಸಾಯಿ ಪಲ್ಲವಿ ಜೊತೆ ನಾಗಚೈತನ್ಯ ಗ್ರ್ಯಾಂಡ್ ಡಿನ್ನರ್: ಸಮಂತಾ ಮಿಸ್

ಸಿರೀಸ್‌ನಲ್ಲಿ ಸಮಂತಾ ಅಭಿನಯ ಮೆಚ್ಚಿದೆ. ಅವರೊಂದಿಗೆ ಸ್ವಲ್ಪ ಕೆಲಸ ಮಾಡಲು ಇಷ್ಟಪಡುತ್ತೇನೆ ಎಂದು ಉತ್ತರಿಸಿದ್ದಾರೆ. ಸದ್ಯ ಈ ಟ್ವೀಟ್ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.

ಶಾಹಿದ್ ಅವರ ಒಳ್ಳೆಯ ಮಾತುಗಳಿಗೆ ಅವರು ಏನು ಪ್ರತಿಕ್ರಿಯಿಸುತ್ತಾರೆ ಎಂದು ನೋಡಲು ಸಮಂತಾ ಅವರ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ.

ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯ ಮೂಲಕ ಹಿಂದಿ ಸಿನಿಮಾ ಜಗತ್ತಿಗೆ ಸಮಂತಾ ಪ್ರವೇಶ ಪಡೆದಿದ್ದಲ್ಲದೆ ಮೊದಲ ಎಂಟ್ರಿಯಲ್ಲೇ ಸಿಕ್ಕಾಪಟ್ಟೆ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಇತ್ತೀಚೆಗೆ, ಮೆಲ್ಬೋರ್ನ್‌ನ ಭಾರತೀಯ ಚಲನಚಿತ್ರೋತ್ಸವದಲ್ಲಿ ಸಮಂತಾ ಸ್ತ್ರೀ (ಸಿರೀಸ್) ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ಪ್ರಶಸ್ತಿ ಗೆದ್ದರು

ಶಾಹಿದ್ ಕಪೂರ್ ದಿ ಫ್ಯಾಮಿಲಿ ಮ್ಯಾನ್ ಸರಣಿ ನಿರ್ದೇಶಕ ರಾಜ್ ಮತ್ತು ಡಿಕೆ ಜೊತೆ ಸನ್ನಿ ಹೆಸರಿನ ಹೊಸ ವೆಬ್ ಸರಣಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ರಾಶಿ ಖನ್ನಾ, ರೆಜಿನಾ ಕಸ್ಸಂದ್ರ ಮತ್ತು ವಿಜಯ್ ಸೇತುಪತಿ ನಟಿಸಿದ್ದಾರೆ. ಇನ್ನೂ ಹೆಸರಿಡದ ವೆಬ್ ಸರಣಿಯು ಥ್ರಿಲ್ಲರ್-ಕಾಮಿಡಿಯಾಗಿದ್ದು ಅದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ.

Latest Videos

click me!