ಕಳೆದ ಕೆಲವು ತಿಂಗಳಿಂದ ಆಲಿಯಾ ಮತ್ತು ರಣಬೀರ್ ತಮ್ಮ ಬಹುನಿರೀಕ್ಷಿತ ಚಿತ್ರ ಬ್ರಹ್ಮಾಸ್ತ್ರ ಬಿಡುಗಡೆಯ ನಂತರ ಮದುವೆಯಾಗುತ್ತಾರೆ ಎಂಬ ಸುದ್ದಿ ಇತ್ತು . ಕಳೆದ ವರ್ಷ ಡಿಸೆಂಬರ್ ನಲ್ಲಿ ಚಲನಚಿತ್ರ ವಿಮರ್ಶಕ ರಾಜೀವ್ ಮಸಂದ್ ಜೊತೆ ಸಂದರ್ಶನವೊಂದರಲ್ಲಿ ಮಾತನಾಡಿ, ರಣಬೀರ್ ತನ್ನ ಮದುವೆಯ ಯೋಜನೆಗಳ ಬಗ್ಗೆ ಹೇಳಿದ್ದರು. ಕೊರೊನಾ ಬರದಿದ್ದರೆ ಈ ಜೋಡಿ ಈಗಾಗಲೇ ಮದುವೆಯಾಗಿರುತ್ತಿದ್ದರು ಎಂದೂ ಹೇಳಲಾಗುತ್ತಿದೆ.