ಬಾಲಿವುಡ್ ನಟಿ ಶೋಭಿತಾ ರಾನ(Shobhitha Rana) ಬಿಕಿನಿ ಫೋಟೋಗಳು ವೈರಲ್ ಆಗಿವೆ. ಮಾಲ್ಡೀವ್ಸ್‌ನಲ್ಲಿ ವೆರೈಟಿ ಸ್ಟೈಲಿಷ್ ಬಿಕಿನಿಯಲ್ಲಿ ವೆಕೇಷನ್ ಎಂಜಾಯ್ ಮಾಡಿದ ಫೋಟೋಗಳನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.
ಬಾಹುಬಲಿ ಕಳಿಸಿದ ಬಿರಿಯಾನಿ ಸೂಪರ್ ಎಂದು ಬೇಬೋ
ಸೂಪರ್ ಪ್ರಿಂಟೆಡ್ ಬಿಕಿನಿ ಧರಿಸಿ ಬ್ರೇಕ್ ಫಾಸ್ಟ್ ಎಂಜಾಯ್ ಮಾಡುತ್ತಿರುವ ನಟಿಯ ಪೋಟೋ ನೋಡಿ ಖುಷಿಯಾಗಿದ್ದಾರೆ ಅಭಿಮಾನಿಗಳು. ಸ್ಕಿನ್ ಫೀಟ್ ಉಡುಪಿನಲ್ಲಿ ಸೂಪರ್ ಆಗಿ ಕಾಣಿಸಿದ್ದಾರೆ
ಹಿಂದಿ ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿದ ನಂತರ ಶೋಭಿತಾ ರಾನ ಟಾಲಿವುಡ್‌ಗೆ ಮರಳಿದ್ದಾರೆ. ಏಪ್ರಿಲ್ ನಲ್ಲಿ ಪ್ರಾರಂಭವಾದ ಗಿರೀಶಯ್ಯ ನಿರ್ದೇಶನದ ಮುಂಬರುವ ವೈಷ್ಣವ್ ತೇಜ್-ಕೇತಿಕಾ ಶರ್ಮಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ರೊಮ್ಯಾಂಟಿಕ್ ಫ್ಯಾಮಿಲಿ ಸಿನಿಮಾ ತಂಡ ಸೇರಿಕೊಂಡ ನಟಿ, ಅವಕಾಶದಿಂದ ಹರ್ಷಗೊಂಡಿದ್ದಾರೆ. ಇಷ್ಟು ದೊಡ್ಡ ಯೋಜನೆಯ ಭಾಗವಾಗಲು ನನಗೆ ತುಂಬಾ ಖುಷಿಯಾಗಿದೆ. ಯುವ ಮತ್ತು ಪ್ರತಿಭಾವಂತ ತಂಡದೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
ದಕ್ಷಿಣದಲ್ಲಿ ಕೆಲಸ ಮಾಡುವ ಬಗ್ಗೆ ತಾನು ಆರಂಭದಲ್ಲಿ ಡೌಟ್ ಹೊಂದಿದ್ದೆ ಎಂದು ನಟಿ ಬಹಿರಂಗಪಡಿಸಿದ್ದಾರೆ. ನಾನು ಬಾಲಿವುಡ್‌ನಲ್ಲಿ ಕೆಲಸ ಮಾಡಲು ಉತ್ಸುಕಳಾಗಿದ್ದೆ. ಅಲ್ಲಿ ನಾನು ಚೆನ್ನಾಗಿ ಆರಂಭಿಸಿದ್ದೇನೆ. ಆದರೆ ನಾನು ದಕ್ಷಿಣದಿಂದಲೂ ಅವಕಾಶಗಳನ್ನು ಪಡೆಯುತ್ತಿದ್ದೇನೆ ಎಂದಿದ್ದಾರೆ.
ಹಾಗಾಗಿ ನನ್ನ ಪರಿಧಿಯನ್ನು ವಿಸ್ತರಿಸಲು ನಾನು ಯೋಚಿಸಿದೆ. ಉದ್ಯಮದ ಭಾಗವಾಗಲು ಇದು ಉತ್ತಮ ಸಮಯ ಎಂದು ನಾನು ಭಾವಿಸುತ್ತೇನೆ ಎಂದು ಶೋಭಿತಾ ಹೇಳುತ್ತಾರೆ. ಸದ್ಯ ಚಿತ್ರದ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯುತ್ತಿದೆ.