Rock star ಸೇರಿದಂತೆ ಈ ಸೂಪರ್‌ಹಿಟ್ ಚಿತ್ರಗಳನ್ನು ತಿರಸ್ಕರಿಸಿದ Shahid Kapoor
First Published | Apr 21, 2022, 5:29 PM ISTಶಾಹಿದ್ ಕಪೂರ್ (Shahid Kapoor) ಬಾಲಿವುಡ್‌ನ ಅತ್ಯುತ್ತಮ ನಟರಲ್ಲಿ ಒಬ್ಬರು. ಅವರ ಮುಂಬರುವ ಚಿತ್ರ ಜರ್ಸಿ ಟ್ರೈಲರ್ ಬಿಡುಗಡೆಯಾಗಿದೆ. ಶಾಹಿದ್ ಕಪೂರ್ ಇದರಲ್ಲಿ ಅದ್ಭುತ ನಟನೆಯನ್ನು ಮಾಡಿದ್ದಾರೆ. ಮೂರು ವರ್ಷಗಳಿಂದ ಹಿರಿತೆರೆಯಿಂದ ದೂರ ಉಳಿದಿರುವ ಶಾಹಿದ್ ಅಭಿಮಾನಿಗಳು ಜೆರ್ಸಿ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ. ನಟ ಕೊನೆಯದಾಗಿ ಕಬೀರ್ ಸಿಂಗ್ ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಅದ್ಭುತ ಪ್ರದರ್ಶನ ನೀಡಿತು. ಕೆರಿಯರ್ ನಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದ ಶಾಹಿದ್ ಕೆಲವು ಚಿತ್ರಗಳನ್ನು ತಿರಸ್ಕರಿಸದೇ ಇದ್ದಿದ್ದರೆ ಅವರ ಕೆರಿಯರ್ ಗ್ರಾಫ್ ಬೇರೆಯಾಗುತ್ತಿತ್ತು. ಅವರು ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಎಂದು ಸಾಬೀತುಪಡಿಸಿದ ಅನೇಕ ಚಲನಚಿತ್ರಗಳನ್ನು ಮಾಡಲು ನಿರಾಕರಿಸಿದರು.