ಶಾರುಖ್ ಪುತ್ರನ ಜತೆ ಕಾಜೋಲ್ ಮಗಳ ಮ್ಯಾರೇಜ್! ಸುದ್ದಿ ಬಂದಿದ್ದೆಲ್ಲಿಂದ?

First Published | Oct 21, 2020, 12:45 AM IST

ಮುಂಬೈ(ಅ. 21) ಇಂಥ ಸುದ್ದಿಗಳು ಅದು ಎಲ್ಲಿಂದ ಹುಟ್ಟಿಕೊಳ್ಳುತ್ತವೆಯೋ ಗೊತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಕೇಳಬೇಕೆ? ಕ್ಷಣಮಾತ್ರದಲ್ಲಿ ವೈರಲ್ ಆಗಿ ಬಿಡುತ್ತವೆ. ಇಲ್ಲಿ ಆದ ಕತೆಯನ್ನು ವಿವರವಾಗಿ ಹೇಳುತ್ತೇವೆ ಕೇಳಿ!

ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಮತ್ತು ನಜಿ ಕಾಜೋಲ್‌ ಪುತ್ರಿ ನ್ಯಾಸಾ ದೇವ್‌ಗನ್‌ ಅವರ ಮದುವೆ ವಿಷಯ ದೊಡ್ಡ ಸದ್ದು ಮಾಡಿದೆ.
ಶಾರುಖ ಮತ್ತು ಕಾಜೋಲ್ ಬಾಲಿವುಡ್ ನ ಹಿಟ್ ಜೋಡಿ. ಅವರ ಅಭಿನಯದ ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ' (DDLJ) 25 ವರ್ಷ ಪೂರೈಸಿದ ಕಾರಣ ಇಬ್ಬರು ಟ್ರೆಂಡ್ ಆಗಿದ್ದರು.
Tap to resize

ಶಾರುಖ್‌ ಖಾನ್‌ ಮಗ ಆರ್ಯನ್‌ ಕಾಜೋಲ್‌ ಪುತ್ರಿ ನ್ಯಾಸಾ ದೇವ್‌ಗನ್‌ ಜೊತೆ ಓಡಿ ಹೋಗಿ ಮದುವೆಯಾದರೆ ಅದಕ್ಕೆ ಕಾಜೋಲ್‌ ಪ್ರತಿಕ್ರಿಯೆ ಏನಾಗಿರುತ್ತದೆ?
ಹೌದು ... ಇಂಥದ್ದೊಂದು ಪ್ರಶ್ನೆ 2007ರಲ್ಲಿಯೇ ಕಾಜೋಲ್‌ಗೆ ಸಂದರ್ಶನದಲ್ಲಿ ಎದುರಾಗಿತ್ತು. ಕರಣ್‌ ಜೋಹರ್‌ ಅವರ 'ಕಾಫಿ ವಿಥ್‌ ಕರಣ್‌' ಕಾರ್ಯಕ್ರಮದಲ್ಲಿ ಕೇಳಿಬಂದ ಈ ರ‍್ಯಾಪಿಡ್‌ ಫೈರ್‌ ಪ್ರಶ್ನೆ ಮತ್ತು ಉತ್ತರ ವೈರಲ್ ಸರಕಾಗಿದೆ.
ಕಾಜೋಲ್ ಸಹ ಅಷ್ಟೆ ನಾಜೂಕಾಗಿ ಉತ್ತರ ನೀಡಿ ಸಂಬಾಳಿಸಿದ್ದರು. ಇದಕ್ಕೆ ನಂತರದಲ್ಲಿ ಕಿಂಗ್ ಖಾನ್ ಸಹ ಪ್ರತಿಕ್ರಿಯೆ ನೀಡಿದ್ದರು.
ಶೋನಲ್ಲಿ ಕಾಜೋಲ್, ಶಾರುಖ್ ಮತ್ತು ರಾಣಿ ಮುಖರ್ಜಿ ಇದ್ದರು.
ಒಟ್ಟಿನಲ್ಲಿ ಸಿನಿಮಾವೊಂದರ ಯಶಸ್ಸನ್ನು ಮಾತನಾಡುವ ಸಂದರ್ಭ ಇಬ್ಬರು ಸ್ಟಾರ್ ನಟರ ನಡುವೆ ಸೋಶಿಯಲ್ ಮೀಡಿಯಾ ನೆಂಟಸ್ತನ ಬೆಳೆಸಿದೆ.
ಇಬ್ಬರ ನಡುವೆ ಅಂಥ ಗೆಳೆತನ ಇಲ್ಲವಾದರೂ ಸುದ್ದಿಯಾಗಿದೆ.
ಕಾಫಿ ವಿತ್ ಕರಣ್ ಶೋ ನಲ್ಲಿ ಕೇಳುವ ಪ್ರಶ್ನೆಗಳು ಮತ್ತು ಉತ್ತರ ಆಗಾಗ ವೈರಲ್ ಆಗುತ್ತಿರುವುದು ಸಾಮಾನ್ಯವಾಗಿದೆ

Latest Videos

click me!