ಐಷರಾಮಿ ಹಡಗಿನಲ್ಲಿ ಡ್ರಗ್ಸ್ ರೇವ್ ಪಾರ್ಟಿ: ಶಾರೂಖ್ ಮಗನ ವಿಚಾರಣೆ

First Published | Oct 3, 2021, 11:09 AM IST
  • ಬೆಚ್ಚಿ ಬೀಳಿಸಿದ ಮುಂಬೈ ರೇವ್‌ ಪಾರ್ಟಿ ದಾಳಿ
  • ಐಷರಾಮಿ ಹಡಗಿನಲ್ಲಿ ನಡೆಯುತ್ತಿತ್ತು ಡ್ರಗ್ಸ್ ಪಾರ್ಟಿ
  • ಶಾರೂಖ್ ಖಾನ್ ಮಗನ ವಿಚಾರಣೆ

ಮುಂಬೈ ಕರಾವಳಿಯಲ್ಲಿ ಐಷರಾಮಿ ಹಡಗಿನಲ್ಲಿ ನಡೆದ ಪಾರ್ಟಿಯ ಮೇಲೆ ಎನ್ ಸಿಬಿ ದಿಢೀರ್ ದಾಳಿ ನಡೆಸಿದೆ. ಅಕ್ಟೋಬರ್ 2 ಗಾಂಧಿ ಜಯಂತಿಯಂದೇ ಘಟನೆ ನಡೆದಿದೆ. ಈ ವಿಚಾರದಲ್ಲಿ ಬಾಲಿವುಡ್ ಸ್ಟಾರ್ ನಟನ ಮಗನನ್ನು ಬಂಧಿಸಲಾಗಿದೆ ಎಂದು ಕೂಡ ಊಹಿಸಲಾಗಿತ್ತು.

ಇಂದು ಬೆಳಗ್ಗೆ ಬಾಲಿವುಡ್ ನಟನ ಮಗನ ಬಂಧನದ ಬೆಳವಣಿಗೆಯನ್ನು NCBಯ ಹಿರಿಯ ಅಧಿಕಾರಿ ದೃಢಪಡಿಸಿದ್ದಾರೆ. ಶಾರುಖ್ ಖಾನ್ ಅವರ ಮಗ ಆರ್ಯನ್ ಅವರನ್ನು NCB ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Tap to resize

ಹಿರಿಯ ಎನ್‌ಸಿಬಿ(NCB) ಅಧಿಕಾರಿ ಆತನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ತನಿಖೆಗೆ ಹತ್ತಿರವಿರುವ ಒಂದು ಮೂಲವು ಆರ್ಯನ್ ನನ್ನು ವಿಚಾರಣೆಗೆ ಕರೆದೊಯ್ದಿರುವುದನ್ನು ಬಹಿರಂಗಪಡಿಸಿದೆ.

ಆದರೆ ಬಹುಶಃ ಮಾದಕವಸ್ತುಗಳನ್ನು ಹೊಂದಿರುವುದರಲ್ಲಿ ಆರ್ಯನ್ ಖಾನ್ ಭಾಗಿಯಾಗಿಲ್ಲ ಎನ್ನಲಾಗಿದೆ. ಇದೇ ಪ್ರಕರಣದಲ್ಲಿ ಮತ್ತೊಬ್ಬ ಬಾಲಿವುಡ್ ನಟನ ಮಗನನ್ನು ಬಂಧಿಸಲಾಗಿದೆ ಎಂದು ಕೂಡ ಊಹಿಸಲಾಗಿದೆ.

ನಿನ್ನೆ ರಾತ್ರಿ ಎಎನ್‌ಐ ಟ್ವಿಟರ್‌ನಲ್ಲಿ ಈ ಸುದ್ದಿಯನ್ನು ದೃಢಪಡಿಸಲಾಗಿದೆ. ಮಹಾರಾಷ್ಟ್ರ ಮುಂಬೈನಲ್ಲಿ ಕ್ರೂಸ್‌ನಲ್ಲಿ ನಡೆದ ಪಾರ್ಟಿಯಲ್ಲಿ ನಡೆಸಿದ ದಾಳಿಯ ಸಂದರ್ಭದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಕನಿಷ್ಠ 10 ಜನರನ್ನು ಬಂಧಿಸಿದೆ ಎನ್ನಲಾಗಿತ್ತು.

ಎನ್‌ಸಿಬಿಗೆ ಹತ್ತಿರವಿರುವ ಮೂಲಗಳಿಂದ ತನಿಖಾ ಸಂಸ್ಥೆಯ ಅಧಿಕಾರಿಗಳು ಆರ್ಯನ್ ಅವರ ಫೋನ್‌ ಮೂಲಕ ಮಾದಕ ವಸ್ತುಗಳ ಬಳಕೆಯಲ್ಲಿ ಅಥವಾ ಬಳಕೆಯಲ್ಲಿ ಅವರ ನೇರ ಪಾಲ್ಗೊಳ್ಳುವಿಕೆ ಇದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Latest Videos

click me!