ಬಾಲಿವುಡ್ ಸೇರಿದಂತೆ ಸಿನಿ ಇಂಡಸ್ಟ್ರಿಯಲ್ಲಿ ಒಂದು ವಿಚ್ಚೇದನೆ ಪಕ್ಕಾ ಆಯಿತು ಎಂದಾಗ ಅಲ್ಲಿ ಪತ್ನಿಗೆ ನೀಡಲಾಗುವ ಪರಿಹಾರದ ಮೊತ್ತ ಭಾರೀ ಸುದ್ದಿಯಾಗುತ್ತದೆ. ಕಾರಣ ಭಾರೀ ದೊಡ್ಡ ಮೊತ್ತವನ್ನೇ ಸ್ಟಾರ್ ಹೀರೋಗಳು ತಮ್ಮಿಂದ ಬೇರೆಯಾಗುವ ಪತ್ನಿಗೆ ನೀಡಬೇಕಾಗಿರುತ್ತದೆ.
ಸೈಫ್ ಅಲಿ ಖಾನ್, ಅಮೀರ್ ಖಾನ್(Amir Khan) ಸೇರಿದಂತೆ ಬಹಳಷ್ಟು ಸೆಲೆಬ್ರಿಟಿಗಳು ತಾವು ವಿಚ್ಚೇದಿತರಾಗುವಾಗ ಅಬ್ಬಾ ಎನ್ನುವಷ್ಟು ದೊಡ್ಡ ಮೊತ್ತವನ್ನು ಮಾಜಿ ಪತ್ನಿಯರಿಗೆ ಕೊಟ್ಟು ದೂರವಾಗಿದ್ದಾರೆ. ಮೊದಲ ಪತ್ನಿ ಅಮೃತಾ ಸಿಂಗ್‌ಗೆ ವಿಚ್ಚೇದನೆ ಕೊಟ್ಟ ನಂತರ ಸೈಫ್ ಅಲಿ ಖಾನ್ ಬಹುತೇಕ ತಮ್ಮ ಸೇವಿಂಗ್ಸ್ ಕಳೆದುಕೊಂಡಿದ್ದರು.
ಈ ರೀತಿ ಸ್ಟಾರ್ ದಂಪತಿಗಳು ಬೇರೆಯಾದಾಗ ಪರಿಹಾರ ಮೊತ್ತ ನೀಡುವುದು ಯಾವಾಗಲೂ ಸುದ್ದಿಯಾಗುತ್ತದೆ. ಈಗ ಬಹಳಷ್ಟು ತಿಂಗಳ ಡಿವೋರ್ಸ್ ಚರ್ಚೆಯ ನಂತರ ಬೇರೆಯಾದ ಸ್ಟಾರ್ ಕಪಲ್ ಸಮಂತಾ ರುಥ್ ಪ್ರಭು ಹಾಗೂ ನಾಗಾಚೈತನ್ಯ ಅಕ್ಕಿನೇನಿ ಕೊನೆಗೂ ದಂಪತಿಗಳಾಗಿ(Couple) ಬೇರೆ ಬೇರೆಯಾಗಿದ್ದಾರೆ.
ಹೆಚ್ಚು ಯೋಚಿಸಿ ಸಮಾಲೋಚನೆಯ ನಂತರ ಚಾಯ್ ಮತ್ತು ನಾನು ನಮ್ಮ ನಮ್ಮ ದಾರಿಗಳನ್ನು ಅನುಸರಿಸಲು, ಗಂಡ ಮತ್ತು ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ಒಂದು ದಶಕದ ಸ್ನೇಹ(Friendship) ಪಡೆಯಲು ನಾವು ಅದೃಷ್ಟಶಾಲಿಗಳು. ಅದುವೇ ನಮ್ಮ ಸಂಬಂಧದ ಮೂಲವಾಗಿತ್ತು. ಅದು ನಮ್ಮ ನಡುವೆ ವಿಶೇಷ ಬಾಂಧವ್ಯವನ್ನು ಉಳಿಸಿಕೊಳ್ಳುತ್ತದೆ ಎಂದು ನಾವು ನಂಬುತ್ತೇವೆ. ಈ ಕಷ್ಟದ ಸಮಯದಲ್ಲಿ ನಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮಗಳು ನಮ್ಮನ್ನು ಬೆಂಬಲಿಸಬೇಕು. ನಾವು ಮೂವ್ ಆನ್ ಆಗಲು ಖಾಸಗಿತನವನ್ನು ನಮಗೆ ನೀಡಬೇಕೆಂದು ನಾವು ವಿನಂತಿಸುತ್ತೇವೆ ಎಂದಿದ್ದರು.
ವಿಚ್ಛೇದನದಿಂದ ಸಮಂತಾ 50 ಕೋಟಿ ಜೀವನಾಂಶವನ್ನು ಪಡೆಯುತ್ತಾರೆ ಎಂದು ಹೇಳಲಾಗಿತ್ತು. ಅದನ್ನು ಅವರು ನಿರಾಕರಿಸಿದ್ದಾರೆ. ಮೂಲವೊಂದರ ಪ್ರಕಾರ, ಸಮಂತಾಗೆ ಮದುವೆ ಒಪ್ಪಂದದ ಭಾಗವಾಗಿ 200 ಕೋಟಿಗೂ ಹೆಚ್ಚು ಆಫರ್ ನೀಡಲಾಗಿತ್ತು. ಆದರೆ ತನ್ನ ಸಂಬಂಧವನ್ನು ಕೊನೆಗೊಳಿಸಲು ಆಕೆ ಒಂದು ಪೈಸೆ ಕೂಡ ಬಯಸಿಲ್ಲ ಎನ್ನಲಾಗಿದೆ.
ಎಸಮಂತಾಗೆ ಈ ಮದುವೆಯಿಂದ ಪ್ರೀತಿ ಮತ್ತು ಒಡನಾಟ ಮಾತ್ರ ಬೇಕಿತ್ತು. ಈಗ ಅದು ಮುಗಿಯಿತು. ಅದರಿಂದ ಅವಳಿಗೆ ಬೇರೇನೂ ಅಗತ್ಯವಿಲ್ಲ ಎಂದು ಹೇಳಲಾಗಿದೆ.
ಈ ಜೋಡಿಯ ಪ್ರೇಮಕಥೆಯು 2010 ರಲ್ಲಿ ಯೆ ಮಾಯಾ ಚೆಸೇವ್ ಸೆಟ್‌ನಲ್ಲಿ ಒಟ್ಟಿಗೆ ಕೆಲಸ ಮಾಡಿದ ನಂತರ ಆರಂಭವಾಯಿತು. ನಂತರ ಅವರು 2017 ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಅವರು ಅಕ್ಟೋಬರ್ 7, 2017 ರಂದು ಗೋವಾದಲ್ಲಿ ವಿವಾಹವಾದರು.
ಇತ್ತೀಚೆಗೆ ಸಮಂತಾ ತನ್ನ ಸೋಷಿಯಲ್ ಮೀಡಿಯಾಗಳಲ್ಲಿ ತನ್ನ ಹೆಸರನ್ನು ಸಮಂತಾ ಅಕ್ಕಿನೇನಿಯಿಂದ 'S' ಎಂಬ ಅಕ್ಷರಕ್ಕೆ ಬದಲಾಯಿಸಿದಾಗ ಅವರ ಹಠಾತ್ ಬದಲಾವಣೆಯ ಬಗ್ಗೆ ಆಕೆಯ ಅಭಿಮಾನಿಗಳು ಅಚ್ಚರಿಗೊಂಡಿದ್ದರು. ಲವ್ ಸ್ಟೋರಿ(Love Story) ಸಿನಿಮಾ ಯಶಸ್ಸಿನ ಸಂಭ್ರಮದಲ್ಲಿ ಸಮಂತಾ ಗೈರಾಗಿದ್ದು ಅಮೀರ್ ಖಾನ್ ಗಾಗಿ ಚೈತನ್ಯ ಕುಟುಂಬವು ಆಯೋಜಿಸಿದ್ದ ಔತಣಕೂಟದಲ್ಲಿ ಗೈರಾಗಿದ್ದು ವಿಚ್ಚೇದನೆ ವಿಚಾರಕ್ಕೆ ಇನ್ನಷ್ಟು ಪುಷ್ಟಿ ನೀಡಿತ್ತು.